ಬೆಂಗಳೂರು : ವೈಟ್ಫಿಲ್ಡ್ನ ಐಟಿಪಿಎಲ್ ಬಸ್ ಸ್ಟಾಪ್ ಬಳಿ ಕರ್ತವ್ಯ ನಿರತ ಬಿಎಂಟಿಸಿ ಕಂಡಕ್ಟರ್ ಮೇಲೆ ಪ್ರಯಾಣಿಕನೊಬ್ಬ ಚಾಕು ಇರಿದ ಘಟನೆ ಮಂಗಳವಾರದಂದು ನಡೆದಿತ್ತು. ಆದರೀಗ ಅಂತಹದ್ದೇ ಬೆದರಿಕೆಯ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ವ್ಯಕ್ತಿಯೋರ್ವ ಕರ್ತವ್ಯ ನಿರತ ವೋಲ್ವೋ ಬಸ್ ಕಂಡಕ್ಟರ್ಗೆ ಸ್ಕ್ರೂಡ್ರೈವರ್ನಿಂದ ಬೆದರಿಕೆ ಹಾಕಿದ್ದಾನೆ. ಪದೇ ಪದೇ ಫಾಸ್ಟ್ ಆಗಿ ಹೋಗುವಂತೆ ಒತ್ತಾಯಿಸುತ್ತಿದ್ದ, ಬಸ್ ಜೋರಾಗಿ ಓಡಿಸಲಿಲ್ಲ ಅಂತಾ ಕೋಪಗೊಂಡ ಪ್ರಯಾಣಿಕ ಏಕಾಏಕಿ ಬ್ಯಾಗ್ನಿಂದ ಸ್ಕ್ರೂ ಡ್ರೈವರ್ ಹೊರತೆಗೆದು ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತನನ್ನು ಪ್ರಯಾಣಿಕರು ತಡೆದು ಬಸ್ನಿಂದ ಕೆಳಗಿಳಿಸಿದ್ದಾರೆ.
ನಿನ್ನೆ 4-15ಕ್ಕೆ ರೂಟ್ ನಂಬರ್ 360/5 KA-57 F 9002 ಬಸ್ನಲ್ಲಿ ನಡೆದಿರುವ ಘಟನೆ ಇದಾಗಿದ್ದು, ಬೊಮ್ಮನಹಳ್ಳಿಯ ಹೊಸೂರು ಮುಖ್ಯ ರಸ್ತೆಯಲ್ಲಿ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಬ್ಯಾಕ್ ಟು ಬ್ಯಾಕ್ ಘಟನೆಗಳಿಂದ BMTC ಸಿಬ್ಬಂದಿಗಳು ಆತಂಕಗೊಂಡಿದ್ದಾರೆ.
ಇದನ್ನೂ ಓದಿ : ಆಹಾರ ಅರಸಿ ನಾಡಿಗೆ ಬಂದ ಆನೆ ಕಂದಕಕ್ಕೆ ಬಿದ್ದು ಸಾವು..!