‘ಇಬ್ಬರು ಹೆಂಡಿರ ಪತಿ’ ಎಂಬ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದ ಅರ್ಮಾನ್ ಮಲಿಕ್, ತಮ್ಮ ಪತ್ನಿಯರಾದ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಜೊತೆಗೆ ‘ಬಿಗ್ ಬಾಸ್‘ ಹಿಂದಿ ಓಟಿಟಿ ಸೀಸನ್ 3ಕ್ಕೆ ಎಂಟ್ರಿ ಕೊಟ್ಟಿದ್ದರು.
ಒಟಿಟಿ ಸೀಸನ್ 3ರ ಮೊದಲ ವಾರವೇ ಪಾಯಲ್ ಎಲಿಮಿನೇಟ್ ಆಗಿದ್ದರು. ಬಳಿಕ ಅರ್ಮಾನ್ ತನ್ನ ಎರಡನೇ ಪತ್ನಿ ಕೃತಿಕಾ ಅವರೊಂದಿಗೆ ಶೋನಲ್ಲಿ ಇದ್ದರು. ಆದರೆ ಅರ್ಮಾನ್ ಮಲಿಕ್ ಫಿನಾಲೆ ಸನಿಹಕ್ಕೆ ಬಂದು ಎಡವಿದ್ದಾರು.
ಸಾಂಸಾರಿಕ ಬದುಕಿನ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಅರ್ಮಾನ್ ಪಾಯಲ್ ಅವರನ್ನು ಮದ್ವೆಯಾಗಿದ್ದರು. ಆ ನಂತರ ತಮ್ಮ ಹೆಂಡ್ತಿ ಪಾಯಲ್ ಅವರ ಸ್ನೇಹಿತೆ ಕೃತಿಕಾ ಅವರನ್ನೂ ಪ್ರೀತಿಸಿ ಮದುವೆಯಾದರು. ಇದೀಗ ಇಬ್ಬರು ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಮಲಿಕ್ ಅವರೊಂದಿಗಿನ ಸಂಬಂಧದ ಬೆನ್ನಲ್ಲೇ ಮತ್ತೊಬ್ಬರನ್ನು ಅರ್ಮಾನ್ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.
ಅರ್ಮಾನ್ ಮಲ್ಲಿಕ್ ಮೂರನೇ ಮದುವೆಯಾಗಿದ್ದಾರೆ ಎನ್ನಲಾಗಿದೆ. ಅರ್ಮಾನ್ ಮಲ್ಲಿಕ್ -ಪಾಯಲ್ ಮತ್ತು ಕೃತಿಕಾ ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಈ ನಾಲ್ಕು ಮಕ್ಕಳನ್ನು ಮನೆಯಲ್ಲಿ ಇರುವ ಪಾಯಲ್ ಮತ್ತು ಕೃತಿಕಾ ಅವರಿಗೆ ನೋಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಇನ್ನೊಬ್ಬರನ್ನು ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.
ಅರ್ಮಾನ್ ಅವರು, ಲಕ್ಷ್ಯ್ ಸೋಗಲ್ ಎಂಬರನ್ನು ಅರ್ಮಾನ್ ಮದುವೆಯಾಗಿದ್ದಾರೆ ಎನ್ನಲಾಗಿದೆ. ಜತೆಗೆ ಲಕ್ಷ್ಯ ಜತೆಗೆ ರೀಲ್ಸ್ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ. ಇದೀಗ ಇಬ್ಬರೂ ಇದ್ದರೂ ಮತ್ತೊಂದು ಮದುವೆಯಾಗಿರುವುದಕ್ಕೆ ನೆಟ್ಟಿಗರು ಕಮೆಂಟ್ ಮೂಲಕ ಅರ್ಮಾನ್ ಅವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಕೇದಾರನಾಥನ ಸನ್ನಿಧಾನದಲ್ಲಿ ‘ಕಣ್ಣಪ್ಪ’ ಚಿತ್ರತಂಡ – 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಮುಂದಾದ ವಿಷ್ಣು ಮಂಚು..!