Download Our App

Follow us

Home » Uncategorized » ಬಿಜೆಪಿ ಪ್ರತಿಭಟನೆಗೆ ಅರ್ಥವೂ ಇಲ್ಲ, ಕಾರಣವೂ ಇಲ್ಲ : ಡಾ.ಜಿ ಪರಮೇಶ್ವರ್..!

ಬಿಜೆಪಿ ಪ್ರತಿಭಟನೆಗೆ ಅರ್ಥವೂ ಇಲ್ಲ, ಕಾರಣವೂ ಇಲ್ಲ : ಡಾ.ಜಿ ಪರಮೇಶ್ವರ್..!

ಬೆಂಗಳೂರು : ದ್ವೇಷ ರಾಜಕಾರಣ ನಾವು ಮಾಡಿಲ್ಲ, ಹುಬ್ಬಳ್ಳಿಯಲ್ಲಿ ಹಳೆ ಕೇಸ್​ ತನಿಖೆ ಆಗ್ತಿದೆ. ಬಾಬಾಬುಡನ್​ಗಿರಿ ಕೇಸ್​ ಕಾನೂನು ಪ್ರಕ್ರಿಯೆ, ಬಿಜೆಪಿ ಪ್ರತಿಭಟನೆಗೆ ಅರ್ಥವೂ ಇಲ್ಲ, ಕಾರಣವೂ ಇಲ್ಲ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಮಾತನಾಡಿ, ಹುಬ್ಬಳ್ಳಿ ಕೇಸ್​ನಲ್ಲಿ ಯಾರನ್ನೂ ಸಸ್ಪೆಂಡ್ ಮಾಡೋ ಅಗತ್ಯ ಇಲ್ಲ. ಕೋರ್ಟ್ ಸಮನ್ಸ್ ಹೋಗಿದೆ ಕ್ರಮ ತೆಗೆದುಕೊಂಡಿದ್ದಾರೆ, ಬಾಬ ಬುಡನ್ ಗಿರಿ ಕೇಸ್ ರೀ ಓಪನ್ ಮಾಡಿರೋದಲ್ಲ.

ನಾವ್ಯಾಕೆ ರೀ ಓಪನ್ ಮಾಡೋಣ, ಪೊಲೀಸರ ಕ್ರಮ ಇದು. ಬಿಜೆಪಿಯವರು ಕೋರ್ಟ್​ ಆದೇಶಕ್ಕೂ ಗೌರವ ಕೊಡಲ್ವಾ..? ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.

9 ಕೇಸ್​ ಇರುವವರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ, ಕೋರ್ಟ್ ಸಮನ್ಸ್ ಹೋಗಿದೆ ಕ್ರಮ ತೆಗೆದುಕೊಂಡಿದ್ದಾರೆ. ಕಾನೂನು ಬಿಟ್ಟು ಏನಾದ್ರೂ ಮಾಡಿದ್ರೆ ಮಾತನಾಡಲಿ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಇದೇ ವೇಳೆ ಸತೀಶ್​ ಜಾರಕಿಹೊಳಿ ಮನೆಯಲ್ಲಿ ಸಚಿವರ ಡಿನ್ನರ್ ವಿಚಾರವಾಗಿ ಮಾತನಾಡಿ, ಸತೀಶ್​ ಜಾರಕಿಹೊಳಿ ಮನೆಯಲ್ಲಿ ನಾವು ಊಟಕ್ಕೆ ಸೇರಿದ್ದೆವು, ನಾವೆಲ್ಲಾ ಒಟ್ಟಾಗಿ ಸೇರಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾವು ಚರ್ಚಿಸಿದ ವಿಚಾರ ಬಹಿರಂಗವಾಗಿ ಹೇಳೋಕಾಗುತ್ತಾ..? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜಕೀಯದವರು ರಾಜಕೀಯ ಬಿಟ್ಟು ಬೇರೆ ಮಾತಾಡೋಕಾಗುತ್ತಾ..? ರಹಸ್ಯ ಸಭೆ ಅದೂ.. ಇದೂ.. ಏನೂ ಇಲ್ಲ ಎಂದಿದ್ದಾರೆ.

ಸತೀಶ್​ ಜಾರಕಿಹೊಳಿ ಮನೆಯಲ್ಲಿ ಸಚಿವರ ಡಿನ್ನರ್​ ಮೀಟಿಂಗ್ : ಸತೀಶ್​ ಜಾರಕಿಹೊಳಿ ಮನೆಯಲ್ಲಿ ಸಚಿವರ ಮಿಡ್​ನೈಟ್​ ಡಿನ್ನರ್​​​ ಭಾರೀ ಕುತೂಹಲ ಕೆರಳಿಸಿದೆ. ಕಳೆದ ರಾತ್ರಿ ಸತೀಶ್​ ನಿವಾಸದಲ್ಲಿ ಒಂದೂವರೆ ಗಂಟೆ ಕಾಲ ಚರ್ಚೆ ನಡೆದಿದೆ.

ಸಚಿವರಾದ ಡಾ.ಜಿ. ಪರಮೇಶ್ವರ್​​, ಕೆ.ಹೆಚ್​. ಮುನಿಯಪ್ಪ, ಹೆಚ್​.ಸಿ.ಮಹಾದೇವಪ್ಪ, ದಿನೇಶ್​ ಗುಂಡೂರಾವ್​​​ ಅವರು ಸತೀಶ್​ ಜಾರಕಿಹೊಳಿ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ​​​ಲೀಡರ್ಸ್​ ಗಳು ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚಿಸಿದ್ದಾರೆ.

ಇದನ್ನೂ ಓದಿ : ಮಲ್ಲೇಶ್ವರಂ ಠಾಣೆ ಎದುರು ಸುರೇಶ್​ಕುಮಾರ್ ಧರಣಿ..

Leave a Comment

DG Ad

RELATED LATEST NEWS

Top Headlines

ತಾಯಿಗೆ ಮರು ಪ್ರೀತಿ, ಹೊಸ ಜೀವನ.. ಹೆತ್ತಮ್ಮನಿಗೇ 2ನೇ ಮದುವೆ ಮಾಡಿಸಿದ ಪುತ್ರ..!

ಪತಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ತಾಯಿಗೆ ಮಗನೇ ಮುಂದೆ ನಿಂತು ಮದುವೆ ಮಾಡಿಸಿದ ಅಚ್ಚರಿಯ ಘಟನೆಯೊಂದು ನಡೆದಿದೆ. 18 ವರ್ಷ ತಾಯಿ ಜೊತೆಗಿದ್ದ ಮಗ ಅಬ್ದುಲ್ ಅಹಾದ್ ಬಹಳ

Live Cricket

Add Your Heading Text Here