ಬಿಗ್ ಬಾಸ್ ಕನ್ನಡ ಸೀಸನ್ 11ರ ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಇನ್ನೂ ಈ ವಾರ ಬಿಗ್ ಬಾಸ್ ಜೋಡಿ ಟಾಸ್ಕ್ನ್ನು ನೀಡಿದೆ. ಮನೆಯ ಸ್ಪರ್ಧಿಗಳು ಜೋಡಿಗಳಾಗಿ ಒಬ್ಬರಿಗೊಬ್ಬರು ಸೊಂಟಕ್ಕೆ ಪಟ್ಟಿಕಟ್ಟಿಕೊಂಡು ಒಟ್ಟೊಟ್ಟಿಗೆ ಓಡಾಡಬೇಕು.
ಈ ಟಾಸ್ಕ್ನಲ್ಲಿ ಚೈತ್ರಾ ಹಾಗೂ ಶಿಶಿರ್ ಜೋಡಿಯಾಗಿದ್ದರು. ಆದರೆ ಬಿಗ್ಬಾಸ್ ಶಿಶಿರ್ಗೆ ಬದಲಾಗಿ ತ್ರಿವಿಕ್ರಮ್ಗೆ ಜೋಡಿ ಆಗ್ತೀರಾ ಎಂದು ಬಿಗ್ ಬಾಸ್ ಕೇಳಿದ್ದಕ್ಕೆ ಚೈತ್ರಾ ಒಪ್ಪಿಕೊಂಡಿದ್ದಾರೆ.
ಇದರಿಂದಾಗಿ ಶಿಶಿರ್ ಅನ್ನು ಬಿಗ್ಬಾಸ್ ಒಂದು ವಾರದ ಟಾಸ್ಕ್ನಿಂದ ಹೊರಗೆ ಇಟ್ಟಿದ್ದಾರೆ. ಇದು ಶಿಶಿರ್ಗೆ ತೀವ್ರ ಸಿಟ್ಟು ತರಿಸಿದೆ. ಚೈತ್ರಾ ಮೇಲೆ ಉರಿದು ಬಿದ್ದಿರುವ ಶಿಶಿರ್, ಜೋರು ಜಗಳವನ್ನೇ ಮಾಡಿದ್ದಾರೆ.
ಶಿಶಿರ್ ಗಿಂತ ತ್ರಿವಿಕ್ರಮ್ ದೈಹಿಕ ಹಾಗೂ ಮಾನಸಿಕವಾಗಿ ಸ್ಟ್ರಾಂಗ್ ಆಗಿದ್ದಾರೆ ಎಂದು ನಾನು ಈ ಆಯ್ಕೆ ಒಪ್ಪಿಕೊಂಡೆ ಎಂದು ಚೈತ್ರಾ ಹೇಳಿದ್ದಾರೆ. ಮಾನಸಿಕ ಎಂದ ಮಾತಿಗೆ ಶಿಶಿರ್ ಕೋಪಗೊಂಡು ಚೈತ್ರಾ ಮೇಲೆ ಕೂಗಾಡಿದ್ದಾರೆ.
ನಾನೇನು ಕಡ್ಲೆ ಪುರಿ ತಿನ್ತಿದ್ನಾ ಎಂದು ಶಿಶಿರ್ ಕೂಗಾಡಿದ್ರು. ನಾಮಿನೇಷನ್ ಅಂತ ಬಂದಾಗ ಅಯ್ಯೋ-ಅಮ್ಮ ಎಂದು ನಾಟಕವಾಡ್ತಾರೆ. ಈ ನಿರ್ಧಾರದಿಂದ ಒಬ್ಬರನ್ನು ಇಡೀ ವಾರದ ಟಾಸ್ಕ್ ನಿಂದ ಹೊರಗಿಡ್ತಾರೆ ಅನ್ನೋದು ದೇವರಾಣೆ ನನಗೆ ಗೊತ್ತಿರಲಿಲ್ಲ ಎಂದು ಚೈತ್ರಾ ಆಣೆ ಪ್ರಮಾಣ ಮಾಡಿದ್ದಾರೆ. 12 ವರ್ಷ ಮಣ್ಣು ಹೊತ್ತಿರೋರು ಆ್ಯಕ್ಟರ್ ಗಳು ನಾವೆಲ್ಲ, ನೋಡಿ ಇಲ್ಲಿ ಇದ್ದಾರಲ್ಲ ಚೈತ್ರಾ ಇವರೇ ಮಹಾನ್ ನಟಿ ಎಂದು ಶಿಶಿರ್, ಚೈತ್ರಾ ಕುಂದಾಪುರ ಮೇಲೆ ಕೂಗಾಡಿದ್ದಾರೆ.
ಇದನ್ನೂ ಓದಿ : ಹೊಸ ಮನೆಗೆ ಕಾಲಿಟ್ಟ ಸೋನು ಶ್ರೀನಿವಾಸ್ ಗೌಡ : ಗೃಹಪ್ರವೇಶದ ಫೋಟೋ ವೈರಲ್..!