ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿ 97 ದಿನಗಳು ಕಂಪ್ಲೀಟ್ ಆಗಿದೆ. ಸದ್ಯ ದೊಡ್ಮನೆಯಲ್ಲಿ 9 ಸ್ಪರ್ಧಿಗಳಿದ್ದಾರೆ. ಈ ಸೀಸನ್ನ ಫಿನಾಲೆ ಯಾವಾಗ ನಡೆಯಲಿದೆ ಎಂಬ ಪ್ರಶ್ನೆ ಎಲ್ಲರಿಗೂ ಇತ್ತು. ಇದಕ್ಕೆ ಈಗ ಸ್ವತಃ ಕಿಚ್ಚ ಸುದೀಪ್ ಅವರೇ ಉತ್ತರ ನೀಡಿದ್ದಾರೆ.
ನಿನ್ನೆಯ ಎಪಿಸೋಡ್ನಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್, ಬಿಗ್ಬಾಸ್ ಫಿನಾಲೆಗೆ ಇನ್ನೆಷ್ಟು ವಾರ ಬಾಕಿ ಇದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸುದೀಪ್ ಹೇಳಿರುವಂತೆ ಇನ್ನು ಫಿನಾಲೆಗೆ ಮೂರು ವಾರ ಇದೆಯಂತೆ. ಅಂದರೆ ಇನ್ನು 21 ದಿನದಲ್ಲಿ ಶೋ ಫಿನಾಲೆ ನಡೆದು ಈ ಬಾರಿ ವಿನ್ನರ್ ಯಾರು ಎಂಬುದು ಖಾತ್ರಿ ಆಗಲಿದೆ.
ಬಿಗ್ಬಾಸ್ ಮನೆಯಲ್ಲಿ ಇನ್ನೂ ಒಂಬತ್ತು ಮಂದಿ ಇದ್ದು, ಈ ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಏಕೆಂದರೆ ಈ ವಾರ ನಾಮಿನೇಷನ್ ಸಹ ಆಗಿಲ್ಲ. ಫಿನಾಲೆ ವಾರಕ್ಕೆ ಸಾಮಾನ್ಯವಾಗಿ ಐದು ಜನ ಬರುತ್ತಾರೆ. ಹಾಗಾಗಿ ಮುಂದಿನ ವಾರ ಇಬ್ಬರನ್ನು ಎಲಿಮಿನೇಟ್ ಮಾಡುವ ಸಾಧ್ಯತೆ ಇದೆ. ಅದರ ಮುಂದಿನ ವಾರ ಒಬ್ಬರನ್ನು ಎಲಿಮಿನೇಟ್ ಮಾಡಿ ಕೊನೆಯ ವಾರಕ್ಕೆ ಆರು ಅಥವಾ ಐದು ಮಂದಿಯನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ : ಬಸ್ ಟಿಕೆಟ್ ದರ ಏರಿಕೆ – ಎಲ್ಲಿಗೆ ಎಷ್ಟು ರೂ.? ಇಲ್ಲಿದೆ ಕಂಪ್ಲೀಟ್ ಲಿಸ್ಟ್..!