ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಪವಿತ್ರಾಗೌಡಗೆ ಬೆಂಗಳೂರು ಕೇಂದ್ರ ಕಾರಾಗೃಹದ ಅಧಿಕಾರಿಗಳು ವಿಚಾರಣಾಧೀನ ಖೈದಿ ನಂಬರ್ 6024ನ್ನು ನೀಡಿದ್ದಾರೆ.
ಪ್ರಕರಣದಲ್ಲಿ ಬಂಧಿತರಾದ 47 ವರ್ಷದ ನಟ ದರ್ಶನ್ ಸೇರಿದಂತೆ 17 ಜನರ ಪೈಕಿ ಪವಿತ್ರಾ ಏಕೈಕ ಮಹಿಳಾ ಆರೋಪಿಯಾಗಿದ್ದಾರೆ. ಆಕೆಯನ್ನು ಮಹಿಳಾ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಆರ್.ಆರ್.ನಗರದ ಕೆಂಚನಹಳ್ಳಿ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ರೆಡ್ ಕಾರ್ಪೆಟ್ ಬೊಟಿಕ್ ನಡೆಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿ ನಂಬರ್ 1 ಪವಿತ್ರಾ, ಜೈಲು ಸೇರಿದ ದಿನದಿಂದ ಇಲ್ಲಿಯವರೆಗೆ ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗದೆ ಪರಿತಪ್ಪಿಸುತ್ತಿದ್ದಾರೆ.
ಅಂತೆಯೇ, ಜೈಲಿನಲ್ಲಿ ನನಗೆ ಅದು ಬೇಕು, ಇದು ಬೇಕು ಎಂದು ಸಣ್ಣ ಪುಟ್ಟ ವಿಚಾರಕ್ಕೆ ಪವಿತ್ರಾಗೌಡ ಜೈಲು ಮಹಿಳಾ ಸಿಬ್ಬಂದಿ ಜೊತೆ ಕಿರಿಕ್ ತೆಗೆಯುತ್ತಿದ್ದಾರೆ. ಉಪ್ಪು, ಖಾರ ಇಲ್ಲದ ಊಟ ನನಗೆ ಬೇಡ ಎಂದು ಗಲಾಟೆ ಮಾಡಿತ್ತಿದ್ದಾರೆ. ಮಲಗಲು ನನಗೆ ಮನೆಯ ಬ್ಲಾಂಕೆಟ್ಯೇ ಬೇಕು ಎಂದು ಹಠ ಹಿಡಿದು ಕುಳಿತಿದ್ದಾರಂತೆ. ಅದಕ್ಕೆ ಪ್ರತ್ಯುತ್ತರವಾಗಿ ಇದು ನಿನ್ನ ಮನೆಯಲ್ಲ ಜೈಲು ಎಂದು ಸಿಬ್ಬಂದಿ ಎಚ್ಚರಿಸಿದ್ದಾರೆ. ಸದ್ಯ ಜೈಲಿನಲ್ಲಿ ಯಾವುದೇ ಐಷಾರಾಮಿ ಸೌಕರ್ಯ ಸಿಗದೇ ಪವಿತ್ರಾಗೌಡ ತಬ್ಬಿಬ್ಬಾಗಿದ್ದಾರೆ.
ಇದನ್ನೂ ಓದಿ : ಪರಪ್ಪನ ಅಗ್ರಹಾರದಿಂದ ತುಮಕೂರು ಜೈಲಿಗೆ ಶಿಫ್ಟ್ ಆಗ್ತಾರಾ ದರ್ಶನ್?