ಕಲಬುರಗಿ : ಕಲಬುರಗಿಯ ಹುಮನಾಬಾದ್ ರಸ್ತೆಯ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಬೆಂಕಿ ಬಿದ್ದು, ಕ್ಷಣಾರ್ಧದಲ್ಲೇ ಇಡೀ ಶೋರೂಂ ಹೊತ್ತಿ ಉರಿದಿದ ಘಟನೆಯೊಂದು ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಓಲಾ ಶೋರೂಂಗೆ ಶಾಟ್೯ ಸರ್ಕ್ಯೂಟ್ನಿಂದ ಬೆಂಕಿ ತಗುಲಿದೆ ಎನ್ನಲಾಗ್ತಿತ್ತು. ಆದರೆ ಶೋರೂಂಗೆ ಬೆಂಕಿ ಬಿದ್ದಿದ್ದಲ್ಲ. ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಅಂತ ವ್ಯಕ್ತಿಯೊಬ್ಬ ಶೋರೂಂಗೆ ಬೆಂಕಿ ಹಚ್ಚಿದ್ದು, ಎಂಬುದು ತಿಳಿದು ಬಂದಿದೆ.
ಮಹಮ್ಮದ್ ನದೀಮ್ ಎಂಬ ವ್ಯಕ್ತಿ ತನ್ನ ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಸಿಬ್ಬಂದಿ ಜೊತೆ ವಾಗ್ವಾದ ಮಾಡಿದ್ದಾನೆ. ಬಳಿಕ ಪೆಟ್ರೋಲ್ ತಂದು ಶೋ ರೂಂ ಒಳಗೆ ಬೆಂಕಿ ಹಚ್ಚಿದ್ದಾನೆ ಎಂಬುದು ಬಯಲಾಗಿದೆ. ಇನ್ನು ಕೃತ್ಯ ಎಸಗಿದ ಆರೋಪಿ ಮಹಮ್ಮದ್ ನದೀಮ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೀದರ್ : ಸಾಲಬಾಧೆ ತಾಳಲಾರದೆ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದು ವೈದ್ಯ ಆತ್ಮಹತ್ಯೆ..!