ಮಂಗಳೂರು : ಬೀದರ್‌ನಲ್ಲಿ ನಿನ್ನೆ 83 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಭಾರೀ ದರೋಡೆ ನಡೆದಿದೆ. ಕಾರಿನಲ್ಲಿಬಂದ ಆಗಂತುಕರು ಬಂದೂಕು ತೋರಿಸಿ ಚಿನ್ನ, ಒಡವೆ, ಹಣವನ್ನೆಲ್ಲಾ ಬ್ಯಾಂಕ್ನಿಂದ ದೋಚಿ ಪರಾರಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿದೆ. ಹಾಡಹಗಲೇ 5 ಮಂದಿ ಆಗಂತುಕರು ಬ್ಯಾಂಕ್‌ಗೆ ನುಗ್ಗಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರ, ಬಂದೂಕನನ್ನು ತೋರಿಸಿ ಚಿನ್ನ ಒಡವೆ, ನಗದುಗಳೆಲ್ಲವನ್ನೂ ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೆ.ಸಿ ರೋಡ್ ಕೋಟೆಕಾರು ಬ್ಯಾಂಕ್ ಶಾಖೆಯಿಂದ ಭಾರೀ ದರೋಡೆ ಮಾಡಲಾಗಿದ್ದು, 5 ಮಂದಿ ಆಗಂತುಕರು ಫಿಯೇಟ್ ಕಾರಿನಲ್ಲಿ ಬಂದಿದ್ದರು. ಮಾರಕಾಸ್ತ್ರ ತೋರಿಸಿ ದರೋಡೆ ನಡೆಸಿದ ತಂಡ ಮಂಗಳೂರಿನ ಕಡೆಗೆ ಪರಾರಿಯಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ಪೊಲೀಸ್ ತಂಡ ಆಗಂತುಕರಿಗಾಗಿ ಬಲೆ ಬೀಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಪೀಕರ್ ಯು.ಟಿ ಖಾದರ್ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಪುನರ್ಜನ್ಮದ ಕಥೆ ಹೇಳಲು ‘ಬಂಡೆಕವಿ’ ಆಗಮನ.. ಫೆಬ್ರವರಿಯಿಂದ ಚಿತ್ರೀಕರಣ ಶುರು!