ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ 2 ದಶಕಕ್ಕೂ ಅಧಿಕ ಸಮಯ ಕೆಲಸ ಮಾಡಿರುವ ಅನುಭವ ಹೊಂದಿರುವ ನಟಿ ಹಂಸ ಅವರು ಈ ಬಾರಿಯ ‘ಬಿಗ್ ಬಾಸ್’ ಕನ್ನಡ ಸೀಸನ್ 11ರ ಶೋಗೆ ಹೋಗಿದ್ದರು. ಈ ಸೀಸನ್ನ ಮೊದಲ ಕ್ಯಾಪ್ಟನ್ ಕೂಡ ಅವರೇ ಆಗಿದ್ದರು. ನಟಿಯಾಗಿ ಗುರುತಿಸಿಕೊಂಡಿರುವ ಹಂಸ ಅವರು ಬಹಳ ಸಮಯ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎಂಬ ನಿರೀಕ್ಷೆ ವೀಕ್ಷಕರಲ್ಲಿ ಇತ್ತು. ಆದರೆ ಕೇವಲ ನಾಲ್ಕೇ ವಾರಗಳಲ್ಲಿ ಬಿಗ್ ಬಾಸ್ ಮನೆಯಿಂದ ಹಂಸ ಹೊರಗೆ ಬಂದಿದ್ದಾರೆ.
ಇದೀಗ ಹಂಸ ಅವರು ಬಿಗ್ಬಾಸ್ನಿಂದ ಎಲಿಮಿನೇಷನ್ ಆದ ಕಾರಣವನ್ನು ಬಿಟಿವಿ ಜೊತೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯವರೆಲ್ಲಾ ಹೇಳಿದ್ರು ನೀವು ಸೇವ್ ಆಗ್ತೀರ, ಮೊದಲ ಕ್ಯಾಪ್ಟನ್ ಆಗಿದ್ದೀರಿ, ರಿಸ್ಕ್ ತೆಗೊಂಡು ಟಾಸ್ಕ್ಗಳನ್ನು ಚೆನ್ನಾಗಿ ಆಡಿದ್ದೀರಿ ಎಂದಿದ್ರು. ಆದ್ರೆ ನಾನು ಜಗದೀಶ್ ಅವರಿಗೆ ಸಪೋರ್ಟ್ ಮಾಡಿರ್ಲಿಲ್ಲ, ಕ್ಯಾಪ್ಟನ್ ಆದಾಗ ಸರಿಯಾಗಿ ಜವಬ್ಧಾರಿ ನಿಭಾಯಿಸ್ಲಿಲ್ಲ ಹಾಗಾಗಿ ಉಳ್ಕೊಬೋದು ಅಥವಾ ಸೇವ್ ಆಗ್ಬೋದು ಅಂತ ಅನಿಸಿತ್ತು ಎಂದಿದ್ದಾರೆ.
ಜಗದೀಶ್ ಅವ್ರು ಕನ್ನಡ ಜನತೆಗೆ ತುಂಬಾ ಇಷ್ಟ ಆಗಿದ್ರು, ನಾನು ಅವ್ರ ಪರ ನಿಂತಿಲ್ಲ, ತ್ರಿವಿಕ್ರಮ್ ಮತ್ತು ರಂಜಿತ್ ಅವ್ರು ಜೊತೆ ಇದ್ದಿದ್ನ ನೋಡಿ ಜನ ಬೇರೆ ತರ ಅನ್ಕೊಂಡ್ರು. ಹಾಗಾಗಿ ಈ ಒಂದು ಕಾರಣದಿಂದ ನಾನು ಎಲಿಮಿನೇಟ್ ಆಗ್ಬೋದು ಅಂತ ನಂಗೆ ಅನಿಸಿತ್ತು. ಜನಕ್ಕೆ ಇಷ್ಟ ಆಗಿಲ್ಲ ಅಂದ್ರೆ ಎಲಿಮಿನೇಟ್ ಮಾಡ್ತಾರೆ. ನಾನು ಬಿಗ್ ಬಾಸ್ ಮನೆಯಲ್ಲಿ ಹೆಸರಿಗೆ ತಕ್ಕಂತೆ ಪ್ರೀತಿ ಮತ್ತು ಶಾಂತವಾಗಿ ಇದ್ದೆ. ಇನ್ನು ಕ್ಯಾಪ್ಟನ್ ಆಗಿದ್ದಾಗ ಎದುರಾದ ಸವಾಲುಗಳು, ಬಿಗ್ ಬಾಸ್ ಮನೆಯಲ್ಲಿ ನಡೆದ ಜಗಳ, ವಕೀಲ್ ಸಾಬ್ ಜಗದೀಶ್ ಜೊತೆಗಿನ ಕಿರಿಕ್ ಮುಂತಾದ ವಿಚಾರಗಳ ಬಗ್ಗೆ ಹಂಸ ಮಾತನಾಡಿದ್ದಾರೆ.
ಇದನ್ನೂ ಓದಿ : ಪರಭಾಷೆಯ ಸ್ಟಾರ್ ನಟರಿಗಿತ್ತು ಅಣ್ಣಾವ್ರ ಮೇಲೆ ಅಪಾರ ಪ್ರೀತಿ..!