ಬೆಂಗಳೂರು : ಕರ್ನಾಟಕದ ಮೀಸಲು ಕುರಿತು ಬಿಜೆಪಿ ನಾಯಕರು ಕಿಡಿಕಾರಿದ್ದರು. ಇದೀಗ ಮುಸ್ಲಿಂ ಮೀಸಲು ಕುರಿತು ನೀಡಿದ್ದ ಹೇಳಿಕೆಗೆ ಸುರ್ಜೇವಾಲಾ ತಿರುಗೇಟು ಕೊಟ್ಟಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ರಣದೀಪ್ ಸುರ್ಜೇವಾಲಾ ಮಾತನಾಡಿ, ಮೀಸಲು ವಿಚಾರದಲ್ಲಿ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ, ಹಿಂದುಳಿದವರ ಆದಾಯ ಮಿತಿಯನ್ನು ಇಳಿಕೆ ಮಾಡಿದೆ. ಇದರಿಂದ ಎಷ್ಟೋ ಯುವಕರಿಗೆ ಉದ್ಯೋಗದಲ್ಲಿ ಅನ್ಯಾಯವಾಗಿದೆ ಎಂದು ಬಿಜೆಪಿ ವಿರುದ್ಧ ಮತ್ತೆ ಗುಡುಗಿದ್ದಾರೆ.
SC,ST,OBCಗಳಿಗೆ ಸರ್ಕಾರಿ ಹುದ್ದೆಗಳು ಸಿಗ್ತಾ ಇಲ್ಲ. 32 ಲಕ್ಷ ಹುದ್ದೆಗಳು ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಬಿಜೆಪಿ ಅನ್ಯಾಯ ಮಾಡಿದೆ ಎಂದು ರಣದೀಪ್ ಸುರ್ಜೇವಾಲಾ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಎಲೆಕ್ಷನ್ ಹೊತ್ತಲ್ಲೇ ಬೆಂಗಳೂರಲ್ಲಿ ಐಟಿ ಅಧಿಕಾರಿಗಳ ಭರ್ಜರಿ ಬೇಟೆ : 2 ದಿನಗಳಲ್ಲಿ 16 ಕಡೆ ರೇಡ್, ಕೆಜಿಗಟ್ಟಲೆ ಚಿನ್ನ- ಹಣ ವಶಕ್ಕೆ..!
Post Views: 25