Download Our App

Follow us

Home » ಮೆಟ್ರೋ » ಪ್ರಯಾಣಿಕರಿಗೆ ಮತ್ತೊಂದು ಬಿಗ್​ ಶಾಕ್ – ಟಿಕೆಟ್​ ಬೆನ್ನಲ್ಲೇ ಬಸ್ ಪಾಸ್ ದರವೂ ದುಬಾರಿ.. ಇಲ್ಲಿದೆ ಡೀಟೇಲ್ಸ್​!

ಪ್ರಯಾಣಿಕರಿಗೆ ಮತ್ತೊಂದು ಬಿಗ್​ ಶಾಕ್ – ಟಿಕೆಟ್​ ಬೆನ್ನಲ್ಲೇ ಬಸ್ ಪಾಸ್ ದರವೂ ದುಬಾರಿ.. ಇಲ್ಲಿದೆ ಡೀಟೇಲ್ಸ್​!

ಬೆಂಗಳೂರು : ಹೊಸ ವರ್ಷಕ್ಕೆ ಹೊರೆ ​ಎಂಬಂತೆ ಕರ್ನಾಟಕ ಸಾರಿಗೆ ಇಲಾಖೆ ಕೆಲ ದಿನಗಳ ಹಿಂದೆಷ್ಟೇ ನಾಲ್ಕೂ ನಿಗಮಗಳ ಬಸ್​ ಟಿಕೆಟ್​ ದರ ಶೇ 15 ರಷ್ಟು ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪಾಸ್​​ ದರವನ್ನೂ ಏರಿಕೆ ಮಾಡಿದೆ. ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್​ ದರ ಏರಿಕೆ ಮಾಡಿ ಬಿಎಂಟಿಸಿ ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ಬಸ್​​ ಪಾಸ್​ ದರ ಏರಿಕೆ ಪಟ್ಟಿ ಇಲ್ಲಿದೆ : 

  • ಸಾಮಾನ್ಯ ದಿನದ ಪಾಸ್​ 70 ರೂಪಾಯಿಯಿಂದ 80 ರೂ. ಏರಿಕೆ
  • ವಾರದ ಪಾಸ್​ 300 ರೂಪಾಯುಯಿಂದ 350 ರೂ. ಏರಿಕೆ
  • ಮಾಸಿಕ ಪಾಸ್​ 1050 ರೂಪಾಯಿಯಿಂದ 1200 ರೂ. ಏರಿಕೆ
  • ನೈಸ್ ರಸ್ತೆಯ ಟೋಲ್ ಶುಲ್ಕ ಸೇರಿ 2200 ರೂ. 2350 ರೂ. ಏರಿಕೆಯಾಗಿದೆ.
  • ವಜ್ರ ಬಸ್ಸಿನ ದಿನದ ಪಾಸ್​ 120 ರೂಪಾಯಿಯಿಂದ 140 ರೂ. ಏರಿಕೆ
  • ವಜ್ರ ಬಸ್ಸಿನ ಮಾಸಿಕ ಪಾಸ್​ 1800 ರೂಪಾಯಿಯಿಂದ 2000 ರೂ. ಏರಿಕೆ
  • ವಾಯುವಜ್ರ ಬಸ್ಸಿನ – 3755 ರಿಂದ 4000 ರೂ ಏರಿಕೆ
  • ವಿದ್ಯಾರ್ಥಿ ವಜ್ರ ಮಾಸಿಕ ಪಾಸ್​- 1200 ರಿಂದ 1400 ರೂ ಗೆ ಏರಿಕೆಯಾಗಿದೆ.

ಬಿಎಂಟಿಸಿ ಬಸ್​ಗಳ ಹಳೆಯ ಮತ್ತು ಹೊಸ ಟಿಕೆಟ್​​ ದರ ಪಟ್ಟಿ : 

  • ಮೆಜೆಸ್ಟಿಕ್-ಜೆ.ಪಿ.ನಗರ 20 ರೂ. ಇತ್ತು, ಹೊಸ ದರ 24 ರೂ.
  • ಮೆಜೆಸ್ಟಿಕ್-ನಂದಿನಿ ಲೇಔಟ್ 25 ರೂ. ಇತ್ತು, ಹೊಸ ದರ 28 ರೂ.
  • ಮೆಜೆಸ್ಟಿಕ್-ಯಶವಂತಪುರ ರೈಲ್ವೆ ಸ್ಟೇಷನ್ 20 ರೂ. ಇತ್ತು, ಹೊಸ ದರ 23 ರೂ.
  • ಮೆಜೆಸ್ಟಿಕ್-ಪೀಣ್ಯ ಎರಡನೇ ಹಂತ 25 ರೂ. ಇತ್ತು, ಹೊಸ ದರ 28 ರೂ.
  • ಮೆಜೆಸ್ಟಿಕ್-ಅತ್ತಿಬೆಲೆ 25 ರೂ. ಇತ್ತು, ಹೊಸ ದರ 30 ರೂ.
  • ಮೆಜೆಸ್ಟಿಕ್-ವಿದ್ಯಾರಣ್ಯಪುರ 25 ರೂ. ಇತ್ತು, ಹೊಸ ದರ 28 ರೂ.
  • ಮೆಜೆಸ್ಟಿಕ್-ದೊಡ್ಡಬಳ್ಳಾಪುರ 25 ರೂ. ಇತ್ತು, ಹೊಸ ದರ 30 ರೂ.
  • ಮೆಜೆಸ್ಟಿಕ್-ಬಿಇಎಂಎಲ್ 5ನೇ ಹಂತ 20 ರೂ. ಇತ್ತು, ಹೊಸ ದರ 24 ರೂ.
  • ಮೆಜೆಸ್ಟಿಕ್-ಕುಮಾರಸ್ವಾಮಿ ಲೇಔಟ್ 25 ರೂ. ಇತ್ತು, ಹೊಸ ದರ 28 ರೂ.
  • ಮೆಜೆಸ್ಟಿಕ್-ಬಿಟಿಎಂ ಲೇಔಟ್ 25 ರೂ. ಇತ್ತು, ಹೊಸ ದರ 28 ರೂ.

ಇದನ್ನೂ ಓದಿ : ‘ನಾನು ಬಿಗ್​ಬಾಸ್​ ಕಪ್ ಗೆಲ್ಲೋಕೆ ಆಡ್ತಿಲ್ಲ’ – ಅಸಲಿ ಕಾರಣ​ ರಿವೀಲ್​​ ಮಾಡಿದ ಹನುಮಂತ..!

Leave a Comment

DG Ad

RELATED LATEST NEWS

Top Headlines

ಕೈಯಲ್ಲಿ ಮಚ್ಚು ಹಿಡಿದು ಮಾಸ್​ ಅವತಾರ ತಾಳಿದ ‘ಅಭಿನಯ ಚತುರ’ – ‘ದಿ ರೈಸ್ ಆಫ್ ಅಶೋಕ’ ಮೋಷನ್ ಪೋಸ್ಟರ್ ರಿಲೀಸ್!

ಬೆಂಗಳೂರು :  ಅಭಿನಯ ಚತುರ ನೀನಾಸಂ ಸತೀಶ್ ನಟಿಸುತ್ತಿರುವ ಅಶೋಕ ಬ್ಲೇಡ್ ಸಿನಿಮಾವೀಗ ಶೀರ್ಷಿಕೆ ಬದಲಾವಣೆಯೊಂದಿಗೆ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ. ಅಶೋಕ್ ಬ್ಲೇಡ್ ಬದಲಿಗೆ ‘ದಿ ರೈಸ್

Live Cricket

Add Your Heading Text Here