ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಟ್ಟಡದ ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವಿಗೀಡಾಗಿದ್ದಾಳೆ. ವಿವಿ ಪುರಂ ಮೆಟ್ರೊ ನಿಲ್ದಾಣದ ಬಳಿ ಮಧ್ಯಾಹ್ನ 12.40ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. 15 ವರ್ಷದ ತೇಜಸ್ವಿನಿ ಎಂಬುವವರು ಮೃತ ಬಾಲಕಿಯಾಗಿದ್ದಾಳೆ.
ವಿವಿ ಪುರಂ ಮೆಟ್ರೊ ನಿಲ್ದಾಣ ಬಳಿ ಶಾಲೆ ಮುಗಿಸಿ ರಸ್ತೆಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಬರ್ತಿದ್ದ ತೇಜಸ್ವಿನಿ ಮೇಲೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ 4ನೇ ಮಹಡಿಯಿಂದ ಸೆಂಟ್ರಿಂಗ್ ಮರ ಬಿದ್ದಿದೆ.
ಬಾಲಕಿ ತೇಜಸ್ವಿನಿ ತಲೆ ಹಾಗೂ ದೇಹದ ಮೇಲೆ ಸೆಂಟ್ರಿಂಗ್ ಮರ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾಳೆ. ತೇಜಸ್ವಿನಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಗೆದಷ್ಟು ಬಯಲಾಗ್ತಿದೆ DySP ‘ಕಾಮ’ ಪುರಾಣ – ಪತಿ ಹೊರಗೆ ಕಳುಹಿಸಿ ಮಹಿಳೆಗೆ ಲೈಂಗಿಕ ದೌರ್ಜನ್ಯದ ಆರೋಪ!
Post Views: 256