ಬೆಂಗಳೂರು : MP, MLA ಹೆಸರು ಹೇಳಿ ಸಿನಿಮಾ ಸ್ಟೈಲ್ನಲ್ಲೇ ಯುವಕನೊಬ್ಬನನ್ನು ಜೂನ್ 16ರಂದು MG ರೋಡ್ನಲ್ಲಿ ಕಿಡ್ನ್ಯಾಪ್ ಮಾಡಿದ್ದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆಂಧ್ರ ಮೂಲದ ಕಿಡ್ನ್ಯಾಪರ್ಸ್ ಗ್ಯಾಂಗ್ ಶೋಕಿ ಜೀವನಕ್ಕಾಗಿ ರಾಜು ಎಂಬಾತನನ್ನು ಕಿಡ್ನ್ಯಾಪ್ ಮಾಡಿತ್ತು.
ಕಿಡ್ನ್ಯಾಪ್ ಆಗಿದ್ದ ರಾಜು ಸ್ಟಾಕ್ ಮಾರ್ಕೆಟ್ನಲ್ಲಿ ಇನ್ವೆಸ್ಟ್ ಮಾಡೋ ಕೆಲಸದಲ್ಲಿದ್ದನು. ದುಬೈ ಲೈಫು, ಐಷಾರಾಮಿ ಕಾರು, ಪಾಶ್ ಲೈಫ್ ಲೀಡಿಂಗ್ ಮಾಡ್ತಿದ್ದ ರಾಜು ಫೇಮಸ್ ಕ್ರಿಕೆಟರ್ಗಳ ಜೊತೆ ಫೋಟೋ ತೆಗೆದುಕೊಂಡಿದ್ದನು.
ಕಿಡ್ನ್ಯಾಪರ್ಸ್ ಗ್ಯಾಂಗ್ ರಾಜುನನ್ನು ದೊಡ್ಡ ಕುಳ ಇರಬಹುದು ಎಂದು ಜೂನ್ 16ರಂದು MG ರೋಡ್ನಲ್ಲಿ ಕಿಡ್ನ್ಯಾಪ್ ಮಾಡಿತ್ತು. ಕಿಡ್ನ್ಯಾಪ್ ಮಾಡಿದ ಬಳಿಕ ರಾಜುನನ್ನು ತೆಲಂಗಾಣಕ್ಕೆ ಕರೆದೊಯ್ದು, ಅಕೌಂಟ್ನಲ್ಲಿರೋ ಹಣ ಟ್ರಾನ್ಸ್ಫರ್ ಮಾಡುವಂತೆ ಹಲ್ಲೆ ಮಾಡಿದ್ದರು.
ಇನ್ನು ರಾಜು ಕಿಡ್ನ್ಯಾಪ್ ಆಗಿರುವ ಬಗ್ಗೆ ಆತನ ಸ್ನೇಹಿತ ಹಲಸೂರು ಠಾಣೆಗೆ ದೂರು ನೀಡಿದ್ದನು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ಇಡೀ ತಂಡಕ್ಕಾಗಿ ಹುಡುಕಾಟ ಮುಂದುವರಿಸಿದ್ದಾರೆ.
ಇದನ್ನೂ ಓದಿ : ವಿಶ್ವಕಪ್ ಗೆಲ್ಲಿಸಿಕೊಟ್ಟು ಹೆಡ್ಕೋಚ್ ಇನ್ನಿಂಗ್ಸ್ಗೆ ವಿದಾಯ ಹೇಳಿದ ಕನ್ನಡದ ಕಣ್ಮಣಿ ರಾಹುಲ್ ದ್ರಾವಿಡ್..!