ಬಿಗ್ಬಾಸ್ ಕನ್ನಡ ಸೀಸನ್ ಆರಂಭವಾಗಿ 1 ವಾರವಾಗಿದ್ದು, ಶನಿವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಾಮಿನೇಟ್ ಆದ ಮೂವರು ಸ್ಪರ್ಧಿಗಳು ಸೇಫ್ ಆಗಿ ಎರಡನೇ ವಾರಕ್ಕೆ ಕಾಲಿಟ್ಟಿದ್ದಾರೆ. ಭವ್ಯಾ ಗೌಡ ಮೊದಲು ಸೇಫ್ ಆದ್ರೆ, ಎರಡನೇದಾಗಿ ಗೌತಮಿ ಜಾಧವ್ ಮತ್ತು ಮೂರನೇದಾಗಿ ನರಕದಲ್ಲಿರುವ ತುಕಾಲಿ ಮಾನಸ ಅವರು ಸೇಫ್ ಆಗಿದ್ದಾರೆ.
ಈಗ ಸ್ವರ್ಗದಲ್ಲಿರುವ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್, ಮತ್ತು ಹಂಸ ನಾಮಿನೇಷನ್ನಲ್ಲಿದ್ದರೆ, ನರಕದಲ್ಲಿರುವ ಚೈತ್ರಾ ಕುಂದಾಪುರ, ಶಿಶಿರ್ ಶಾಸ್ತ್ರಿ, ಮೋಕ್ಷಿತಾ ಪೈ ನಾಮಿನೇಷನ್ ನಲ್ಲಿದ್ದಾರೆ. ನಾಳೆ ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮ ನಡೆಯಲಿದ್ದು, ಯಾರು ಮೊದಲ ವಾರ ಮನೆಯಿಂದ ಹೊರ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು, ಮನೆಯವರ ಸರಿ ತಪ್ಪುಗಳನ್ನು ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಅರ್ಥ ಮಾಡಿಸಿದ್ದಾರೆ. ಜೊತೆಗೆ ಸಮಯದ ಮಹತ್ವವನ್ನು ಕೂಡ ತಿಳಿಸಿ ಹೇಳಿದರು. ಮನೆಯಲ್ಲಿ ಎಲ್ಲೂ ಕಾಣಿಸಿಕೊಳ್ಳದೆ ಸೈಲೆಂಟ್ ಆಗಿರುವ ಸ್ಪರ್ಧಿಗಳಿಗೆ ಆಕ್ಟೀವ್ ಆಗಿರಿ ಎಂದು ಕಿಚ್ಚ ಕಿವಿ ಮಾತು ಹೇಳಿದರು.
ಇನ್ನು ಸ್ವರ್ಗ ನಿವಾಸಿಗಳು ಕುಳಿತು ಮೊದಲ ಪಂಚಾಯಿತಿಯಲ್ಲಿ ಸುದೀಪ್ ಮಾತುಗಳನ್ನು ಕೇಳಿಸಿಕೊಂಡರೆ. ನರಕ ನಿವಾಸಿಗಳು ನಿಂತುಕೊಂಡೇ ಕಿಚ್ಚನ ಪಂಚಾಯಿತಿಯಲ್ಲಿ ಭಾಗವಹಿಸಿದರು. ಕಿಚ್ಚ ಈ ಬಾರಿ ನವರಾತ್ರಿ ಹಿನ್ನೆಲೆ ಬರಿಗಾಲಿನಲ್ಲೇ ಗಂಟೆಗಟ್ಟಲೆ ನಿಂತು ಶೋ ನಡೆಸಿಕೊಟ್ಟು ಅಭಿಮಾನಿಗಳ ಹೃದಯ ಗೆದ್ದರು.
ಇದನ್ನೂ ಓದಿ : ಮಹಾಮಳೆಗೆ ತತ್ತರಿಸಿದ ಬೆಂಗಳೂರು – ರಸ್ತೆಗಳೆಲ್ಲ ಜಲಾವೃತ, ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿ ಅವಾಂತರ..!