Download Our App

Follow us

Home » ಸಿನಿಮಾ » ಅಣ್ಣ ಎನ್ನುತ್ತಲೇ ಮೋಸ ಮಾಡಿದ್ರು.. ಚೈತ್ರಾ ಬಗ್ಗೆ ಶಿಶಿರ್ ಹಿಂಗ್ಯಾಕಂದ್ರು..?

ಅಣ್ಣ ಎನ್ನುತ್ತಲೇ ಮೋಸ ಮಾಡಿದ್ರು.. ಚೈತ್ರಾ ಬಗ್ಗೆ ಶಿಶಿರ್ ಹಿಂಗ್ಯಾಕಂದ್ರು..?

ಕನ್ನಡ ಬಿಗ್​ ರಿಯಾಲಿಟಿ ಶೋ ಬಿಗ್​​ ಬಾಸ್​ ಸೀಸನ್​​ 11ರಿಂದ ಶಿಶಿರ್‌ ಶಾಸ್ತ್ರಿ ಎಲಿಮಿನೇಟ್‌ ಆಗಿದ್ದಾರೆ. ಶಿಶಿರ್‌ ಬಿಗ್‌ ಬಾಸ್‌ನ ಸ್ಟ್ರಾಂಗ್‌ ಕಂಟೆಸ್ಟಂಟ್‌ ಆಗಿ ಗುರುತಿಸಿಕೊಂಡಿದ್ದರು. ಆದರೆ ತಮ್ಮ ಜನ್ಮದಿನಂದೇ ಶಿಶಿರ್ ಬಿಗ್​​ ಬಾಸ್​ ಮನೆಯಿಂದ ಹೊರ ಬಂದಿದ್ದಾರೆ.

ಇದೀಗ ಬಿಗ್​​ ಬಾಸ್​​ನಿಂದ ಎಲಿಮಿನೇಟ್‌ ಆಗಿರುವ ಶಿಶಿರ್‌ ಶಾಸ್ತ್ರಿ ಅವರು ಬಿಟಿವಿಗೆ ಸಂದರ್ಶನವನ್ನು ನೀಡಿದ್ದಾರೆ. ಬಿಟಿವಿಗೆ ನೀಡಿದ ಸಂದರ್ಶನದಲ್ಲಿ ಶಿಶಿರ್ ಅವರು, ಚೈತ್ರಾ ಮತ್ತು ಅವರ ಅಣ್ಣ-ತಂಗಿ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಚೈತ್ರಾ ನನಗೆ ಬಯಸದೇ ಬಂದ ಭಾಗ್ಯ. ನರಕರಲ್ಲಿ ಇದ್ದಾಗ ನಮ್ಮ ಅಣ್ಣ-ತಂಗಿ ಬಾಂಧವ್ಯ ಶುರುವಾಗಿದ್ದು. ಅಲ್ಲು ಸ್ವಲ್ಪ ಇರುಸು-ಮುರುಸು ಆಗುತ್ತೆ. ಅದನ್ನು ಸರಿ ಮಾಡುತ್ತೇವೆ.

ಆದ್ರೆ ನನಗೆ ಮೇಜರ್​ ಹೊಡೆತ ಬಿದ್ದಿದ್ದೆ ಆಕೆ ನನ್ನ ಬಗ್ಗೆ ಒಂದಷ್ಟು ಮಾತನಾಡಿದಾಗ. ನಾನು ಮತ್ತು ಮಂಜಣ್ಣ ಒಂದು ಟಾಸ್ಕ್​​ ಅನ್ನು ಪ್ಲಾನ್​​ ಮಾಡಿಕೊಂಡು ಬೇರೆ ದಿಕ್ಕಲ್ಲೇ ಆಡಿಸುತ್ತೇವೆ. ಆ ಟೈಮ್​​ನಲ್ಲಿ ದೊಡ್ಡ ಮಟ್ಟದಲ್ಲಿ ಜಗಳ ಆಯಿತು. ಮತ್ತೇ ಜೋಡಿ ಟಾಸ್ಕ್​ನಲ್ಲಿಒಂದಾದಾಗ 2 ಟಾಸ್ಕ್​​ ವಿನ್​​ ಆಗುತ್ತೇವೆ. ಆದ್ರೆ ಚೈತ್ರಾ ಅವರು ತ್ರಿವಿಕ್ರಮ್ ಮಾನಸಿಕವಾಗಿ, ದೈಹಿಕವಾಗಿ ಗಟ್ಟಿ ವ್ಯಕ್ತಿ’ ಎಂಬ ಕಾರಣವನ್ನು ನೀಡಿ ಅವರನ್ನ ಆಯ್ಕೆ ಮಾಡುತ್ತೇರೆ. ನಂತರ ನಾನು ನನ್ನ ಕೋಪವನ್ನು ನಾಮಿನೇಷನ್​​ನಲ್ಲಿ ತೋರಿಸಿದೆ ಎಂದಿದ್ದಾರೆ.

ಇದನ್ನೂ ಓದಿ : ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಪ್ರಾರಂಭಿಸಲು ಸಾಥ್​​ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್..!

 

 

Leave a Comment

DG Ad

RELATED LATEST NEWS

Top Headlines

ಹೊಸ ವರ್ಷದ ಆರಂಭದಲ್ಲೇ ಬಿಗ್ ಶಾಕ್​​.. ಸ್ಟಾರ್ ನಟನಿಗೆ ಅನಾರೋಗ್ಯ – ಫ್ಯಾನ್ಸ್ ಆತಂಕ.. ಹೆಲ್ತ್​ ಬುಲೆಟಿನ್​​​ನಲ್ಲಿ ಏನಿದೆ ?

ಚೆನ್ನೈ : ತಮಿಳು ನಟ ವಿಶಾಲ್‌ ಅವರು ಗಂಭೀರವಾದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆಯೇ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ತಮಿಳು ಚಿತ್ರರಂಗದಲ್ಲಿ ವಿಶಾಲ್‌ ಫೇಮಸ್‌ ಆಗಿದ್ದಾರೆ. ಅಲ್ಲದೆ

Live Cricket

Add Your Heading Text Here