ಬಿಗ್ ಬಾಸ್ ಮನೆಯಲ್ಲಿ ಆಗಾಗ ಗಲಾಟೆ ನಡೆಯುತ್ತಲೇ ಇರುತ್ತವೆ. ಆದರೆ ಈ ಬಾರಿಯ ಬಿಗ್ಬಾಸ್ ಮನೆಯಲ್ಲಿ ಪ್ರತಿನಿತ್ಯ ಸ್ಫರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸ್ಪರ್ಧಿಗಳ ಮಧ್ಯೆ ವಾದ ವಿವಾದಗಳು ನಡೆಯುತ್ತಲೇ ಇವೆ. ಅದರಲ್ಲೂ ಜಗದೀಶ್ ಪ್ರತಿದಿನ ಸುದ್ದಿಯಲ್ಲಿರುತ್ತಾರೆ.
ಈ ಹಿಂದೆ ಕೂಡ ಬಿಗ್ ಬಾಸ್ ಶೋ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಜಗದೀಶ್ ಇದೀಗ ಮತ್ತೆ ಸಿಟ್ಟಿಗಿದ್ದು, ಮನೆಯಿಂದ ಹೋಗುತ್ತೇನೆ ಅಂತಿದ್ದಾರೆ. ಕ್ಯಾಮರಾ ಮುಂದೆ ಬಿಗ್ ಬಾಸ್‌ಗೇನೆ ಬೈದಿದ್ದಾರೆ. ಇದರಿಂದ ಮನೆಯ ಇತರ ಸದ್ಯರಿಗೆ ಬೇಸರ ಆಗಿದೆ.
ಇನ್ನು ಜಗದೀಶ್ ವರ್ತನೆಗೆ ರಂಜಿತ್, ಉಗ್ರಂ ಮಂಜು ಅವರು ಉಗ್ರ ರೂಪ ತಾಳಿದ್ದಾರೆ. ಇನ್ನೇನು ಹೊಡೆದಾಡೋದು ಒಂದು ಬಾಕಿ ಇತ್ತು. ಆದರೆ, ಬಿಗ್ ಬಾಸ್ ಕ್ಯಾಪ್ಟನ್ ಶಿಶಿರ್ ಇದನ್ನ ಹ್ಯಾಂಡಲ್ ಮಾಡಿದ್ದಾರೆ.ಜಗದೀಶ್ ಅವರನ್ನ ಮನೆಯ ಕನ್ಫೆಷನ್ ರೂಮ್‌ಗೆ ಕಳಿಸೋವಲ್ಲಿ ಶಿಶಿರ್ ಸಕ್ಸಸ್ ಆಗಿದ್ದಾರೆ. ಇದನ್ನ ನೋಡಿದ ಬಿಗ್ ಬಾಸ್ ತುಂಬಾನೆ ಖುಷಿ ಆಗಿದ್ದಾರೆ.
ಬಿಗ್ ಬಾಸ್ ಬ್ರೇಕ್ ಅಲ್ಲಿಯೇ ಇದ್ದಾರೆ. ಹಾಗಾಗಿಯೇ ಫೋನ್ ಮೂಲಕವೇ ಎಲ್ಲವನ್ನೂ ಹೇಳುತ್ತಿದ್ದಾರೆ. ಆದರೂ ಮನೆಯಲ್ಲಿ ಏನೇನೋ ಆಗುತ್ತಿದೆ. ಅದನ್ನ ಅಷ್ಟೇ ಸಹನೆಯಿಂದಲೇ ಶಿಶಿರ್ ಮ್ಯಾನೇಜ್ ಮಾಡುತ್ತಿದ್ದಾರೆ.