ಬಿಗ್ಬಾಸ್ನಲ್ಲಿ ಹನುಮಂತ ತನ್ನ ಮುಗ್ಧತೆ ಹಾಗೂ ಸರಳತೆ ಮೂಲಕ ಎಲ್ಲರ ಗಮನ ಸೆಳೆದು ಕನ್ನಡಗರ ಮನಸ್ಸಿನಲ್ಲಿ ಮನೆ ಮಾಡಿದ್ದಾನೆ. ಅದರಲ್ಲೂ ಹನುಮಂತನ ಮಾತುಗಳಿಗೆ ಕನ್ನಡ ನಾಡು ಫಿದಾ ಆಗಿದೆ. ಹೀಗಿದ್ದರೂ ಬಿಗ್ಬಾಸ್ ಮನೆಯಲ್ಲಿ ಹನುಮಂತನಿಗೆ ಶತ್ರುಗಳ ಕಾಟ ತಪ್ಪಿಲ್ಲ. ಎಲ್ಲಿ ಹನುಮಂತ ಬಿಗ್ಬಾಸ್ ಸೀಸನ್ ವಿನ್ನರ್ ಆಗಿಬಿಡ್ತಾನೋ ಅಂತಾ ರೊಚ್ಚಿಗೆದ್ದು ಸಹ ಸ್ಪರ್ಧಿಗಳು ಕುತಂತ್ರ ಮಾಡುತ್ತಲೇ ಇರುತ್ತಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರ ಆಟ ಅನೇಕರಿಗೆ ಇಷ್ಟ ಆಗಿದ್ದು, ಯಾರಾದರೂ ಅವರನ್ನು ನಾಮಿನೇಟ್ ಮಾಡಿದರೆ ತಲೆಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ಅವರಿಗೆ ಯಾವುದೇ ಚಿಂತೆ ಇಲ್ಲ. ನಿನ್ನೆಯ ಎಪಿಸೋಡ್ನಲ್ಲಿ ಕ್ಯಾಪ್ಟನ್ ಭವ್ಯಾ ಗೌಡ ಅವರು ಹನುಮಂತ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಈ ಬಗ್ಗೆ ಹನುಮಂತ ತುಟುಕ್ ಪಿಟಕ್ ಎನ್ನಲಿಲ್ಲ. ಆದರೆ, ಆ ಬಳಿಕ ಈ ಬಗ್ಗೆ ಮಾತನಾಡಿದರು.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರತಿ ಕ್ಯಾಪ್ಟನ್ಗೆ ವಿಶೇಷ ಅಧಿಕಾರ ಇರುತ್ತದೆ. ಒಬ್ಬರನ್ನು ನಾಮಿನೇಟ್ ಮಾಡಲು ಅಥವಾ ನಾಮಿನೇಷನ್ನಿಂದ ಬಚಾವ್ ಮಾಡುವ ಅಧಿಕಾರ ಇರುತ್ತದೆ. ಒಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರವನ್ನು ಭವ್ಯಾಗೆ ಬಿಗ್ ಬಾಸ್ ನೀಡಿದರು. ಇದರ ಪ್ರಕಾರ ಹನುಮಂತ ಅವರನ್ನು ಭವ್ಯಾ ನಾಮಿನೇಟ್ ಮಾಡಿದರು. ‘ಟಾಸ್ಕ್ ಬಗ್ಗೆ ನಾನು ಏನನ್ನೂ ಹೇಳಲ್ಲ. ವೈಯಕ್ತಿಕವಾಗಿ ಕೆಲವು ವಿಚಾರ ಇಷ್ಟ ಆಗುವುದಿಲ್ಲ. ಏನಾದರೂ ಹೇಳಿದ್ರೆ, ನಂದು ನಾನು ಹೇಳಿದ್ದೀನಿ, ನಿಂದು ಬಂದಾಗ ನೀನು ಹೇಳಿಕೋ ಎನ್ನುತ್ತಾರೆ’ ಎಂಬ ಕಾರಣ ನೀಡಿ ಭವ್ಯಾ ನಾಮಿನೇಟ್ ಮಾಡಿದರು.
ಆ ಬಳಿಕ ಧನರಾಜ್ ಅವರು ಈ ಬಗ್ಗೆ ಹನುಮಂತನ ಬಳಿ ಚರ್ಚೆ ಮಾಡಿದರು. ‘ಭವ್ಯಾ ನಿಮಗೆ ವೈಯಕ್ತಿಕ ಕಾರಣ ನೀಡಿ ನಾಮಿನೇಟ್ ಮಾಡಿದರು. ನೀವು ಕೂಡ ಟಾಸ್ಕ್ ಬದಲು ವೈಯಕ್ತಿಕ ಕಾರಣ ನೀಡಿ ನಾಮಿನೇಟ್ ಮಾಡಬೇಕಿತ್ತು’ ಎಂದು ಹೇಳಿದರು. ಆಗ ಹನುಮಂತ ‘ಇಲ್ಲಿ ಎಲ್ಲರೂ ತಿಪ್ಪೆಗುಂಡಿ, ಅದನ್ನು ಕೆದರುತ್ತಿದ್ದರೆ ಹೊಲಸು ಬರುತ್ತಲೇ ಇರುತ್ತದೆ’ ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ಇಂದು ನಕ್ಸಲ್ ನಾಯಕ ವಿಕ್ರಂಗೌಡ ಅಂತ್ಯಕ್ರಿಯೆ..!