ಬಿಗ್ ಬಾಸ್ ಸೀಸನ್ 11ರಿಂದ ಐಶ್ವರ್ಯಾ ಸಿಂಧೋಗಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಕಣ್ಣೀರಿಡುತ್ತ ಹೊರ ಬಂದ ಐಶ್ವರ್ಯಾಳಿಗೆ ಬಿಗ್ ಬಾಸ್ ತವರು ಮನೆ ಎಂದು ಧೈರ್ಯ ಕೊಟ್ಟಿದ್ದು. ಸದ್ಯ ಹೊಸ ವರ್ಷವನ್ನು ಖುಷಿಯಿಂದ ಬರ ಮಾಡಿಕೊಂಡಿರುವ ಐಶ್ವರ್ಯಾಗೆ ಫ್ಯಾನ್ಸ್ ಕರ್ನಾಟಕದ ಮಗಳು ಎಂಬ ಬಿರುದು ನೀಡಿದ್ದಾರೆ.
ಬಿಟಿವಿ ಸಂದರ್ಶನದಲ್ಲಿ ಐಶ್ವರ್ಯಾ ಸಿಂಧೋಗಿ ಶಿಶಿರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಶಿಶಿರ್ ಮತ್ತು ನನ್ನದು ಮಚ್ಚ ಮಚ್ಚಿ ರಿಲೇಶನ್ಶಿಪ್, ಇದ್ನ ನಾವು ದೊಡ್ಮನೆಯೊಳಗೂ ಹೇಳಿದ್ದೇವೆ. ನಾವು ಮನೆಯೊಳಗೆ ಒಂದು ಜೋಡಿ ತರ ಇದ್ವಿ ಅಷ್ಟೇ, ನಮ್ಮ ಮಧ್ಯೆ ಫ್ರೆಂಡ್ಶಿಪ್ ಇತ್ತು ಬೇರೆ ಏನೂ ಇಲ್ಲ. ಶಿಶಿರ್ ತುಂಬಾ ಒಳ್ಳೆಯ ವ್ಯಕ್ತಿ, ಈ ಹಿಂದೆ ನಾನು ಅವ್ರು ಜೊತೆ ಸಿನಿಮಾ ಕೂಡ ಮಾಡಿದ್ದೇನೆ. ಅವ್ರ ವ್ಯಕ್ತಿತ್ವ ನಂಗೆ ಇಷ್ಟ ಆಯ್ತು, ತುಂಬಾ ಪ್ರಾಮಾಣಿಕ ವ್ಯಕ್ತಿ ಮತ್ತು ಯಾರಿಗೂ ನೋವು ಮಾಡುವಂತವರಲ್ಲ ಅವ್ರು ಎಂದಿದ್ದಾರೆ.
ನಂಗೆ ಎಮೋಶನಲ್ ಸಪೋರ್ಟ್ ತರ ಇದ್ರು ಬಿಟ್ರೆ ಮತ್ತೆ ಏನೂ ನಮ್ಮ ಮಧ್ಯೆ ಇರಲಿಲ್ಲ. ನಮ್ಮಿಬ್ಬರಿಗೆ ವೈಬ್ ಮ್ಯಾಚ್ ಆಗ್ತಿತ್ತು, ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಜೊತೆ ಸಿಗ್ತು ನಂಗೆ ಎಂದು ಐಶ್ವರ್ಯಾ ಹೇಳಿದ್ದಾರೆ.
ಇದನ್ನೂ ಓದಿ : ಹೊಸ ವರ್ಷದಂದೇ ನೇಣು ಬಿಗಿದು ಯುವತಿ ಆತ್ಮಹತ್ಯೆ..!