Download Our App

Follow us

Home » ಸಿನಿಮಾ » ಬಿಗ್​ಬಾಸ್ ಮನೆಮಂದಿಯೆಲ್ಲ ತುಕಾಲಿ ಮಹಾರಾಜರಿಗೆ ಸೇವಕರು..!

ಬಿಗ್​ಬಾಸ್ ಮನೆಮಂದಿಯೆಲ್ಲ ತುಕಾಲಿ ಮಹಾರಾಜರಿಗೆ ಸೇವಕರು..!

ಕೆಲವು ದಿನಗಳ ಹಿಂದೆ ಬಿಗ್‌ಬಾಸ್‌, ಮನೆಯಲ್ಲಿರುವ ಆರು ಸ್ಪರ್ಧಿಗಳಿಗೆ ಅವರ ಆಸೆಗಳನ್ನು ಕೇಳಿತ್ತು. ಈಗ ಅವರ ಆಸೆಗಳನ್ನೆಲ್ಲ ಒಂದೊಂದಾಗಿ ಈಡೇರಿಸುತ್ತಿದ್ದಾರೆ ಬಿಗ್‌ಬಾಸ್. ಆ ಸನ್ನಿವೇಶ ಹೇಗಿದೆ ಎಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

‘ತುಕಾಲಿಯವರೆ ಕೆಲಸಮಯಕ್ಕೆ ರಾಜನಂತೆ ಬದುಕಬೇಕು’ ಎಂದು ಬಿಗ್‌ಬಾಸ್‌ ಹೇಳಿದ್ದಾರೆ. ಅದಕ್ಕೆ ಅನುಗುಣವಾಗಿ ಕೆಂಪು ಸೂಟ್ ತೊಟ್ಟುಕೊಂಡ ತುಕಾಲಿ ಮಹಾರಾಜ್‌, ಮರುಕ್ಷಣವೇ ಮನೆಮಂದಿಗೆ ಅಪ್ಪಣೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ‘ಪಿಲ್ಲೊವನ್ನು ತೆಗೆದುಕೊಂಡು ನನಗೆ ಬೀಸು’ ಎಂದು ಕಾರ್ತಿಕ್‌ಗೆ ಅಪ್ಪಣೆ ಮಾಡಿದ್ದಾರೆ.

ಅಷ್ಟೇ ಅಲ್ಲ, ತುಕಾಲಿ ಮಹಾರಾಜರ ಮನಗೆಲ್ಲಲು ಬಿಗ್‌ಬಾಸ್‌ ಮನೆಯಲ್ಲಿ ಹೊಸ ರಾಜಕುಮಾರಿ ಅವತರಿಸಿದ್ದಾಳೆ. ಅಪ್ಪಣೆ ಮಾಡುವ ಮುನ್ನವೇ ತುಕಾಲಿ ಅವರಿಗೆ ಅವಸರವಸರವಾಗಿ ಮುತ್ತಿಟ್ಟು ತನ್ನ ಪ್ರೇಮವನ್ನೂ ವ್ಯಕ್ತಪಡಿಸಿದ್ದಾಳೆ. ‘ಎಷ್ಟು ಆತುರದಿಂದ ಕಾಯುತ್ತಿದ್ದೀಯಾ ಎಂದು ಈಗ ಗೊತ್ತಾಯ್ತು’ ಎಂದು ಆ ರಾಜಕುಮಾರಿಯ ಪ್ರೇಮಕ್ಕೆ ಮಹಾರಾಜರೇ ತಬ್ಬಿಬ್ಬಾಗಿದ್ದಾರೆ.

ಅಷ್ಟೇ ಅಲ್ಲ, ಪ್ರತಾಪ್‌ ಕಂಪನಿಯ ಡ್ರೋಣ್‌ ಬಿಗ್‌ಬಾಸ್‌ ಮನೆಯೊಳಗೆ ಲ್ಯಾಂಡ್ ಆಗಿದೆ. ನೀಲಿ ಬಣ್ಣದ ಈ ಡ್ರೋಣ್ ಚೆಲುವೆಯನ್ನು ನೋಡಿ ಪ್ರತಾಪ್‌, ಹಳೆಯ ಪ್ರೇಯಸಿಯನ್ನು ಕಂಡಷ್ಟೇ ಉತ್ಸಾಹದಿಂದ ಮುನ್ನುಗ್ಗಿ ಬಂದು ಎತ್ತಿಕೊಂಡಿದ್ದಾರೆ. ಬಿಗ್‌ಬಾಸ್‌ನ ಈ ಸೀಸನ್‌ ಕೊನೆಯ ದಿನಗಳು ಭಾವುಕತೆ, ಸಾರ್ಥಕತೆ ಮತ್ತು ಭರಪೂರ ಮನರಂಜನೆಯ ನಗುವಿನಲ್ಲಿ ತುಂಬಿಹೋಗುತ್ತಿದೆ.

ಮನೆಯೊಳಗಿನ ಆರು ಸ್ಪರ್ಧಿಗಳೂ ತಮ್ಮೆಲ್ಲ ಜಿದ್ದು ಮರೆತು ಈ ಕ್ಷಣದ ಖುಷಿಯಲ್ಲಿ ಕಳೆದುಹೋಗುತ್ತಿದ್ದಾರೆ. ‘ಹ್ಯಾಪಿ ಬಿಗ್‌ಬಾಸ್’ ಎಂಬ ಟ್ಯಾಗ್‌ ಲೈನ್‌ ಅನ್ನು ಅಕ್ಷರಶಃ ಸತ್ಯವಾಗಿಸುತ್ತಿದ್ದಾರೆ. ಬಿಗ್‌ಬಾಸ್‌ ಸೀಸನ್ 10 ಫಿನಾಲೆ ಈ ವಾರಾಂತ್ಯದಲ್ಲಿ ನಡೆಯಲಿದ್ದು, ಯಾರು ಗೆಲ್ಲುತ್ತಾರೆ ಎಂಬ ಕೋಟಿ ಜನರ ಕುತೂಹಲಕ್ಕೆ ಉತ್ತರ ಸಿಗಲಿದೆ.

ಇದನ್ನೂ ಓದಿ : ದೆಹಲಿಯಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ : ಕರ್ತವ್ಯ ಪಥದಲ್ಲಿ ನಾರಿ ಶಕ್ತಿ ಅನಾವರಣ..!

Leave a Comment

DG Ad

RELATED LATEST NEWS

Top Headlines

‘ನಮ್ಮತ್ತೆ ಬೇಗ ಸಾಯಲಿ’ – 20 ರೂ. ನೋಟ್‌ ಮೇಲೆ ಬರೆದು ದೇವಿಯ ಹುಂಡಿಗೆ ಹಾಕಿದ ಸೊಸೆ..!

ಕಲಬುರಗಿ : ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು ಅಂತಾ ನೋಟ್ ಮೇಲೆ ಬರೆದು ಹುಂಡಿಗೆ ಕಾಣಿಕೆ ಹಾಕಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಈ ಲೆಟರ್

Live Cricket

Add Your Heading Text Here