ಬಿಗ್ ಬಾಸ್ ಕನ್ನಡ ಸೀಸನ್ 11’ರ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 29ರಂದು ಬಿಗ್ ಬಾಸ್ಗೆ ಅದ್ದೂರಿ ಓಪನಿಂಗ್ ಸಿಗಲಿದೆ. ಈ ಬಾರಿಯೂ 17 ಸ್ಪರ್ಧಿಗಳು ಮನೆ ಸೇರುವ ನಿರೀಕ್ಷೆ ಇದೆ. ಆದರೆ, ಬೇರೆ ಬೇರೆ ಹಂತಗಳಲ್ಲಿ ಸ್ಪರ್ಧಿಗಳಿಗೆ ಎಂಟ್ರಿ ಸಿಗಲಿದ್ದು, ಸಂಪೂರ್ಣವಾಗಿ ಭಿನ್ನ ಕಾನ್ಸೆಪ್ಟ್ನಲ್ಲಿ ಈ ಬಿಗ್ ಬಾಸ್ ಸೀಸನ್ ಸಾಗಲಿದೆ ಎಂಬ ಮಾಹಿತಿ ಈಗಾಗಲೇ ಹೊರಬಿದ್ದಿದೆ.
ನಿನ್ನೆ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ಗೆ ಸಂಬಂಧಿಸಿ ಹೊಸ ಪ್ರೋಮೋ ರಿಲೀಸ್ ಮಾಡಿದೆ. ‘11ರ ಬಿಗ್ ಬಾಸ್ನಲ್ಲಿ ಒಂದಲ್ಲ, ಎರಡು ಮನೆ. ಸ್ವರ್ಗ-ನರಕ. ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಸಲಿ ಆಟ ನಿಮ್ಮಿಂದ ಶುರುವಾಗುತ್ತಿದೆ. ಸ್ಪರ್ಧಿಗಳ ಹೆಸರನ್ನು ನಾವು ಹೇಳುತ್ತೇವೆ. ಅವರು ಸ್ವರ್ಗಕ್ಕೆ ಹೋಗಬೇಕಾ ಅಥವಾ ನರಕಕ್ಕೆ ಹೋಗಬೇಕಾ ಎಂಬುದನ್ನು ನೀವು ನಿರ್ಧರಿಸಿ. ರಾಜಾ ರಾಣಿ ಶೋನಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ’ ಎಂದು ಸುದೀಪ್ ಹೇಳಿದ್ದಾರೆ. ಸದ್ಯ ಪ್ರೋಮೊ ನೋಡಿದ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.
ಶನಿವಾರ ‘ರಾಜಾ-ರಾಣಿ’ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಇದರಲ್ಲಿ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಆಗಲಿದೆ. ಸದ್ಯ ಎಲ್ಲಾ ಕಡೆಗಳಲ್ಲಿ ಕೆಲವು ಸ್ಟಾರ್ ನಟ, ನಟಿಯರ ಸಂಭಾವ್ಯ ಪಟ್ಟಿ ಓಡಾಡುತ್ತಿದೆ. ಈ ಪೈಕಿ ನಿಜಕ್ಕೂ ದೊಡ್ಮನೆಗೆ ಹೋಗುವವರು ಯಾರ್ಯಾರು ಎಂಬುದಕ್ಕೆ ಕೆಲವೇ ಇನ್ನು 3 ದಿನಗಳಲ್ಲಿ ಉತ್ತರ ಸಿಗಲಿದೆ.
ಈಗಾಗಲೇ ಬಿಗ್ಬಾಸ್ ಮೊದಲ ಸೀಸನ್ನಿಂದ ಹಿಡಿದು ಹತ್ತು ಸೀಸನ್ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಪ್ರತಿ ಸೀಸನ್ನಲ್ಲಿ ಭಿನ್ನ ವಿಭಿನ್ನವಾಗಿರೋ ಲೋಗೋಗಳು ಅನಾವರಣ ಆಗುತ್ತಲೇ ಇರುತ್ತೆ. ಆದರೆ ಈ ಬಾರಿಯ ಬಿಗ್ಬಾಸ್ ಲೋಗೋದಲ್ಲಿಯೂ ಒಂದು ಕಡೆ ಬೆಂಕಿ, ಮತ್ತೊಂದು ಕಡೆ ನೀರು ಇದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಕಾರು-ಲಾರಿ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ನಾಲ್ವರ ಸಾವು..!