Download Our App

Follow us

Home » ಸಿನಿಮಾ » ವಾರದ ಕಥೆ ಕೇಳಲು ಬರಿಗಾಲಲ್ಲಿ ಬಂದ ಅಭಿನಯ ಚಕ್ರವರ್ತಿ..! ವೇದಿಕೆ ಮೇಲೆ ಕಿಚ್ಚ ಸುದೀಪ್ ಚಪ್ಪಲಿ ಹಾಕಿಲ್ಲ ಯಾಕೆ..?

ವಾರದ ಕಥೆ ಕೇಳಲು ಬರಿಗಾಲಲ್ಲಿ ಬಂದ ಅಭಿನಯ ಚಕ್ರವರ್ತಿ..! ವೇದಿಕೆ ಮೇಲೆ ಕಿಚ್ಚ ಸುದೀಪ್ ಚಪ್ಪಲಿ ಹಾಕಿಲ್ಲ ಯಾಕೆ..?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಬಹಳ ಅದ್ಧೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಬಿಗ್​ಬಾಸ್​ ಸೀಸನ್​ 11 ಶುರುವಾಗಿ ಒಂದು ವಾರ ಕಳೆದಿದೆ. ಇಂದು ಶನಿವಾರ ಆಗಿರುವುದರಿಂದ ಕಿಚ್ಚ ಸುದೀಪ್​ ಅವರು ವಾರದ ಕತೆಗೆ ವೇದಿಕೆಗೆ ಎಂಟ್ರಿ ಕೊಟ್ಟಿದ್ದರು.

ಬಿಗ್ ಬಾಸ್​ ನೋಡುವ ಪ್ರೇಕ್ಷಕರು ಕಾಯೋದು ಶನಿವಾರ ಭಾನುವಾರದ ಎಪಿಸೋಡ್​ಗೆ. ಕಿಚ್ಚನ ಮಾತು ಕೇಳಲು ಅನೇಕರು ಬಿಗ್ ಬಾಸ್​ ನೋಡ್ತಾರೆ. 10 ಸೀಸನ್​ ಬಿಗ್ ಬಾಸ್ ಹೋಸ್ಟ್​ ಮಾಡಿದ ಸುದೀಪ್​, 11ನೇ ಸೀಸನ್​ನ ವಾರದ ಕಥೆ ಕಿಚ್ಚನ ಜೊತೆಯ ಮೊದಲ ಎಪಿಸೋಡ್​ಗೆ ಬರಿಗಾಲಿನಲ್ಲಿ ವೇದಿಕೆ ಮೇಲೆ ಬಂದಿದ್ದಾರೆ. ​

ಹೌದು, ಶೋನಲ್ಲಿ ಸುದೀಪ್ ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಚಪ್ಪಲಿ ಯಾಕೆ ಧರಿಸಿಲ್ಲ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹರಿದಾಡ್ತಿದ್ದು, ಕಾರಣ ಏನು ಅಂತ ಜನ ಕೇಳ್ತಿದ್ದಾರೆ. ನವರಾತ್ರಿ ಶುರುವಾದ ಹಿನ್ನೆಲೆ ಸುದೀಪ್​ ವೇದಿಕೆಗೆ ಚಪ್ಪಲಿ ಹಾಕಿ ಬಂದಿಲ್ವಾ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.

ಇನ್ನು  ಕಿಚ್ಚನ  ಲುಕ್‌ಗೆ ಅದೆಷ್ಟೋ ಫ್ಯಾನ್ಸ್‌ ಕಾಯುತ್ತ ಇರ್ತಾರೆ. ಇದೀಗ ಕಲರ್ಸ್‌ ವಾಹಿನಿ ಕಿಚ್ಚನ ಲುಕ್‌ ರಿವೀಲ್‌ ಮಾಡಿದೆ. ಖಡಕ್ ವಾರ್ನ್‌ ಮಾಡ್ಲಿಕ್ಕೆ ಮೊದಲ ಪಂಚಾಯ್ತಿಗೆ ಕೂಲ್‌ ಆಗಿ ಬಂದಿದ್ದಾರೆ ಕಿಚ್ಚ. ಮಾತ್ರವಲ್ಲ ಇದು ಹೆಬ್ಬುಲಿ ಗತ್ತು ಎಂದು ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ.

ಇನ್ನು ವರದಿಯ ಪ್ರಕಾರ ಕಿಚ್ಚ ಧರಿಸುವ ಕಾಸ್ಟ್ಯೂಮ್‌ ಲಕ್ಷಾಂತರ ರೂಪಾಯಿದ್ದು ಎಂದು ಹೇಳಲಾಗುತ್ತೆ. ಈ ವಾರ ಕೂಡ ಅತ್ಯಂತ ಕೂಲ್‌ ಆಗಿಯೇ ಬಂದಿದ್ದಾರೆ ಕಿಚ್ಚ. ಪ್ರತಿ ಸೀಸನ್‌ನಲ್ಲಿ ಪ್ರಮುಖ ಹೈಲೈಟ್‌ ಆಗೋದು ಕಿಚ್ಚನ ಹೊಸ ಹೇರ್‌ಸ್ಟೈಲ್‌ ಹಾಗೇ ಸ್ಟೈಲಿಶ್‌ ಉಡುಗೆ. ಈ ಬಾರಿ ಕೂಡ ಕಿಚ್ಚನ ಹೊಸ ಅವತಾರಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

 

Leave a Comment

DG Ad

RELATED LATEST NEWS

Top Headlines

ಲಾಯರ್ ಜಗದೀಶ್​ ಅವರು ಹೆಣ್ಮಕ್ಕಳು ಮುಂದೆ ಡ್ರೆಸ್ ಚೇಂಜ್ ಮಾಡ್ತಾರೆ – ದೊಡ್ಮನೆ ನಾರಿಯರು ಗರಂ..!

ಬಿಗ್ ಬಾಸ್ ಮನೆಯಲ್ಲಿ 17 ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಆರಂಭದ ದಿನಗಳಲ್ಲೇ ಸ್ಪರ್ಧಿಗಳು ಅಬ್ಬರಿಸಿದ್ದಾರೆ. ಕೆಲವರು ರೂಲ್ಸ್ ಬ್ರೇಕ್ ಮಾಡಿದ್ರೆ ಇನ್ನು ಕೆಲವರು ಜಗಳ ಮಧ್ಯೆ

Live Cricket

Add Your Heading Text Here