Download Our App

Follow us

Home » ಸಿನಿಮಾ » 90ನೇ ದಿನಕ್ಕೆ ಕಾಲಿಟ್ಟ ಬಿಗ್​ಬಾಸ್ ಸೀಸನ್ 11.. ಈ ವಾರ ದೊಡ್ಮನೆಯಿಂದ ಗೇಟ್ ಪಾಸ್ ಯಾರಿಗೆ?

90ನೇ ದಿನಕ್ಕೆ ಕಾಲಿಟ್ಟ ಬಿಗ್​ಬಾಸ್ ಸೀಸನ್ 11.. ಈ ವಾರ ದೊಡ್ಮನೆಯಿಂದ ಗೇಟ್ ಪಾಸ್ ಯಾರಿಗೆ?

ಕನ್ನಡದ ಬಿಗ್​ಬಾಸ್ ಸೀಸನ್​ 11 ಶುರುವಾಗಿ 90ನೇ ದಿನಕ್ಕೆ ಕಾಲಿಟ್ಟಿದೆ. 100ನೇ ದಿನಕ್ಕೆ ಇನ್ನೂ 10 ದಿನ ಬಾಕಿ ಉಳಿದಿದೆ. ಇನ್ನೇನು ಗ್ರ್ಯಾಂಡ್​ ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಸ್ಪರ್ಧಿಗಳು ಬಿಗ್​ಬಾಸ್​ ಮನೆಯಿಂದ ಆಚೆ ಹೋಗುತ್ತಿದ್ದಾರೆ.

ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಭವ್ಯಾ ಗೌಡ, ತ್ರಿವಿಕ್ರಮ್, ಮಂಜು, ಗೌತಮಿ, ಮೋಕ್ಷಿತಾ, ರಜತ್​, ಧನರಾಜ್​, ಚೈತ್ರಾ ಕುಂದಾಪುರ, ಹನುಮಂತ ಹಾಗೂ ಐಶ್ವರ್ಯಾ ಇದ್ದಾರೆ. ಈ 10 ಜನರಲ್ಲಿ ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

ಈ ವಾರ ಚೈತ್ರಾ ಕುಂದಾಪುರ, ಗೌತಮಿ ಜಾಧವ್​, ಧನರಾಜ್​ ಆಚಾರ್ಯ, ಮೋಕ್ಷಿತಾ ಪೈ,  ತ್ರಿವಿಕ್ರಮ್​, ಹನುಮಂತ ಲಂಬಾಣಿ, ಉಗ್ರಂ ಮಂಜು ನಾಮಿನೇಟ್ ಆಗಿದ್ದಾರೆ. ಜೊತೆಗೆ ಕ್ಯಾಪ್ಟನ್​ ಭವ್ಯಾ ಗೌಡಯಿಂದ ಐಶ್ವರ್ಯಾ ಸಿಂಧೋಗಿ ನೇರ ನಾಮಿನೇಟ್ ಆಗಿದ್ದಾರೆ.​​

ಇನ್ನೂ, ಕಳೆದ ಸಂಚಿಕೆಯಲ್ಲಿ ಯಾರು ಕೂಡ ಎಲಿಮಿನೇಟ್ ಆಗಿರಲಿಲ್ಲ. ಹೀಗಾಗಿ ಈ ವಾರ ಬಿಗ್​ಬಾಸ್​ ಮನೆಯಲ್ಲಿ ಡಬಲ್​ ಎಲಿಮಿನೇಷನ್​ ಆಗುತ್ತಾ ಅಂತ ಅನುಮಾನ ಮೂಡಿದೆ. ಹಾಗೇನಾದ್ರೂ ಆದ್ರೆ ಬಿಗ್​ಬಾಸ್​ ಮನೆಯಲ್ಲಿ ಕೇವಲ 8 ಮಂದಿ ಉಳಿದುಕೊಳ್ಳಲಿದ್ದಾರೆ. ಇನ್ನೂ ಕಿಚ್ಚನ ಪಂಜಾಯ್ತಿಯ ಕೊನೆಯ ಸಂಚಿಕೆಯಲ್ಲಿ ಬಿಗ್​ಬಾಸ್​ ಟ್ವಿಸ್ಟ್​ ನೀಡಲಿದ್ದಾರಾ ಅಂತ ಕಾದು ನೋಡಬೇಕಿದೆ.

ಇದನ್ನೂ ಓದಿ : ಹೊಸ ವರ್ಷಾಚರಣೆಗೆ ‘ನಮ್ಮ ಮೆಟ್ರೋ’ ಅವಧಿ ವಿಸ್ತರಣೆ.. ರಾತ್ರಿ ಎಷ್ಟರವರೆಗೆ ಸೇವೆ?

Leave a Comment

DG Ad

RELATED LATEST NEWS

Top Headlines

ಖ್ಯಾತ ನಟಿ ಕಾರು ಆ್ಯಕ್ಸಿಡೆಂಟ್​ – ಓರ್ವ ಸಾವು, ಮತ್ತೋರ್ವ ಸ್ಥಿತಿ ಗಂಭೀರ!

ಮುಂಬೈ: ಮರಾಠಿ ಚಿತ್ರರಂಗದ ಖ್ಯಾತ ನಟಿ ಊರ್ಮಿಲಾ ಕೊಠಾರೆ ಅಲಿಯಾಸ್​ ಊರ್ಮಿಳಾ ಕಾನೇಟ್ಕರ್ ಅವರ ಕಾರು ಹರಿದು ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ

Live Cricket

Add Your Heading Text Here