Download Our App

Follow us

Home » ರಾಜಕೀಯ » ಬೊಮ್ಮಾಯಿ ಕ್ಷೇತ್ರ ಕೈವಶಕ್ಕೆ ಕಾಂಗ್ರೆಸ್​ ಬಿಗ್​ ಪ್ಲಾನ್ – ಭರತ್​​​​ ಬೊಮ್ಮಾಯಿ ವಿರುದ್ಧ ವೈಶಾಲಿ ಕುಲಕರ್ಣಿ ಕ್ಯಾಂಡಿಡೇಟ್​?

ಬೊಮ್ಮಾಯಿ ಕ್ಷೇತ್ರ ಕೈವಶಕ್ಕೆ ಕಾಂಗ್ರೆಸ್​ ಬಿಗ್​ ಪ್ಲಾನ್ – ಭರತ್​​​​ ಬೊಮ್ಮಾಯಿ ವಿರುದ್ಧ ವೈಶಾಲಿ ಕುಲಕರ್ಣಿ ಕ್ಯಾಂಡಿಡೇಟ್​?

ಹಾವೇರಿ : ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ರಂಗೇರಿದೆ. ಮಾಜಿ ಸಚಿವ ಹಾಗೂ ಐದು ಬಾರಿ ಶಾಸಕರಾಗಿದ್ದ ಸಿಪಿ ಯೋಗೇಶ್ವರ್ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಇದೀಗ ಬೊಮ್ಮಾಯಿ ಕ್ಷೇತ್ರವನ್ನು ಕೈವಶಕ್ಕೆ ಪಡೆಯಲು ಕಾಂಗ್ರೆಸ್​ ಬಿಗ್​ ಪ್ಲಾನ್​​​ ನಡೆಸುತ್ತಿದೆ.

ಶಿಗ್ಗಾಂವಿಯಲ್ಲಿ ಈ ಬಾರಿ ಲಿಂಗಾಯತ VS ಲಿಂಗಾಯತ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಬೊಮ್ಮಾಯಿ ಕುಟುಂಬಕ್ಕೆ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ರಣತಂತ್ರ ನಡೆಸುತ್ತಿದೆ. ಭರತ್​​​​ ಬೊಮ್ಮಾಯಿ ವಿರುದ್ಧ ಶಾಸಕ ವಿನಯ್​ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲ್ಲಿದ್ದಾರೆ. ​ಈ ಬಾರಿ ಕಾಂಗ್ರೆಸ್​ ಶಿಗ್ಗಾಂವಿಯಲ್ಲಿ ಕಾರ್ಯತಂತ್ರ ಬದಲಿಸಿದೆ.

ಕಳೆದ ಐದು ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿತ್ತು, ಸರಣಿ ಸೋಲು ಕಂಡಿದ್ದ ಕಾಂಗ್ರೆಸ್​ನಿಂದ ಈ ಬಾರಿ ಪ್ಲಾನ್​ ಚೇಂಜ್​​​ ಮಾಡಿದೆ. ಈ ಬಾರಿ ಲಿಂಗಾಯತರಿಗೆ ಟಿಕೆಟ್ ನೀಡಲು ನಾಯಕರು ಮುಂದಾಗಿದ್ದಾರೆ. ಶಿಗ್ಗಾಂವಿ ಕಾಂಗ್ರೆಸ್​ ಟಿಕೆಟ್​ ದಿನೇ ದಿನೇ ಕಗ್ಗಂಟಾಗುತ್ತಿದ್ದು, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಅಂಜುಮನ್ ಸಂಸ್ಥೆ ಒತ್ತಡ ಹೇರುತ್ತಿದ್ದಾರೆ. ಆದ್ರೆ ಅಲ್ಪಸಂಖ್ಯಾತರಲ್ಲಿ ಇಬ್ಬರ ನಡುವೆ ಟಿಕೆಟ್‌ಗಾಗಿ ಬಿಗ್ ಫೈಟ್ ನಡೆಯಲಿದೆ.

ಮಾಜಿ ಶಾಸಕ ಅಜಂ ಪೀರ್ ಖಾದ್ರಿ, ಯಾಸೀರ್ ಖಾನ್ ಪಠಾಣ್ ಪೈಪೋಟಿ ನಡೆಯಲಿದ್ದು, ಇಬ್ಬರಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಬಂಡಾಯದ ಸಾಧ್ಯತೆಯಿದೆ. ಹೀಗಾಗಿ ಇಬ್ಬರ ಬದಲು ಮೂರನೇಯವರಿಗೆ ಟಿಕೆಟ್​ ನೀಡಲು ನಾಯಕರು ಮುಂದಾಗಿದ್ದಾರೆ. ಕೈ ನಾಯಕರು ಹೊಸಬರಿಗೆ ಮಣೆ ಹಾಕಲು ಮುಂದಾಗಿದ್ದು, ಅಳೆದು ತೂಗಿ ವೈಶಾಲಿ ಕುಲಕರ್ಣಿಗೆ ಟಿಕೆಟ್ ಪೈನಲ್ ಮಾಡುವ ಸಾಧ್ಯತೆಯಿದೆ. ಲಿಂಗಾಯತ, ಅಲ್ಪಸಂಖ್ಯಾತರ ಜೊತೆಗೆ ಯೂತ್​ ಮತದ ಮೇಲೆ ಕಣ್ಣಿಟ್ಟಿದ್ದು, ಇಂದು ವೈಶಾಲಿ ಕುಲಕರ್ಣಿ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಉಪ ಚುನಾವಣೆ : ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌, ಸಂಡೂರಲ್ಲಿ ಅನ್ನಪೂರ್ಣ ತುಕಾರಾಂಗೆ ಕಾಂಗ್ರೆಸ್​ ಟಿಕೆಟ್..!

Leave a Comment

DG Ad

RELATED LATEST NEWS

Top Headlines

‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ‘ಜಾಣಮರಿ’ ಸಾಂಗ್ ರಿಲೀಸ್..!

‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾ ಆರಂಭದಿಂದ ಇಲ್ಲಿಯವರೆಗೂ ನಾನಾ ರೀತಿಯಲ್ಲಿ ಭರವಸೆ ಮೂಡಿಸುತ್ತಾ ಬಂದಿದೆ. ಹೌದಾ ಹುಲಿಯಾ ಹಾಡಿಗೆ ಭರಪೂರ ಮೆಚ್ಚುಗೆ ಸಿಕ್ಕ ಬೆನ್ನಲ್ಲೇ ಚಿತ್ರತಂಡ ಈಗ

Live Cricket

Add Your Heading Text Here