Download Our App

Follow us

Home » ಸಿನಿಮಾ » ಮಿಡ್​ನೈಟ್​ ಬಿಗ್​ಬಾಸ್‌ ಸ್ಪರ್ಧಿಗಳಿಗೆ ಬಿಗ್ ಶಾಕ್‌ – ಮುಖ್ಯದ್ವಾರ ಓಪನ್​.. ದೊಡ್ಮನೆಯಿಂದ ಹೊರ ಬಂದಿದ್ಯಾರು?

ಮಿಡ್​ನೈಟ್​ ಬಿಗ್​ಬಾಸ್‌ ಸ್ಪರ್ಧಿಗಳಿಗೆ ಬಿಗ್ ಶಾಕ್‌ – ಮುಖ್ಯದ್ವಾರ ಓಪನ್​.. ದೊಡ್ಮನೆಯಿಂದ ಹೊರ ಬಂದಿದ್ಯಾರು?

ಕನ್ನಡ ‘ಬಿಗ್​ಬಾಸ್ ಸೀಸನ್ 11′ ರಿಯಾಲಿಟಿ ಶೋನಲ್ಲಿ ಮಧ್ಯರಾತ್ರಿ ಸ್ಪರ್ಧಿಗಳು ಏಕಾಏಕಿ ಬೆಚ್ಚಿ ಬಿದ್ದಿದ್ದಾರೆ. ದೊಡ್ಮನೆಯಲ್ಲಿ ಮಿಡ್​ವೀಕ್​ ಎಲಿಮಿನೇಷನ್​ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಕ್ಷಣ ಕ್ಷಣಕ್ಕೂ ರೋಚಕತೆ ಹೆಚ್ಚಾಗುತ್ತಿದೆ.

ಬಿಗ್​ಬಾಸ್ ಮನೆಯಲ್ಲಿ ಒಬ್ಬರಿಗೆ ಮುಖ್ಯ ದ್ವಾರದ ಬಾಗಿಲು ತೆರೆಯಲಾಗಿದೆ. ಗೌತಮಿ, ಮಂಜು, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ ಹಾಗೂ ರಜತ್ ಈ 6 ಮಂದಿಯಲ್ಲಿ ಒಬ್ಬರಿಗೆ ಬಿಗ್​ಬಾಸ್ ಮನೆಯಲ್ಲಿ ಈ ದಿನ ಕಟ್ಟ ಕಡೆಯ ರಾತ್ರಿಯಾಗುತ್ತದೆ. ಬಿಗ್​ಬಾಸ್ ಈ ಮೊದಲೇ ಮಿಡ್​ವೀಕ್ ಎಲಿಮಿನೇಷನ್ ಖಚಿತ ಅನ್ನೋದನ್ನ ಘೋಷಿಸಿತ್ತು. ಮೊದಲೇ ಸುಳಿವು ಕೊಟ್ಟಂತೆ ಇದೀಗ ಬಿಗ್​ಬಾಸ್ ಮನೆಯಲ್ಲಿ ಮಧ್ಯರಾತ್ರಿಯೇ ಸೈರನ್ ಸದ್ದು ಮಾರ್ದನಿಸಿದೆ.

ಸೈರನ್ ಸದ್ದಿಗೆ ಬೆಚ್ಚಿ ಬಿದ್ದು ಎದ್ದಿರುವ ಸ್ಪರ್ಧಿಗಳಿಗೆ ಬಿಗ್​ಬಾಸ್ ಮುಖ್ಯದ್ವಾರ ತೆರೆದು ಬಿಗ್ ಶಾಕ್ ಕೊಟ್ಟಿದ್ದಾರೆ. ಈ ಮುಖ್ಯದ್ವಾರ ಇಂದು ರಾತ್ರಿ ಯಾರಿಗಾಗಿ ತೆರೆದಿದೆ ಎಂದು ತಿಳಿದುಕೊಳ್ಳುವ ಸಮಯ ಶುರುವಾಗಿದ್ದು, ಈ ರಾತ್ರಿ ಈ ಮನೆಯಲ್ಲಿ ನಿಮ್ಮ ಕಡೆಯ ರಾತ್ರಿ ಆಗಿರಬಹುದು ಎಂದು ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ.

ಮಿಡ್​ವೀಕ್ ಎಲಿಮಿನೇಷನ್‌ನಲ್ಲಿ ಗೌತಮಿ, ಮಂಜು, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ ಹಾಗೂ ರಜತ್ ಡೇಂಜರ್ ಝೋನ್‌ ತಲುಪಿದ್ದು, ಒಬ್ಬೊಬ್ಬರು ಎಲಿಮಿನೇಟ್ ಆಗಬೇಕಾದವರ ಹೆಸರು ಹೇಳಿ ಅವರ ಫೋಟೋವನ್ನು ಸ್ವಿಮ್ಮಿಂಗ್‌ಪೂಲ್ ನೀರಿಗೆ ಎಸೆದಿದ್ದಾರೆ. ಯಾರು ಬಿಗ್​ ಬಾಸ್​ ಮನೆಗೆ ಗುಡ್​ಬೈ ಹೇಳಲಿದ್ದಾರೆ ಅನ್ನೋದು ಇನ್ನು ಕೆಲವೇ ಗಂಟೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯಗೆ ಸದ್ಯಕ್ಕಿಲ್ಲ CBI ಸಂಕಷ್ಟ – ಮುಡಾ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್​!

Leave a Comment

DG Ad

RELATED LATEST NEWS

Top Headlines

ಕಾಫಿನಾಡಲ್ಲಿ ಭೀಕರ ರಸ್ತೆ ಅಪಘಾತ – ಬೈಕ್​​ಗೆ ಡಿಕ್ಕಿ ಹೊಡೆದು ಸವಾರನನ್ನು 60 ಮೀಟರ್ ಎಳೆದೊಯ್ದ ಕಾರು..!

ಚಿಕ್ಕಮಗಳೂರು : ಕಾಫಿನಾಡಲ್ಲಿ ಎದೆ ಝಲ್ ಅನ್ನಿಸುವಂತಹ ಅಪಘಾತವೊಂದು ಸಂಭವಿಸಿದೆ. ಕಾರು ಮತ್ತು ಬೈಕ್​ ನಡುವೆ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿಗೆ ಬೈಕ್​

Live Cricket

Add Your Heading Text Here