Download Our App

Follow us

Home » ಜಿಲ್ಲೆ » ನಡುರಾತ್ರಿ​ ರಸ್ತೆಯಲ್ಲೇ ಕಂದಮ್ಮನ ಬಿಟ್ಟು ಹೋದ ಮಹಿಳೆ – ಮೈಕೊರೆವ ಚಳಿಗೆ ಮಗು ದುರಂತ ಅಂತ್ಯ..!

ನಡುರಾತ್ರಿ​ ರಸ್ತೆಯಲ್ಲೇ ಕಂದಮ್ಮನ ಬಿಟ್ಟು ಹೋದ ಮಹಿಳೆ – ಮೈಕೊರೆವ ಚಳಿಗೆ ಮಗು ದುರಂತ ಅಂತ್ಯ..!

ಬೀದರ್ : ಮೈಕೊರೆವ ಚಳಿಯಲ್ಲಿ ಹಸುಗೂಸನ್ನು ಬಿಟ್ಟು ಹೋದ ಅಮಾನವೀಯ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ರುದನೂರ್ ಗ್ರಾಮದಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ಗ್ರಾಮದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಮಸೀದಿ ಕಾಂಪೌಂಡ್ ಪಕ್ಕದಲ್ಲಿ ಗಂಡು ಮಗು ಪ್ರತ್ಯಕ್ಷವಾಗಿದೆ.

ಮಗುವನ್ನು ಬಿಟ್ಟು ಹೋದ ದೃಶ್ಯ ಅಲ್ಲಿಯೇ ಹತ್ತಿರದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಚೀಲದಲ್ಲಿ ಮಗುವನ್ನು ತಂದು, ಸುತ್ತಲೂ ಯಾರಾದರೂ ಇದ್ದಾರಾ ಎಂಬುವುದನ್ನು ಗಮನಿಸಿ ಮಹಿಳೆ ಮಗುವನ್ನು ಕಾಂಪೌಂಡ್ ಪಕ್ಕದಲ್ಲಿ ಬಿಟ್ಟು ಹೋಗಿರುವುದು ದೃಶ್ಯದಲ್ಲಿ ಕಂಡುಬಂದಿದೆ.

ಬೆಳಗ್ಗೆ ಸುದ್ದಿ ತಿಳಿದ ಗ್ರಾಮಸ್ಥರು ಹಸುಗೂಸನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದೆ. ಸ್ಥಳಕ್ಕೆ ಧನ್ನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಹಸುಗೂಸು ಬಿಟ್ಟು ಹೋದ ಮಹಿಳೆಯನ್ನು ಪತ್ತೆ ಹಚ್ಚಲು ನಿರತರಾಗಿದ್ದಾರೆ.

ಇದನ್ನೂ ಓದಿ : ಯುವತಿಗೆ ಮದ್ಯ ಕುಡಿಸಿ ಅತ್ಯಾಚಾರ ಆರೋಪ – ಬಿಜೆಪಿ ಮುಖಂಡ ಜಿಮ್‌ ಸೋಮನ‌ ವಿರುದ್ದ FIR..!

Leave a Comment

DG Ad

RELATED LATEST NEWS

Top Headlines

ಶಿವಮೊಗ್ಗದಲ್ಲಿ “ಅನ್ ಲಾಕ್ ರಾಘವ” ಸಿನಿಮಾದ “ಲಾಕ್ ಲಾಕ್” ಹಾಡು ರಿಲೀಸ್ – ಫೆ.7ಕ್ಕೆ ಮಿಲಿಂದ್, ರೆಚೆಲ್ ಡೇವಿಡ್ ಜೋಡಿಯ ಚಿತ್ರ ತೆರೆಗೆ!

ಬೆಂಗಳೂರು : ಸ್ಯಾಂಡಲ್​​ವುಡ್​ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ “ಅನ್ ಲಾಕ್ ರಾಘವ” ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ, ಅನೂಪ್ ಸೀಳಿನ್ ಸಂಗೀತ ನೀಡಿರುವ ಹಾಗೂ ಖ್ಯಾತ ಗಾಯಕ

Live Cricket

Add Your Heading Text Here