ಬಿಗ್ ಬಾಸ್ ಸೀಸನ್ 11 ಮನೆಗೆ ಈ ವಾರ ಪ್ರೀತಿಯ ಸುರಿಮಳೆಯನ್ನೇ ಸುರಿದಿದೆ. ಇಷ್ಟು ದಿನ ಮನೆಯವರಿಂದ ದೂರ ಇದ್ದು ಸೊರಗಿ ಹೋಗಿದ್ದ ಸ್ಪರ್ಧಿಗಳಿಗೆ ತಮ್ಮ ಪ್ರೀತಿ ಪಾತ್ರರ ದರ್ಶನವಾಗಿದೆ. ಕುಟುಂಬಸ್ಥರ ಅಪ್ಪುಗೆ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳಿಗೆ ಹೊಸ ಜೋಶ್ ತಂದು ಕೊಟ್ಟಿದೆ.
ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಮನೆಯವರು ಬಂದು ಹೋಗುತ್ತಿದ್ದಂತೆ ಕಿಚ್ಚ ಸುದೀಪ್ ಅವರು ಸರ್‌ಪ್ರೈಸ್ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆ ಮಂದಿಗೆ ಕಿಚ್ಚನ ಕೈ ರುಚಿಯ ಊಟ ಕಳುಹಿಸಿಕೊಡಲಾಗಿದೆ. ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲೂ ಕಿಚ್ಚ ಸುದೀಪ್ ಅವರು ತಾವೇ ಕೈಯಾರೇ ಮಾಡಿದ ರುಚಿ, ರುಚಿಯಾದ ಊಟವನ್ನು ಕಳುಹಿಸಿಕೊಡುತ್ತಾರೆ. ಈ ಬಾರಿ ಕೂಡ ತಮ್ಮ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯ 9 ಸದಸ್ಯರಿಗೆ 9 ಸರ್‌ಪ್ರೈಸ್ ಬ್ಯಾಗ್ ಕಳುಹಿಸಿದ್ದಾರೆ. ಇದನ್ನು ನೋಡಿದ ಪ್ರತಿಯೊಬ್ಬರು ಖುಷಿಯಲ್ಲಿ ತೇಲಿ ಹೋಗಿದ್ದಾರೆ. ರುಚಿ, ರುಚಿಯಾದ ವೆಜ್ ಮತ್ತು ನಾನ್ ವೆಜ್ ಎರಡು ಊಟವನ್ನು ಸುದೀಪ್ ಮನೆಯ ಸದಸ್ಯರಿಗೆ ಕಳುಹಿಸಿ ಕೊಟ್ಟಿದ್ದಾರೆ.
ಕಿಚ್ಚನ ಕೈ ರುಚಿ ಸವಿಯುವುದರ ಜೊತೆಗೆ ಬಿಗ್ ಬಾಸ್ ಮನೆಯ ಸದಸ್ಯರು ಸುದೀಪ್ ಅವರ ಬಗ್ಗೆ ಸವಿಯಾದ ಮಾತುಗಳನ್ನಾಡಿದ್ದಾರೆ. ರಜತ್ ಅವರು ಇಂತಹ ಒಂದು ಸರ್‌ಪ್ರೈಸ್, ಇಂತಹ ಒಂದು ಸಮಯ ಕ್ರಿಯೇಟ್ ಮಾಡೋದು ನಿಮ್ಮ ಕೈಯಲ್ಲಿ ಮಾತ್ರ ಸಾಧ್ಯವಾಗುತ್ತೆ ಸಾರ್ ಎಂದಿದ್ದಾರೆ.
ಪ್ರತಿಯೊಬ್ಬರು ಥ್ಯಾಂಕ್ಯು ಸುದೀಪ್ ಸಾರ್.. ಸೋ ಸ್ವೀಟ್.. ಥ್ಯಾಂಕ್ಯು ಸೋ ಮಚ್ ಅಣ್ಣ ಸುದೀಪ್ ಸಾರ್ ಥ್ಯಾಂಕ್ಯು, ಥ್ಯಾಂಕ್ಯು ಎಂದು ಹೇಳಿದ್ದಾರೆ. ಚೈತ್ರಾ ಕುಂದಾಪುರ ಅವರು ನಿಮ್ಮ ಕೈಯಿಂದ ನನ್ನ ಹೆಸರನ್ನು ಬರೆಸಿಕೊಳ್ಳೋದು ಭಾಗ್ಯ ಎಂದು ಭಾವುಕರಾಗಿದ್ದಾರೆ. ಹನುಮಂತ ಅವರಂತೂ ಯಾವ ಜನ್ಮದ ಪುಣ್ಯ, ಬಿಗ್ ಬಾಸ್ ಮನೆಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಅವರ ಊಟದ ಜೊತೆ 9 ಸ್ಪರ್ಧಿಗಳು ಕ್ಯಾಂಡಲ್ ಲೈಟ್ ಡಿನ್ನರ್ ಬಹಳಷ್ಟು ಖುಷಿ ಪಟ್ಟಿದ್ದಾರೆ. ಸದ್ಯ ಫ್ಯಾಮಿಲಿ ರೌಂಡ್, ಭೇಟಿ ಮುಕ್ತಾಯವಾಗಿದ್ದು, ಇಂದು ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿ ನಡೆಯಲಿದೆ. ಹಾಗಾಗಿ ಬಿಗ್ ಬಾಸ್ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ : ಎರಡು ಬಸ್ಗಳ ನಡುವೆ ಸಿಲುಕಿದ್ರೂ ವ್ಯಕ್ತಿ ಗ್ರೇಟ್ ಎಸ್ಕೇಪ್ : ವಿಡಿಯೋ ವೈರಲ್..!