Download Our App

Follow us

Home » ಜಿಲ್ಲೆ » ಸಚಿವ ಪ್ರಿಯಾಂಕ್​​​​​ ಖರ್ಗೆ ಆಪ್ತನಿಂದ ಕೋಟಿ ಡಿಮ್ಯಾಂಡ್? – ಕಾಂಟ್ರಾಕ್ಟರ್​ ಸೂಸೈಡ್​..!

ಸಚಿವ ಪ್ರಿಯಾಂಕ್​​​​​ ಖರ್ಗೆ ಆಪ್ತನಿಂದ ಕೋಟಿ ಡಿಮ್ಯಾಂಡ್? – ಕಾಂಟ್ರಾಕ್ಟರ್​ ಸೂಸೈಡ್​..!

ಬೀದರ್ : ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಚಿವ ಪ್ರಿಯಾಂಕ್​​​​​ ಖರ್ಗೆ ಆಪ್ತ ರಾಜು ಕಪನೂರು ಅವರು ಟೆಂಡರ್​​ ವಿಚಾರಕ್ಕೆ ಕೋಟಿ ಹಣ ಡಿಮ್ಯಾಂಡ್ ಮಾಡಿದ್ದಾರೆ ಎಂದು ಆರೋಪಿಸಿ ಕಾಂಟ್ರಾಕ್ಟರ್ ಸಚಿನ್ ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

7 ಪುಟಗಳ ಸುದೀರ್ಘ ಲೆಟರ್​ ಬರೆದು 26 ವರ್ಷದ ಕಾಂಟ್ರಾಕ್ಟರ್​​ ಸೂಸೈಡ್ ಮಾಡಿಕೊಂಡಿದ್ದು, ಪ್ರಿಯಾಂಕ್ ಖರ್ಗೆ ಆಪ್ತ ರಾಜು ಟೆಂಡರ್​ ವಿಚಾರಕ್ಕೆ ಲಕ್ಷ-ಲಕ್ಷ ಹಣ ಪಡೆದಿದ್ದಾರಂತೆ. ಮತ್ತೆ 1 ಕೋಟಿ ಹಣ ನೀಡುವಂತೆಯೂ ಡಿಮ್ಯಾಂಡ್​ ಇಟ್ಟಿದ್ದರಂತೆ. 1 ಕೋಟಿ ರೂಪಾಯಿ ನೀಡದಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರಂತೆ. 15 ಲಕ್ಷಕ್ಕೂ ಹೆಚ್ಚು ಹಣ ಪಡೆದು ಟೆಂಡರ್​​ ನೀಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜು ಕಪನೂರು, ಪ್ರಿಯಾಂಕ್ ಖರ್ಗೆ ಆಪ್ತ
ರಾಜು ಕಪನೂರು, ಪ್ರಿಯಾಂಕ್ ಖರ್ಗೆ ಆಪ್ತ

 

ಈ ಸಂಬಂಧ ಕಲಬುರಗಿ ಮಾಜಿ ಕಾರ್ಪೊರೇಟರ್​​​​ ರಾಜು ಕಪನೂರು, ಗೋರಖನಾಥ್, ನಂದಕುಮಾರ್ ನಾಗಭುಜಂಗೆ ಸೇರಿ 6 ಮಂದಿ ವಿರುದ್ಧ ಕೇಸ್​ ದಾಖಲಾಗಿದೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್​ನ ಸಚಿನ್ ಶವ ರೈಲ್ವೆ ಟ್ರಾಕ್​​ನಲ್ಲಿ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂತ್ರಿ ಆಪ್ತ ಸೇರಿ ಇತರೆ ಆರೋಪಿಗಳ ಅರೆಸ್ಟ್​ಗೆ ಕುಟುಂಬದವರು ಆಗ್ರಹಿಸಿದ್ದಾರೆ.

ರಾಜು ಕುಪನೂರು ಸೇರಿ ಎಲ್ಲರನ್ನೂ ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದಿದ್ದು, ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರ ವಿರೋಧದ ಮಧ್ಯೆ ಬ್ರಿಮ್ಸ್ ಶವಾಗಾರಕ್ಕೆ ಶವವನ್ನು ಶಿಫ್ಟ್​ ಮಾಡಲಾಗಿದೆ.

ಇದನ್ನೂ ಓದಿ : ಯಾಕಮ್ಮಾ ಬಿಗ್​​ಬಾಸ್​ ಮನೆಯಲ್ಲಿದ್ಯಾ? ಹೊರಡಮ್ಮಾ ಮನೆಗೆ – ಚೈತ್ರಾಗೆ ಟಾಂಗ್ ಕೊಟ್ಟ ರಜತ್..!

Leave a Comment

DG Ad

RELATED LATEST NEWS

Top Headlines

ಸಿಕಂದರ್​ ಟೀಸರ್ ಬಿಡುಗಡೆ ದಿಢೀರ್ ಮುಂದೂಡಿಕೆ – ಕಾರಣವೇನು?

ಬಾಲಿವುಡ್​​ ಸೂಪರ್​ ಸ್ಟಾರ್​​ ಸಲ್ಮಾನ್​ ಖಾನ್ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಖುಷಿಗಾಗಿ ಸಿಕಂದರ್ ಚಿತ್ರತಂಡ ಇಂದು ಸಿನಿಮಾದ ಟೀಸರ್​ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿತ್ತು.

Live Cricket

Add Your Heading Text Here