ಬೆಂಗಳೂರು : ಬಳೆ ಶಾಪ್ಗೆ ಬರುವ ಯುವತಿಯರ ಜೊತೆ ಅಸಭ್ಯ ವರ್ತನೆ ತೋರುವ ಅಂಗಡಿ ಮಾಲೀಕನನ್ನ ಮಹಿಳೆಯೋರ್ವರು ತರಾಟೆಗೆ ತೆಗೆದುಕೊಂಡ ಘಟನೆ ಕಾಡುಗೋಡಿಯ ಎಲ್ಆರ್ ರೆಡ್ಡಿ ಸರ್ಕಲ್ ಬಳಿ ಇರುವ ಬಳೆ ಶಾಪ್ನಲ್ಲಿ ನಡೆದಿದೆ.
ಬಳೆ ಶಾಪ್ಗೆ ಬರುವ ಮಹಿಳೆ, ಯುವತಿಯರ ಬಳಿ ಅಸಭ್ಯವಾಗಿ ಮಾತನಾಡಿ, ಬಳೆ ತೊಡಿಸುವ ನೆಪದಲ್ಲಿ 19, 20 ವರ್ಷದ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಂಗಡಿ ಮಾಲೀಕನನ್ನ ಸಾರ್ವಜನಿಕರ ಸಹಾಯದಿಂದ ಹೊರಗೆಳೆದು ತಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಲೀಕನ ಅಸಭ್ಯ ವರ್ತನೆ ಬಗ್ಗೆ ಈವರೆಗೆ ಮುಜುಗರದಿಂದ ಯಾವ ಹೆಣ್ಣು ಮಕ್ಕಳು ಹೇಳಿಕೊಳ್ಳದೆ ಸಹಿಸಿಕೊಂಡಿದ್ದರು. ಸದ್ಯ ಬಳೆ ಶಾಪ್ನಲ್ಲಿ ಅಸಭ್ಯ ವರ್ತನೆ ತೋರಿದ್ದ ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಮಹಿಳೆ ವಿಡೀಯೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ಅಂಗಡಿ ಮಾಲೀಕನ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕಾಡುಗೋಡಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಬಿಗ್ಬಾಸ್ : 3 ಮಂದಿ ಸೇಫ್, ಹಾಗಿದ್ರೆ ಮೊದಲ ವಾರ ದೊಡ್ಮನೆಯಿಂದ ಎಲಿಮಿನೇಟ್ ಆಗೋದ್ಯಾರು?