ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರದ ಆರಂಭದಿಂದಲೂ ಜೋಡಿ ಟಾಸ್ಕ್ ನಡೆಯುತ್ತಿದೆ. ಇನ್ನೇನು ಇಂದು ವಾರದ ಟಾಸ್ಕ್ಗಳೆಲ್ಲವೂ ಮುಕ್ತಾಯಗೊಳ್ಳಲಿದೆ. ಬಳಿಕ ಕಳಪೆ-ಉತ್ತಮ ಯಾರು ಎಂಬ ನಿರ್ಧಾರವಾಗಲಿದೆ.
ಇದೀಗ ಕಲರ್ಸ್ ಕನ್ನಡ ಇಂದಿನ ಸಂಚಿಕೆಯ ಪ್ರೋಮೋವನ್ನು ಹಂಚಿಕೊಂಡಿದೆ. ಇದರಲ್ಲಿ ಈ ವಾರದ ಕಳಪೆ ಯಾರು ಎಂಬುದನ್ನು ಆಯ್ಕೆ ಮಾಡೋದನ್ನು ನೋಡಬಹುದಾಗಿದೆ. ಅಲ್ಲದೇ ಪ್ರೋಮೋ ಪ್ರಕಾರ ಈ ವಾರದ ಕಳಪೆ ಎಂದು ಸ್ಪರ್ಧಿಗಳು ಧನ್ರಾಜ್ ಆಚಾರ್ರನ್ನು ಆಯ್ಕೆ ಮಾಡುತ್ತಾರೆ.
ಹೌದು, ಈ ವಾರದ ಟಾಸ್ಕ್ಗಳೆಲ್ಲವೂ ಈಗಾಗಲೇ ಮುಕ್ತಾಯವಾಗಿದೆ. ನಾಳೆ ಕಿಚ್ಚನ ಪಂಚಾಯ್ತಿ ನಡೆಯಲಿದೆ, ಇದೀಗ ಪ್ರೋಮೋದಲ್ಲಿ ತೋರಿಸಿರುವಂತೆ ಮನೆಯವರೆಲ್ಲರೂ ಸೇರಿ ಧನ್ರಾಜ್ ಅವರನ್ನೇ ಕಳಪೆ ಎಂದು ಹೇಳೋದನ್ನು ನೋಡಬಹುದು. ಅಲ್ಲದೇ ಪ್ರೋಮೋ ಅಂತ್ಯದಲ್ಲಿ ಧನ್ರಾಜ್ ಅವರು ಕಳಪೆ ಬಟ್ಟೆಯನ್ನು ಮತ್ತು ಬಿಗ್ಬಾಸ್ ಜೈಲಿನಲ್ಲಿ ಕುಳಿತಿರೋದನ್ನು ನೋಡಬಹುದು.
ಈ ವಾರ ಬಿಗ್ಬಾಸ್ ಸ್ಪರ್ಧಿಗಳನ್ನು ಜೋಡಿಗಳಾಗಿ ಮಾಡಿದ್ದರು. ಅದರಲ್ಲಿ ಮೋಕ್ಷಿತಾ ಮತ್ತು ಧನ್ರಾಜ್ ಅವರು ಒಂದು ಜೋಡಿಯಾಗಿದ್ದರು. ಇದೀಗ ಮೋಕ್ಷಿತಾ ಅವರೇ ಧನ್ರಾಜ್ ಅವರಿಗೆ ಕಳಪೆ ಪಟ್ಟಕೊಟ್ಟಿದ್ದಾರೆ. ಇದನ್ನು ಕೇಳಿ ಧನ್ರಾಜ್ ಅವರೇ ನನ್ನ ಪಾರ್ಟ್ನರ್ ಆಗಿ ಕಳಪೆ ಕೊಡ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಈ ವೇಳೆ ಮೋಕ್ಷಿತಾ, ಧನ್ರಾಜ್ ಅವರಿಗೆ ಪಾರ್ಟ್ನರ್ ಆಗಿ ಎಷ್ಟು ಸಪೋರ್ಟ್ ಆಗಿದ್ರಿ ಎಂದು ಕೇಳುತ್ತಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಧನ್ರಾಜ್ ಅವರು ಮೋಕ್ಷಿತಾ ಅವರಿಗೆ ‘ಅಹಂಕಾರ ಇದೆ ನಿಮಗೆ’ ಎಂದು ಹೇಳುತ್ತಾರೆ. ಇದನ್ನು ಕೇಳಿ ಮೋಕ್ಷಿತಾ ಅವರು ರೊಚ್ಚಿಗೆದ್ದಿದ್ದಾರೆ. ಆ ಬಳಿಕ ಬೇರೆ ಸ್ಪರ್ಧಿಗಳ ಬಳಿ ಅಹಂಕಾರ ಅಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರಣಗಲ್ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ಆವರಿಸಿಕೊಂಡ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್..!