Download Our App

Follow us

Home » ಸಿನಿಮಾ » ಯೂಟ್ಯೂಬರ್ಸ್,​ ಟ್ರೋಲರ್ಸ್​​​ಗಳಿಗೆ ಬಿಗ್​​ ಶಾಕ್​ – ಬರೋಬ್ಬರಿ 25 ಯೂಟ್ಯೂಬ್ ಚಾನೆಲ್​ಗಳನ್ನು ಡಿಲೀಟ್​ ಮಾಡಿಸಿದ ಚಿತ್ರರಂಗ..!

ಯೂಟ್ಯೂಬರ್ಸ್,​ ಟ್ರೋಲರ್ಸ್​​​ಗಳಿಗೆ ಬಿಗ್​​ ಶಾಕ್​ – ಬರೋಬ್ಬರಿ 25 ಯೂಟ್ಯೂಬ್ ಚಾನೆಲ್​ಗಳನ್ನು ಡಿಲೀಟ್​ ಮಾಡಿಸಿದ ಚಿತ್ರರಂಗ..!

ಸಿನಿಮಾ ತಾರೆಯರ ಬಗ್ಗೆ ಬೇಕಾಬಿಟ್ಟಿ ಮಾತನಾಡುತ್ತಿದ್ದ, ಟ್ರೋಲ್ ಮಾಡುತ್ತಿದ್ದ ಯೂಟ್ಯೂಬರ್​​ಗಳಿಗೆ ಚಿತ್ರರಂಗ ಬಿಗ್​​​ ಶಾಕ್ ಕೊಟ್ಟಿದೆ.​ ನಟ-ನಟಿಯರ ಬಗ್ಗೆ ಸುಳ್ಳು ಸುದ್ದಿ ಹರಡುವ, ಸಿನಿಮಾಗಳ ಬಗ್ಗೆ ನೆಗೆಟಿವ್ ವಿಮರ್ಶೆ ನೀಡುವ ಯೂಟ್ಯೂಬ್ ಚಾನೆಲ್​ಗಳ ಮೇಲೆ ಗರಂ ಆಗಿರುವ ತೆಲುಗು ಚಿತ್ರರಂಗ, ಇದೀಗ ಬರೋಬರಿ 25 ಯೂಟ್ಯೂಬ್ ಚಾನೆಲ್​ಗಳನ್ನು ಪೊಲೀಸರ ಸಹಾಯದಿಂದ ಡಿಲೀಟ್​ ಮಾಡಿಸಿದೆ.

ಆನ್​ಲೈನ್ ಟ್ರೋಲಿಂಗ್, ಸಿನಿಮಾಗಳ ಬಗ್ಗೆ, ನಟ-ನಟಿಯರ ಬಗ್ಗೆ ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ ಯೂಟ್ಯೂಬ್ ಚಾನೆಲ್​ಗಳ ಮೇಲೆ ಕಠಿಣ ಕ್ರಮಕ್ಕೆ ತೆಲುಗು ಚಿತ್ರರಂಗ ಮುಂದಾಗಿದೆ. ಈಗಾಗಲೇ  25 ಯೂಟ್ಯೂಬ್ ಚಾನೆಲ್​ಗಳನ್ನು ಡಿಲೀಟ್​ ಮಾಡಿಸಿರುವ ಟಾಲಿವುಡ್, ಸರಿಸುಮಾರು 200 ಯೂಟ್ಯೂಬ್ ಚಾನೆಲ್‌ಗಳನ್ನ ಪಟ್ಟಿ ಮಾಡಿ, ಇದರ ವಿರುದ್ಧ ಕ್ರಮ ಕೈಗೊಳ್ಳಲು ತಯಾರಿ ನಡೆಸಿದೆ.

ಇಷ್ಟು ಮಾತ್ರವಲ್ಲದೇ, ಸೈಬರ್ ಕ್ರೈಂ ಕೂಡ ಯೂಟ್ಯೂಬ್ ಚಾನೆಲ್​ಗಳ ಮೇಲೆ ಕಣ್ಣಿಟ್ಟಿದೆ. ಇವತ್ತು ತೆಲುಗು ಚಿತ್ರರಂಗದಲ್ಲಿ ಯೂಟ್ಯೂಬ್​ ಚಾನೆಲ್​​ ಬ್ಯಾನ್​ ಆಗಿದೆ. ಆದರೆ ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಯೂಟ್ಯೂಬ್​ ಚಾನೆಲ್​ಗಳು ಕೂಡ ಬ್ಯಾನ್​ ಆಗೋ ಸಾಧ್ಯತೆಯಿದೆ.

ಕನ್ನಡಿಗರೇ ನೀವು ಎಚ್ಚರವಾಗಿರಿ. ಯೂಟ್ಯೂಬ್​ನಲ್ಲಿ ಬೇಕಾಬಿಟ್ಟಿ ಮಾತನಾಡುವುದು. ಟ್ರೋಲ್​ ಮಾಡುವುದು ಮಾಡಿದ್ರೇ ನಿಮ್ ಚಾನೆಲ್ ಕೂಡ​ ಬ್ಯಾನ್​ ಲಿಸ್ಟ್​ಗೆ ಸೇರಿಕೊಳ್ಳುತ್ತೆ. ನಟ-ನಟಿಯರ ಖಾಸಗಿ ಬದುಕಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳೋ ಯೂಟ್ಯೂಬ್​ ಚಾನೆಲ್​ಗಳ ಮೇಲೆ ಸಾಕಷ್ಟು ಕೇಸ್​ಗಳು ಬಿದ್ದು, ಜೈಲೂಟ ಮಾಡೋದು ಗ್ಯಾರೆಂಟಿ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಬಿಜೆಪಿ ಹಗರಣ ತನಿಖೆ ಮಾಡಿಸೋ ಸಿದ್ದು ಇಲ್ಲೀವರೆಗೂ ಯಾಕೆ ಸುಮ್ಮನಿದ್ರಿ – ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕಿಡಿ..! 

 

 

 

 

Leave a Comment

DG Ad

RELATED LATEST NEWS

Top Headlines

ಸಿಎಂ ಸಿದ್ದರಾಮಯ್ಯಗೆ ಸದ್ಯಕ್ಕಿಲ್ಲ CBI ಸಂಕಷ್ಟ – ಮುಡಾ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್​!

ಧಾರವಾಡ : ಇಂದು ಧಾರವಾಡ ಹೈಕೋರ್ಟ್​ನಲ್ಲಿ ಮುಡಾ ಕೇಸ್ ತನಿಖೆ ಸಿಬಿಐಗೆ ನೀಡುವಂತೆ ಕೋರಿ​ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ  ಧಾರವಾಡ ಹೈಕೋರ್ಟ್​

Live Cricket

Add Your Heading Text Here