ಬೆಂಗಳೂರು : ಗ್ರಾಹಕರ ವಿಚಾರಕ್ಕೆ ಬಟ್ಟೆ ಅಂಗಡಿ ಮಾಲೀಕನ ಮೇಲೆ ಪಕ್ಕದ ಅಂಗಡಿ ಮಾಲೀಕ ಹಾಗೂ ಆತನ ಕಡೆಯವರು ಹಲ್ಲೆ ಮಾಡಿದ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದೆ. ಎರಡು ದಿನದ ಹಿಂದೆ ಚಿಕ್ಕಪೇಟೆ ಫ್ಲಾಜಾದ ಬಟ್ಟೆ ಅಂಗಡಿಯಲ್ಲಿ ಗಲಾಟೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಅಂಗಡಿಯಿಂದ ಗ್ರಾಹಕರು ಬೇರೆ ಅಂಗಡಿಗೆ ಹೋದ್ರು ಅಂತ ಆ ಅಂಗಡಿಯ ಮಾಲೀಕನಿಗೆ ಥಳಿಸಿದ ಆರೋಪ ಕೇಳಿಬಂದಿದ್ದು, ಇಬ್ಬರ ಮೇಲೆ ಆರು ಜನರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಕಿರಣ್ ಎಂಬಾತ ಚಿಕ್ಕಪೇಟೆ ಫ್ಲಾಜ್ನಲ್ಲಿ ಮಾರುತಿ ಅಟ್ಪೈರ್ ಎಂಬ ಬಟ್ಟೆ ಅಂಗಡಿ ನಡೆಸುತ್ತಿದ್ದ. ಸೆ.16ರಂದು ತಂದೆ ರಮೇಶ್ ಜೊತೆ ಕಿರಣ್ ಅಂಗಡಿಯಲ್ಲಿ ಗ್ರಾಹಕರಿಗೆ ಸೀರೆ ತೋರಿಸ್ತಿದ್ದ. ಈ ವೇಳೆ ಏಕಾಏಕಿ ಪಕ್ಕದ ಕಲಾನಿಕೇತನ್ ಬಟ್ಟೆ ಅಂಗಡಿ ಮಾಲೀಕ ಬಂದು ಕಿರಿಕ್ ಮಾಡಿದ್ದಾನೆ. ಬಳಿಕ ಆತನ ಕಡೆಯವರು ಸ್ಥಳದಲ್ಲಿ ಪುಂಡಾಟ ಮೆರೆದಿದ್ದಾರೆ.
ಬಟ್ಟೆ ಅಂಗಡಿಗೆ ಹೋಗಿದ್ದ ಗ್ರಾಹಕರು ಕಲೆಕ್ಷನ್ ಸರಿಯಿಲ್ಲ ಎಂದಜ ಕಿರಣ್ ಅಂಗಡಿಗೆ ಬಂದಿದ್ದರು. ಕಿರಣ್ ಅಂಗಡಿಗೆ ಗ್ರಾಹಕರು ಬಂದಿದ್ದಕ್ಕೆ ಕಲಾನಿಕೇತನ್ ಬಟ್ಟೆ ಅಂಗಡಿ ಮಾಲೀಕ ಹೈಡ್ರಾಮಾ ಸೃಸ್ಟಿಸಿದ್ದಾನೆ. ಕಿರಿಣ್ ಹಾಗೂ ಆತನ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, 6 ಜನರು ಹಲ್ಲೆ ಮಾಡಿದ್ದಾರೆ.
ಪಂಕಜ್ ಕುಮಾರ್, ಪಾರಸ್ ಲಾಲ್, ಮನೋಹರ್ ಲಾಲ್ ಸೇರಿ ಆರು ಜನರು ಹಲ್ಲೆ ನಡೆಸಿದ್ದು, ತಂದೆ-ಮಗನ ಮೇಲೆ ಮನಬಂದಂತೆ ಥಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಕಿರಿಕ್ ತೆಗೆದ ಮೆರೆದ ಕಲಾನಿಕೇತನ್ ಬಟ್ಟೆ ಅಂಗಡಿ ಮಾಲೀಕ ಸೇರಿ ಹಲ್ಲೆ ನಡೆಸಿದವರ ವಿರುದ್ದ ಸಿಟಿ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಇದನ್ನೂ ಓದಿ : ಇರಾನ್ನಲ್ಲಿ ಸಾವಿರಾರು ಪೇಜರ್ಗಳ ಸರಣಿ ಸ್ಫೋಟ – 15 ಸಾವು, 3000ಕ್ಕೂ ಹೆಚ್ಚು ಮಂದಿಗೆ ಗಾಯ..!