ಬಿಗ್ಬಾಸ್ ಸೀಸನ್ 11 ಆರಂಭವಾಗಿದೆ. ಒಬ್ಬೊಬ್ಬರಾಗಿ ಕಂಟೆಸ್ಟೆಂಟ್ಗಳು ಬಿಗ್ಬಾಸ್ ಮನೆ ಪ್ರವೇಶಿಸುತ್ತಿದ್ದಾರೆ. ಇದೀಗ ಉಗ್ರಂ ಮಂಜು 15ನೇ ಸ್ಪರ್ಧಿಯಾಗಿ, ಮೋಕ್ಷಿತಾ 16ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರೇ ಕೊನೆಯ ಸ್ಪರ್ಧಿಯಾಗಿ ರಂಜಿತ್ ದೊಡ್ಮನೆ ಪ್ರವೇಶಿಸಿದ್ದಾರೆ.
ಮೋಕ್ಷಿತಾ ಪೈ ಅವರು ಜನಪ್ರಿಯತೆ ಪಡೆದಿದ್ದು ‘ಪಾರು’ ಧಾರಾವಾಹಿ ಮೂಲಕ. ಮೋಕ್ಷಿತಾ ಪೈ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 6.96 ಲಕ್ಷ ಹಿಂಬಾಲಕರು ಇದ್ದಾರೆ. ಇನ್ನು ಅವರು ಬಿಗ್ ಬಾಸ್ ಎಂಟ್ರಿಗೂ ಮೊದಲು ಬಾಲಿ ಟ್ರಿಪ್ ಮಾಡಿ ಬಂದಿದ್ದಾರೆ.
ಕನ್ನಡದ ಖ್ಯಾತ ನಟ ಉಗ್ರಂ ಮಂಜು ಅವರು ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಉಗ್ರಂ’ ಸಿನಿಮಾದಲ್ಲಿ ನೆಗೆಟಿವ್ ಪಾತ್ರವನ್ನು ಮಂಜು ಮಾಡಿದರು. ಆ ಬಳಿಕ ಅವರ ಹೆಸರಿನ ಜೊತೆ ‘ಉಗ್ರಂ’ ಎಂಬುದು ಕೂಡ ಸೇರಿಕೊಂಡಿತು. ನಂತರ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು.
ಉಗ್ರಂ ಮಂಜು ಅವರು ಸಿನಿಮಾದಲ್ಲಿ ಹೇಗೆ ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ರಿಯಲ್ ಲೈಫ್ನಲ್ಲಿ ಅವರು ಯಾವ ರೀತಿ ಇದ್ದಾರೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅವರ ನಿಜವಾದ ವ್ಯಕ್ತಿತ್ವ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಿಂದ ಗೊತ್ತಾಗಲಿದೆ.
ಇನ್ನು ಶನಿ ಧಾರಾವಾಹಿಯಲ್ಲಿ ಸೂರ್ಯದೇವ ಪಾತ್ರಧಾರಿ ರಂಜಿತ್ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ರಂಜಿತ್ ಕುಮಾರ್ ಸೂರ್ಯದೇವನ ಪಾತ್ರದಲ್ಲಿ ಮಿಂಚಿದ್ದು ಅವರ ಅಭಿನಯನ್ನು ಕರುನಾಡ ಜನತೆ ಮೆಚ್ಚಿಕೊಂಡಿದ್ದರು.
ಇದನ್ನೂ ಓದಿ : ಮೈಸೂರಲ್ಲಿ ರೇವ್ ಪಾರ್ಟಿ ನಡೆಸಿದ್ದವರ ಮೇಲೆ FIR ದಾಖಲು..!
Post Views: 112