ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಬೆಳಿಗ್ಗೆ ಆರು ಗಂಟೆಗೆ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಪಟಾಕಿ ಹೊಡೆದು, ಡೊಳ್ಳು ಭಾರಿಸಿ, ಕುಣಿದು ಸಂಭ್ರಮ ಆಚರಿಸಿ ಸಿನಿಮಾ ವೀಕ್ಷಿಸಿದ್ದಾರೆ. ಮಫ್ತಿ ಬಳಿಕ ಮತ್ತೆ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರು ಕೂಡ ತುದಿಗಾಲಲ್ಲಿ ನಿಂತಿದ್ದರು. ಇದು ಮಫ್ತಿ ಸಿನಿಮಾದ ಪ್ರೀಕ್ವೆಲ್ ಆಗಿದ್ದರಿಂದ ಬಿಡುಗಡೆಗೂ ಮುನ್ನವೇ ಈ ಸಿನಿಮಾ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿತ್ತು.
ಭೈರತಿ ರಣಗಲ್ ಒಂದು ಒಳ್ಳೆಯ ಸಿನಿಮಾ ಅನ್ನೋದಕ್ಕೆ ಸಾಕಷ್ಟು ಕಾರಣಗಳೂ ಇವೆ. ಕನ್ನಡ ಸಿನಿಪ್ರೇಮಿಗಳಿಗೆ ಪ್ರೀಕ್ವೆಲ್ ಕಥೆಯ ಅನುಭವ ಇಲ್ವೇ ಇಲ್ಲ. ಆದರೆ, ಒಂದು ಪ್ರೀಕ್ವೆಲ್ ಕಥೆಯನ್ನ ಹೀಗೆ ಮಾಡಿದ್ರೇನೆ ಚೆಂದ ಅನ್ನೋದನ್ನ ಡೈರೆಕ್ಟರ್ ನರ್ತನ್ ಇಲ್ಲಿ ಬೆಂಚ್ ಮಾರ್ಕ್ ರೀತಿನೇ ತೋರಿಸಿಕೊಟ್ಟಿದ್ದಾರೆ. ಭೈರತಿ ರಣಗಲ್ ಅನ್ನೋ ಒಂದು ಪಾತ್ರ ಸಾಮಾನ್ಯ ಪಾತ್ರ ಅಲ್ಲ ಅನ್ನೋದು ಕಥೆಯಲ್ಲಿರೋ ಅದ್ಭುತವಾದ ಸತ್ಯವೇ ಆಗಿದೆ.
ಭೈರತಿ ರಣಗಲ್ ಚಿತ್ರದಲ್ಲಿ ಭೈರತಿ ಉದ್ದೇಶ ಚೆನ್ನಾಗಿದೆ. ಆ ಒಂದು ದೃಷ್ಟಿಯಿಂದ ಸಿನಿಮಾ ನೋಡಿದ್ರೆ ಇದೊಂದು ಅದ್ಭುತ ಚಿತ್ರವೇ ಆಗಿದೆ. ಒಂದು ಚಿತ್ರದ ಪ್ರೀಕ್ವೆಲ್ ಕಥೆಯನ್ನ ಹೀಗೂ ಹೇಳಬಹುದು ಅನ್ನೋ ವಿಚಾರ ಖುಷಿಕೊಡುತ್ತದೆ. ಜನರಿಗಾಗಿಯೇ ಭೈರತಿ ರಣಗಲ್ ಡಾನ್ ಆಗ್ತಾನೇ ಅನ್ನೋದು ಇಲ್ಲಿ ಎಲ್ಲರಿಗೂ ಕನ್ವಿನ್ಸಿಂಗ್ ಆಗಿಯೇ ಇದೆ. ಎಲ್ರೂ ಇದನ್ನ ಒಪ್ಪಿಕೊಳ್ಳುತಾರೆ ಅನಿಸುತ್ತದೆ.
ಹಾಗೇನೆ ಭೈರತಿ ರಣಗಲ್ ರಾಜಕೀಯ ಎಂಟ್ರಿ ಕೂಡ ಇಲ್ಲಿ ಸಮಾಜದಲ್ಲಿ ನಡೆಯೋ ಅಸಲಿ ಸತ್ಯವನ್ನೆ ಹೇಳಿದಂತೆ ಇದೆ. ದುಡ್ಡಿನಿಂದಲೇ ಇಡೀ ಸರ್ಕಾರವನ್ನೇ ಅಲ್ಲಾಡಿಸಬಹುದು ಅನ್ನುವ ಸತ್ಯವೂ ಇಲ್ಲಿ ಅಷ್ಟೇ ಅದ್ಭುತವಾಗಿಯೇ ತೋರಿಸಲಾಗಿದೆ. ಇನ್ನು ನಾಯಕಿ ನಟಿ ರುಕ್ಮಿಣಿ ವಸಂತ್ ಒಳ್ಳೆ ಡಾಕ್ಟರ್ ಅನ್ನೋದು ಖುಷಿಕೊಡುತ್ತದೆ. ರಾಮ ಮತ್ತು ರಾವಣ ಇಬ್ಬರೂ ಇರೋ ಒಂದು ಪುಸ್ತಕ ಕೊಡೋ ಈ ಬೆಡಗಿ, ನೀನು ರಾಮನಾಗು ಅನ್ನೋದನ್ನ ಇಲ್ಲಿ ತುಂಬಾನೆ ಚೆನ್ನಾಗಿಯೇ ಹೇಳುತ್ತಾರೆ.
ಇದನ್ನೂ ಓದಿ : ಜಮೀರ್ ಅಹ್ಮದ್ರನ್ನು ನಾನು ಯಾವತ್ತೂ ಕುಳ್ಳ ಎಂದು ಕರೆದೇ ಇಲ್ಲ – ಹೆಚ್‌ಡಿ ಕುಮಾರಸ್ವಾಮಿ..!