ಬೆಂಗಳೂರು : ಭೋವಿ ನಿಗಮ ಅಕ್ರಮ ತನಿಖೆಯಲ್ಲೇ ಭ್ರಷ್ಟಾಚಾರ ನಡೆದಿದ್ದು, ಆರೋಪಿಗಳಿಂದ ಹಣ ಪಡೆದಿದ್ದ ತನಿಖಾಧಿಕಾರಿಯನ್ನು ಹಿರಿಯ ಅಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ. ತನಿಖಾಧಿಕಾರಿಯಾಗಿದ್ದ ಎ.ಡಿ ನಾಗರಾಜ್ನ್ನು ಸಸ್ಪೆಂಡ್ ಮಾಡಲಾಗಿದೆ.
ಭೋವಿ ನಿಗಮದಲ್ಲಿ ಕೋಟಿ-ಕೋಟಿ ಹಣ ಅಕ್ರಮ ನಡೆದಿತ್ತು, ಈ ಅಕ್ರಮ ಸಂಬಂಧ ಸಿಐಡಿ ತನಿಖೆ ನಡೆಸುವಂತೆ ಸರ್ಕಾರ ಆದೇಶ ನೀಡಿತ್ತು. ನಿಗಮದ MD ನಾಗರಾಜಪ್ಪ, ಲೀಲಾವತಿ ಸೇರಿ ಹಲವರ ಅರೆಸ್ಟ್ ಆಗಿತ್ತು. ಸಿಐಡಿ ಅಧಿಕಾರಿಗಳು ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸಿದ್ದರು, ಈ ವೇಳೆ ತನಿಖಾಧಿಕಾರಿ ಎ.ಡಿ ನಾಗರಾಜ್ ಭ್ರಷ್ಟಾಚಾರ ಬಯಲಾಗಿದೆ. ತನಿಖಾಧಿಕಾರಿ ನಾಗರಾಜ್ನ್ನು ಸಸ್ಪೆಂಡ್ ಮಾಡಿ CID ಡಿಜಿ ಸಲೀಂ ಆದೇಶ ಹೊರಡಿಸಿದೆ.
2021-22ನೇ ಸಾಲಿನಲ್ಲಿ ಭೋವಿ ನಿಗಮದಿಂದ ಉದ್ಯಮಿಗಳಿಗೆ ಸಾಲ ನೀಡುವ ಯೋಜನೆಯಲ್ಲಿ ನಡೆದಿದ್ದ ಅವ್ಯವಹಾರ ಆರೋಪದ ಮೇಲೆ ದೂರು ದಾಖಲಾಗಿತ್ತು. ಅಕ್ರಮ ಸಂಬಂಧ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದವು. 10 ಕೋಟಿಗೂ ಹೆಚ್ಚು ಹಣ ಅಕ್ರಮ ವರ್ಗಾವಣೆ ಮಾಡಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಕಾರು-ಲಾರಿ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ನಾಲ್ವರ ಸಾವು..!