ಬೆಂಗಳೂರು : ಪತಿಯೇ ಪತ್ನಿಯನ್ನು ಹತ್ಯೆಗೈದು ಮನೆಯ ಬಾತ್ರೂಂನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಡಾಬಸ್ಪೇಟೆಯಲ್ಲಿ ನಡೆದಿದೆ. 27 ವರ್ಷದ ಕಾವ್ಯ ಕೊಲೆಯಾದ ದುರ್ದೈವಿ. ಪತಿ ಶಿವಾನಂದ್ ಅಲಿಯಾಸ್ ದಿಲೀಪ್ ಕೊಲೆಗೈದ ಆರೋಪಿ. ಈ ಘಟನೆ ಎರಡು ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪತಿ ಶಿವಾನಂದ್ ಅಲಿಯಾಸ್ ದಿಲೀಪ್ ಮೂಲತಃ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಣಿಪುರ ಗ್ರಾಮದವನಾಗಿದ್ದು, ಕೊಲೆಯಾದ ಕಾವ್ಯ ಹೊಳೆನರಸೀಪುರ ತಾಲೂಕು ಮಾವಿನಕೆರೆ ಗ್ರಾಮದವರಾಗಿದ್ದಳು. ಇವರಿಬ್ಬರು ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇತ್ತೀಚೆಗೆ ಮನೆಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಪತಿ ವಿಪರೀತವಾಗಿ ಮದ್ಯಪಾನ ಮಾಡುತ್ತಿದ್ದ. ಇದರಿಂದ ಇಬ್ಬರ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿದೆ. ಪತಿ ಕುಡಿದ ಅಮಲಿನಲ್ಲಿ ಮನೆಯ ಬಾತ್ ರೂಮ್ನಲ್ಲಿ ಪತ್ನಿಯನ್ನು ಕೊಲೆ ಮಾಡಿ ನಂತರ ಪೆಟ್ರೋಲ್ ಸುರಿದು ಸುಟ್ಟಿದ್ದಾನೆ. ಕಾವ್ಯ ಫೋನ್ ತೆಗೆಯದ ಹಿನ್ನೆಲೆ ಮನೆಯವರು ಬಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಕಾವ್ಯಾ ಪೋಷಕರ ದೂರಿನನ್ವಯ ಆರೋಪಿ ಪತಿ ಪತಿ ಶಿವಾನಂದ್ನನ್ನು ಡಾಬಸ್ ಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಹೆಚ್ಚಾದ ರೋಡ್ ರೇಜ್ ಪ್ರಕರಣ – ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಅಟ್ಟಹಾಸ..!