ಬೀದರ್ : ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಸ್ನೇಹಿತನಿಗೆ ತನ್ನ ಗೆಳೆಯನೇ ಹಾಡಹಗಲೇ ಚಾಕು ಇರಿದಿದ್ದಾನೆ. ಬಸವಕಲ್ಯಾಣ ಪಟ್ಟಣದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನಿಗೆ ಚಾಕು ಇರಿದಿದ್ದು ಜನರು ಬೆಚ್ಚಿಬಿದ್ದಿದ್ದಾರೆ. ಬಸವಕಲ್ಯಾಣ ತ್ರಿಪುರಾಂತ ನಿವಾಸಿ ಅಶೋಕ್ ಪಾಟೀಲ್ ಎಂಬುವವರಿಗೆ ದಯಾನಂದ ಶಿಂಧೆ ಎಂಬುವವನು ಚಾಕು ಇರಿದಿದ್ದಾನೆ.
ಬಸವಕಲ್ಯಾಣದ ಬಾರ್‌ವೊಂದರಲ್ಲಿ ಸ್ನೇಹಿತರ ಜೊತೆ ಕೂತಿದ್ದ ಅಶೋಕ್ ಪಾಟೀಲ್ ಮೇಲೆ ಆರೋಪಿ ದಯಾನಂದ ಶಿಂಧೆ ತನ್ನ ಕೈಯಲ್ಲಿ ಚಾಕು ಹಿಡಿದುಕೊಂಡೇ ಬಾರ್‌ಗೆ ನುಗ್ಗಿದ್ದಾನೆ. ಬಾರ್ ಒಳಗೆ ಬಂದ ದಯಾನಂದ ಫ್ರೆಂಡ್ಸ್ ಜೊತೆ ಎಣ್ಣೆ ಹಾಕ್ಕೊಂಡು ಹರಟೆಯಲ್ಲಿದ್ದ ಅಶೋಕ್ ಪಾಟೀಲ್ಗೆ ಏಕಾಏಕಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಆರೋಪಿ ದಯಾನಂದ ಶಿಂಧೆಗೆ ಗಾಯಾಳು ಅಶೋಕ್ ಪಾಟೀಲ್ 10 ಸಾವಿರ ರೂ. ಸಾಲ ಕೊಟ್ಟಿದ್ದರು. ಆದ್ರೆ ಆ ಸಾಲವನ್ನು ದಯಾನಂದ ಶಿಂಧೆ ವಾಪಸ್ ಕೊಟ್ಟಿರಲಿಲ್ಲ. ಹಾಗಾಗಿ 10 ಸಾವಿರ ರೂ. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಅಶೋಕ್ ಪಾಟೀಲ್ ಅವರಿಗೆ ಬಾರ್ನಲ್ಲೇ ಚಾಕು ಇರಿದು ಪರಾರಿಯಾಗಿದ್ದಾನೆ. ಕೂಡಲೇ ಸ್ನೇಹಿತರು ಅಶೋಕ್ ಪಾಟೀಲ್ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್ಐ ಅಂಬರೀಶ್ ವಾಗ್ಮೋಡೆ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಶೋಕ್ ಪಾಟೀಲ್ಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿ ದಯಾನಂದ ಶಿಂಧೆಯನ್ನ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಜಾತ್ರೆಯಲ್ಲಿ ಮದವೇರಿದ ಆನೆಯ ಪುಂಡಾಟ.. ವ್ಯಕ್ತಿಯನ್ನು ಸೊಂಡಿಲಿನಿಂದ ಬಿಸಾಡಿ ಆಕ್ರೋಶ – 29 ಮಂದಿಗೆ ಗಾಯ..!