ಬೆಂಗಳೂರು : ರಾಜ್ಯ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿಗೆ ಸ್ಕೆಚ್ ಹಾಕಲಾಗಿದೆ. ಈಗಾಗಲೇ ಕಳಪೆ ಮಂತ್ರಿಗಳ ಬಿಗ್ ಲಿಸ್ಟ್ ವರಿಷ್ಠರಿಗೆ ತಲುಪಿದ್ದು, ಸುಮಾರು 10 ಸಚಿವರನ್ನ ಸಂಪುಟದಿಂದ ಕಿತ್ತುಹಾಕಲು ತಯಾರಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಇವತ್ತು ಸಂಜೆ 4 ಗಂಟೆಗೆ ಬೆಂಗಳೂರಿನ ಸಿಎಂ ನಿವಾಸದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕ್ಯಾಬಿನೆಟ್ನಿಂದ 7ರಿಂದ 10 ಸಚಿವರನ್ನು ಕಿತ್ತುಹಾಕಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವರಾದ ಕೆ.ಹೆಚ್. ಮುನಿಯಪ್ಪ, ಮಧುಬಂಗಾರಪ್ಪ, ಆರ್. ಬಿ. ತಿಮ್ಮಾಪುರ, ಡಿ. ಸುಧಾಕರ್, ಮಂಕಾಳ್ ವೈದ್ಯ, ಶಿವಾನಂದ ಪಾಟೀಲ್, ಕೆ.ಎನ್. ರಾಜಣ್ಣಗೆ ಗೇಟ್ ಪಾಸ್ ಸಿಗುವ ಸಾಧ್ಯತೆಯಿದೆ. ಇಷ್ಟು ಮಾತ್ರವಲ್ಲದೇ ಈ ಏಳು ಮಂತ್ರಿಗಳ ಜೊತೆ ಇನ್ನೂ ಮೂವರು ಸಚಿವರಿಗೆ ಕೊಕ್ ಸಿಗುವ ಸಾಧ್ಯತೆಯಿದೆ.
ರಾಜ್ಯ ನಾಯಕರ ದೂರಿನ ಮೇಲೆ ಹೈಕಮಾಂಡ್ ಈ ಲಿಸ್ಟ್ ರೆಡಿ ಮಾಡಿಕೊಂಡಿದೆ. ಶಾಸಕರಿಂದ ಪದೇ ಪದೆ ದೂರುಗಳ ಹಿನ್ನೆಲೆಯಲ್ಲಿ ಇವತ್ತಿನ ಸಿಎಂ, ಡಿಸಿಎಂ ನೇತೃತ್ವದ ಸಭೆಯಲ್ಲಿ ಸಚಿವರೆಲ್ಲರ ಕಾರ್ಯವೈಖರಿ ಬಗ್ಗೆ ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲಾರವರು ಪರಾಮರ್ಶೆ ಮಾಡಲಿದ್ದಾರೆ. ಇವತ್ತೇ ಸಚಿವರ ಪಟ್ಟಿ ಫೈನಲ್ ಆಗಿ 15 ದಿನಗಳಲ್ಲೇ 10 ಜನರಿಗೆ ಸಂಪುಟದಿಂದ ಮುಕ್ತಿಸಿಗೋ ಸಾಧ್ಯತೆಯಿದೆ.
ಇದನ್ನೂ ಓದಿ : ಎಂ.ಡಿ ಶ್ರೀಧರ್ ನಿರ್ದೇಶನದ ‘ಜಂಬೂ ಸರ್ಕಸ್’ ಚಿತ್ರದ ಟೀಸರ್ ರಿಲೀಸ್..!