Download Our App

Follow us

Home » ಅಪರಾಧ » ಬಿಜೆಪಿ ಶಾಸಕ ಸುರೇಶ್ ಕುಮಾರ್‌ಗೆ ಅನಾರೋಗ್ಯ – ಐಸಿಯುನಲ್ಲಿ ಚಿಕಿತ್ಸೆ..!

ಬಿಜೆಪಿ ಶಾಸಕ ಸುರೇಶ್ ಕುಮಾರ್‌ಗೆ ಅನಾರೋಗ್ಯ – ಐಸಿಯುನಲ್ಲಿ ಚಿಕಿತ್ಸೆ..!

ಬೆಂಗಳೂರು : ಮಾಜಿ ಸಚಿವ ಹಾಗೂ ರಾಜಾಜಿನಗರ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂದಿದ್ದು, ನಗರ ಖಾಸಗಿ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 3-4 ದಿನದ ಹಿಂದೆ ತೀವ್ರ ಜ್ವರದಿಂದ ನಿತ್ರಾಣಗೊಂಡಿದ್ದ ಸುರೇಶ್​ ಕುಮಾರ್​ ಅವರನ್ನು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಸುರೇಶ್ ಕುಮಾರ್ ಗೆ ಚಿಕಿತ್ಸೆ ಕೊಡಲಾಗ್ತಿದೆ. ಚಿಕನ್​ ಗುನ್ಯಾದಿಂದ ಸುರೇಶ್​ಕುಮಾರ್​ ಬಳಲುತ್ತಿದ್ದಾರೆ ಎಂದು ಹೇಳಲಾಗ್ತಿದೆ. ತೀವ್ರ ಬೆನ್ನು ನೋವು ಕಾಣಿಸಿಕೊಂಡ ಕಾರಣ ICUಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಸುರೇಶ್ ಕುಮಾರ್ ಅವರು, ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ಪಕ್ಷದೊಂದಿಗೆ ಮೈಸೂರು ಪಾದಯಾತ್ರೆ ನಂತರ ಸುರೇಶ್ ತಿರುಪತಿ ಪ್ರವಾಸ ಕೈಗೊಂಡಿದ್ದರು. ಕಳೆದೊಂದು ವಾರದಿಂದ ರೂಪಾಂತರಿ ಚಿಕನ್ ಗುನ್ಯಾ ಕಾಣಿಸಿಕೊಂಡಿದೆ ಅನ್ನೊ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ನಾಳೆಯೇ ಕೋರ್ಟ್​ಗೆ ದರ್ಶನ್‌ ಅಂಡ್ ಗ್ಯಾಂಗ್ ವಿರುದ್ಧ ಚಾರ್ಜ್​​ಶೀಟ್ ಸಲ್ಲಿಕೆ..!

Leave a Comment

DG Ad

RELATED LATEST NEWS

Top Headlines

ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು – ವಿಡಿಯೋ ನೋಡಿ ನೆಟ್ಟಿಗರು ಫುಲ್ ಶಾಕ್..!

ಮಹಿಳೆಯೊಬ್ಬರು ಏಕಕಾಲಕ್ಕೆ 18 ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿರುವುದನ್ನು

Live Cricket

Add Your Heading Text Here