Download Our App

Follow us

Home » ಸಿನಿಮಾ » ಮಲಯಾಳಂ ಚಿತ್ರರಂಗಕ್ಕೆ ಬಿಗ್ ಶಾಕ್ – ನಟ ದಿಲೀಪ್ ಶಂಕರ್​ ಶವವಾಗಿ ಪತ್ತೆ!

ಮಲಯಾಳಂ ಚಿತ್ರರಂಗಕ್ಕೆ ಬಿಗ್ ಶಾಕ್ – ನಟ ದಿಲೀಪ್ ಶಂಕರ್​ ಶವವಾಗಿ ಪತ್ತೆ!

ತಿರುವನಂತಪುರ: ಮಲಯಾಳಂನ ನಟ ದಿಲೀಪ್ ಶಂಕರ್ ಅವರು ತಿರುವನಂತಪುರದ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಟ ದಿಲೀಪ್ ಹೋಟೆಲ್‌ನ ಕೊಠಡಿಯಲ್ಲಿ 4 ದಿನಗಳ ಹಿಂದೆ ಚೆಕ್ ಇನ್ ಆಗಿದ್ದರು. ಹೋಟೆಲ್ ಸಿಬ್ಬಂದಿ ಪ್ರಕಾರ, ಕಳೆದ 2 ದಿನಗಳಿಂದ ದಿಲೀಪ್ ರೂಮ್‌ನಿಂದ ಹೊರಗೆ ಬಂದಿರಲಿಲ್ಲ. ಡಿ.29ರಂದು ರೂಮ್‌ನಿಂದ ದುರ್ವಾಸನೆ ಬಂದ ಹಿನ್ನೆಲೆ ಪರಿಶೀಲನೆ ನಡೆಸಿದಾಗ ದಿಲೀಪ್ ಶವವಾಗಿ ಪತ್ತೆಯಾಗಿದ್ದಾರೆ.

ದಿಲೀಪ್ ಅವರ ಸಹ ನಟರು ಕೂಡ ಅವರಿಗೆ ಫೋನ್ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಳವಳಗೊಂಡು ಅವರನ್ನು ಪರೀಕ್ಷಿಸಲು ಹೋಟೆಲ್‌ಗೆ ಭೇಟಿ ನೀಡಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿವೆ. ‘ಪಂಚಾಗ್ನಿ’ ಧಾರಾವಾಹಿಯ ಚಿತ್ರೀಕರಣಕ್ಕಾಗಿ ನಟ ದಿಲೀಪ್ ಶಂಕರ್ ತಿರುವನಂತಪುರಂಗೆ ತೆರಳಿದ್ದರು. ಎರಡು ದಿನಗಳ ಮೊದಲು ಅವರು ಕೊನೆಯ ಬಾರಿಗೆ ಚಿತ್ರೀಕರಣಕ್ಕೆ ಹಾಜರಿದ್ದರು ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ. ದಿಲೀಪ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಧಾರಾವಾಹಿ ನಿರ್ದೇಶಕ ಮನೋಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಯಾವುದೇ ಅಸಹಜ ಸಾವಿನ ಲಕ್ಷಣಗಳು ಕಂಡು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ದಿಲೀಪ್ ಶಂಕರ್ ಅವರ ಸಾವಿಗೆ ನಿಖರ ಕಾರಣ ತಿಳಿಯಬಹುದು. ತನಿಖೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರ್ನಾಕುಲಂ ಮೂಲದವರಾದ ದಿಲೀಪ್ ಶಂಕರ್ ಹಲವಾರು ಜನಪ್ರಿಯ ಮಲಯಾಳಂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮ್ಮ ಇರಿಯಾತೆ, ಪಂಚಾಗ್ನಿ ಮತ್ತು ಸುಂದರಿ ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಕಿರುತೆರೆ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳ ಮೂಲಕ ಹೆಸರಾದ ನಟ ದಿಲೀಪ್ ಶಂಕರ್ ನಿಧನ ಸುದ್ದಿ ಅನೇಕರನ್ನು ಆಘಾತಕ್ಕೀಡು ಮಾಡಿದೆ. ನಟಿ ಸೀಮಾ ಜಿ. ನಾಯರ್ ಸೇರಿ ಹಲವರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ : ಮೃತ ಗುತ್ತಿಗೆದಾರ ಸಚಿನ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ – ಸಚಿವ ಈಶ್ವರ್ ಖಂಡ್ರೆ ಘೋಷಣೆ

Leave a Comment

DG Ad

RELATED LATEST NEWS

Top Headlines

ಹೊಸ ವರ್ಷದಂದೇ ನೇಣು ಬಿಗಿದು ಯುವತಿ ಆತ್ಮಹತ್ಯೆ..!

ಬೆಂಗಳೂರು : ಹೊಸ ವರ್ಷದಂದೇ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 24 ವರ್ಷದ ರುಚಿತಾ ಆತ್ಮಹತ್ಯೆಗೆ ಶರಣಾದ ಯುವತಿ.

Live Cricket

Add Your Heading Text Here