Download Our App

Follow us

Home » ರಾಷ್ಟ್ರೀಯ » ರಾಂಗ್​ ಸೈಡ್​ನಿಂದ ಬಂದು ಬೈಕ್​ಗೆ​ ಡಿಕ್ಕಿ ಹೊಡೆದ ಕಾರು – ಬೈಕ್ ಸವಾರ ದಾರುಣ ಸಾವು..!

ರಾಂಗ್​ ಸೈಡ್​ನಿಂದ ಬಂದು ಬೈಕ್​ಗೆ​ ಡಿಕ್ಕಿ ಹೊಡೆದ ಕಾರು – ಬೈಕ್ ಸವಾರ ದಾರುಣ ಸಾವು..!

ನವದೆಹಲಿ : ಕಾರು ಚಾಲಕನೊಬ್ಬ ರಾಂಗ್ ಸೈಡ್​ನಲ್ಲಿ ಬಂದು ಬೈಕ್​ಗೆ​ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಕಾರಿಗೆ ಬೈಕ್ ಗುದ್ದಿದ ಕೊನೆ ಕ್ಷಣದ ವಿಡಿಯೋ ಆತನ ಸ್ನೇಹಿತನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ಭಯಾನಕ ದೃಶ್ಯ ಬೆಚ್ಚಿ ಬೀಳಿಸುವಂತಿದೆ.

ಕಳೆದ ಸೆಪ್ಟೆಂಬರ್ 15ರಂದು ಗುರುಗ್ರಾಮ್‌ನ ಗಾಲ್ಫ್ ಕೋರ್ಸ್‌ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಕ್ಷತ್ ಗಾರ್ಗ್ ಎಂಬ ಯುವಕ ವೇಗವಾಗಿ ಬೈಕ್‌ ಚಲಾಯಿಸುವಾಗ SUV ಕಾರು ರಾಂಗ್‌ ಸೈಡ್‌ನಿಂದ ಬಂದು ಗುದ್ದಿದೆ. ಕಾರಿಗೆ ಡಿಕ್ಕಿಯಾದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

23 ವರ್ಷದ ಅಕ್ಷತ್ ಗಾರ್ಗ್ ದೆಹಲಿಯ ದ್ವಾರಕ ನಿವಾಸಿ. ಕಳೆದ ಭಾನುವಾರ ಅಕ್ಷತ್ ಹಾಗೂ ಸ್ನೇಹಿತರು ರಸ್ತೆಯಲ್ಲಿ ಬೈಕ್ ರೈಡಿಂಗ್ ಹೋಗಿದ್ದಾರೆ. ಈ ವೇಳೆ ವೇಗವಾಗಿ ಹೋಗುತ್ತಿದ್ದ ಅಕ್ಷತ್‌ಗೆ ರಾಂಗ್‌ ಸೈಡ್‌ನಿಂದ ಬಂದ ಮಹೀಂದ್ರಾ XUV 3XO ಕಾರು ಡಿಕ್ಕಿಯಾಗಿದೆ. ಕೂಡಲೇ ಯುವಕನನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಭೀಕರ ಅಪಘಾತದಲ್ಲಿ ಅಕ್ಷತ್ ಗಾರ್ಗ್‌ ಸಾವನ್ನಪ್ಪಿದ್ದ ಲೈವ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : ಬೆಂಗಳೂರು : ಪ್ರತಿಷ್ಠಿತ ಕಾಲೇಜಿನ ಲೇಡೀಸ್ ವಾಶ್ ರೂಂನಲ್ಲಿ ಕ್ಯಾಮರಾ ಅಳವಡಿಸಿದ್ದ ಪುಂಡ ವಿದ್ಯಾರ್ಥಿ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು – ವಿಡಿಯೋ ನೋಡಿ ನೆಟ್ಟಿಗರು ಫುಲ್ ಶಾಕ್..!

ಮಹಿಳೆಯೊಬ್ಬರು ಏಕಕಾಲಕ್ಕೆ 18 ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿರುವುದನ್ನು

Live Cricket

Add Your Heading Text Here