Download Our App

Follow us

Home » ರಾಜಕೀಯ » ಮುಡಾ, ವಾಲ್ಮೀಕಿ ಹಗರಣ ಅಸ್ತ್ರ ಹಿಡಿದ ಬಿಜೆಪಿಗೆ ಬಿಗ್​ ಶಾಕ್ ​​​- ಮುನಿರತ್ನ, ಸುಧಾಕರ್, ಸುನಿಲ್ ಕುಮಾರ್ ಅರೆಸ್ಟ್​ಗೆ ಸಿಎಂ ಸಿದ್ದು ಸೂಚನೆ..!

ಮುಡಾ, ವಾಲ್ಮೀಕಿ ಹಗರಣ ಅಸ್ತ್ರ ಹಿಡಿದ ಬಿಜೆಪಿಗೆ ಬಿಗ್​ ಶಾಕ್ ​​​- ಮುನಿರತ್ನ, ಸುಧಾಕರ್, ಸುನಿಲ್ ಕುಮಾರ್ ಅರೆಸ್ಟ್​ಗೆ ಸಿಎಂ ಸಿದ್ದು ಸೂಚನೆ..!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಸದನದಲ್ಲಿ ಬಿಜೆಪಿ ಅವಧಿಯಲ್ಲಿ ನಡೆದಿರುವ 21 ಹಗರಣಗಳ ಪಟ್ಟಿಯನ್ನು ಮುಂದಿಟ್ಟು ರಾಜ್ಯ ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿದ್ದಾರೆ. ಈ ಮೂಲಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ಬಗ್ಗೆ ಬಿಜೆಪಿ ಮಾಡಿರುವ ಆರೋಪಕ್ಕೆ ಖಡಕ್​ ತಿರುಗೇಟು ನೀಡಿದ್ದಾರೆ.

ಮುಡಾ, ವಾಲ್ಮೀಕಿ ಹಗರಣ ಅಸ್ತ್ರ ಹಿಡಿದ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಬಿಗ್​ ಶಾಕ್​​​ ಕೊಟ್ಟಿದ್ದು, ಬಿಜೆಪಿ ಅವಧಿಯಲ್ಲಿನ ಹಗರಣಗಳ ಬಗ್ಗೆ ​ಲಿಖಿತ ರೂಪದಲ್ಲಿ ಎಳೆ ಎಳೆಯಾಗಿ ಸದನದಲ್ಲಿ ಬಿಚ್ಚಿಟ್ಟಿದ್ದಾರೆ. ಬಿಜೆಪಿ ರಾಜ್ಯ ನಾಯಕರು ವಾಲ್ಮೀಕಿ ಹಾಗೂ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸಿಲುಕಿಸಲು ಯತ್ನಿಸಿದ್ದರು. ಇದು ಗೊತ್ತಾಗುತ್ತಿದ್ದಂತೆ ಕೆಂಡಾಮಂಡಲವಾದ ಸಿಎಂ ಸಿದ್ದರಾಮಯ್ಯ ನಿನ್ನೆ ತಡರಾತ್ರಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಬಿಜೆಪಿ ಕಾಲದ ಹಗರಣಗಳ ತನಿಖೆಗೆ SIT ರಚನೆ ಮಾಡಲು ಸಿಎಂ ಸಿದ್ದು ಸೂಚನೆ ನೀಡಿದ್ದಾರೆ. ಗೃಹ ಇಲಾಖೆ ಹಾಗೂ ಹಿರಿಯ ಸಚಿವರ ಜೊತೆ ನಿನ್ನೆ ಮಿಡ್​ನೈಟ್​ವರೆಗೂ ಚರ್ಚೆ ನಡೆಸಿ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ.

ಸಿದ್ಧು ಚೆಕ್​​ಮೇಟ್​ನಿಂದ ರಾಜ್ಯ ಬಿಜೆಪಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಸಭೆಯಲ್ಲಿ ಮುನಿರತ್ನ, ಸುಧಾಕರ್, ಸುನಿಲ್ ಕುಮಾರ್ ಅರೆಸ್ಟ್​ಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. RR ನಗರದ 1000 ಕೋಟಿ ಕಾಮಗಾರಿ ಹಗರಣದಲ್ಲಿ MLA ಮುನಿರತ್ನ ಅರೆಸ್ಟ್​ಗೆ ಸೂಚನೆ ನೀಡಿದ್ದು, ಔಷಧಿ ಖರೀದಿ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ MP ಸುಧಾಕರ್ ಬಂಧನಕ್ಕೆ ಸಿಎಂ ಸಿದ್ದು ಸೂಚಿಸಿದ್ದಾರೆ. ಅದರಂತೆ ಕಾರ್ಕಳದ  ಪರಶುರಾಮ ಥೀಮ್​​​​ ಪಾರ್ಕ್ ಪ್ರಕರಣದಲ್ಲಿ MLA ಸುನೀಲ್​​ಕುಮಾರ್​ ಬಂಧನಕ್ಕೂ ಸಿಎಂ ಸೂಚನೆ ನೀಡಿದ್ದಾರೆ.

ಇನ್ನು ಬಿಜೆಪಿ ಅವಧಿಯಲ್ಲಿ ನಡೆದಿರುವ 21 ಹಗರಣಗಳ ತನಿಖೆಗೆ SIT ರಚನೆ ಮಾಡಿ ಇಂದೇ ಗೃಹ ಇಲಾಖೆಯಿಂದ ಆದೇಶ ಹೊರಡಿಸುವ ಸಾಧ್ಯತೆಯಿದ್ದು, 15 ಖಡಕ್​ IPS ಅಧಿಕಾರಿಗಳನ್ನು ಒಳಗೊಂಡ 200 ತನಿಖಾಧಿಕಾರಿಗಳಿರುವ SIT ರಚನೆ ಮಾಡಿ ಬಿಜೆಪಿ ಹಗರಣಗಳ ತನಿಖೆಗೆ ಆದೇಶ ಮಾಡುವ ಸಾಧ್ಯತೆಯಿದೆ. ಸದ್ಯ ಸದನದಲ್ಲಿ ಬಿಜೆಪಿ ನಾಯಕರು ಏನೋ ಮಾಡಲು ಹೋಗಿ  ಇನ್ನೇನೋ ಮಾಡಿಕೊಂಡಂತಾಗಿದೆ. ಒಟ್ಟಾರೆಯಾಗಿ ಸಿದ್ಧು ಚೆಕ್​​ಮೇಟ್​ನಿಂದ ರಾಜ್ಯ ಬಿಜೆಪಿ ಸಂಕಷ್ಟಕ್ಕೆ ಸಿಲುಕಿದೆ.

ಸಿಎಂ ಸಿದ್ದರಾಮಯ್ಯ ಸದನದಲ್ಲಿ ಪ್ರಸ್ತಾಪಿಸಿದ 21 ಹಗರಣಗಳ ಲಿಸ್ಟ್ ಇಲ್ಲಿದೆ​!

1. APMC ಹಗರಣ- 47.16 ಕೋಟಿ
2. ಭೋವಿ ನಿಗಮ ಹಗರಣ- 87 ಕೋಟಿ
3. ಅರಸು ಟ್ರಕ್​ ಟರ್ಮಿನಲ್​​​- 50 ಕೋಟಿ
4. ಗಂಗಾ ಕಲ್ಯಾಣ ಯೋಜನೆ- 430 ಕೋಟಿ
5. ಪ್ರವಾಸೋದ್ಯಮ ಇಲಾಖೆ- 2.47 ಕೋಟಿ
6. ಕಿಯೋನಿಕ್ಸ್ ಹಗರಣ- 500 ಕೋಟಿ
7. ಕೋವಿಡ್ ಹಗರಣ- 40,000 ಕೋಟಿ
8. 40% ಹಗರಣ- 2000 ಕೋಟಿ
9. PSI, ಇತರೆ ನೇಮಕಾತಿ- ನೂರಾರು ಕೋಟಿ
10. ಪರಶುರಾಮ್​ ಥೀಮ್​ ಪಾರ್ಕ್​​- 11 ಕೋಟಿ
11. ಬಿಟ್ ಕಾಯಿನ್​​ ಹಗರಣ-ಸಾವಿರಾರು ಕೋಟಿ
12. ಬಿಎಸ್​ವೈ ಆಪ್ತ ಉಮೇಶ್​ ಆಸ್ತಿ- 750 ಕೋಟಿ
13. ವಿಜಯೇಂದ್ರ, ಬಿಎಸ್​ವೈ ಅಕ್ರಮ ಆಸ್ತಿ-ನೂರಾರು ಕೋಟಿ
14. ಅಬಕಾರಿ ಸಚಿವರ ಹಗರಣ- ನೂರಾರು ಕೋಟಿ
15. KKRDB ಹಗರಣ- 200 ಕೋಟಿ
16. ಕೃಷಿ ಇಲಾಖೆ ಹಗರಣ
17- ಮೊಟ್ಟೆ ವಿತರಣೆ ಹಗರಣ
18. KIADB ಹಗರಣ
19- ಗಣಿ ಹಗರಣ
20- ಕಂದಾಯ ಇಲಾಖೆ ಹಗರಣ
21- ಗುರು ರಾಘವೇಂದ್ರ ಬ್ಯಾಂಕ್​ ಹಗರಣ

ಇದನ್ನೂ ಓದಿ : ಹಾಸನ : ಹೇಮಾವತಿ ಜಲಾಶಯಕ್ಕೆ ಒಳಹರಿವು ಭಾರೀ ಹೆಚ್ಚಳ, ಡ್ಯಾಂ ಭರ್ತಿಯಾಗಲು ಇನ್ನೆಷ್ಟು ಅಡಿ ಬಾಕಿ?

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here