ಬೆಂಗಳೂರು : ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಡುರಸ್ತೆಯಲ್ಲೇ ಕಾರು ಹೊತ್ತಿ ಉರಿದ ಘಟನೆ ವೈಟ್ ಫೀಲ್ಡ್ನಲ್ಲಿ ನಡೆದಿದೆ. ಮಾಹಿತಿ ಪ್ರಕಾರ ಮೊದಲಿಗೆ ಕಾರಿನ ಬ್ಯಾಟರಿಯಲ್ಲಿ ಸ್ಪಾರ್ಕ್ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಎಂಜಿನ್ಗೂ ಬೆಂಕಿ ತಗುಲಿ ಕ್ಷಣಮಾತ್ರದಲ್ಲಿ ಪೂರ್ತಿ ಕಾರಿಗೆ ಬೆಂಕಿ ವ್ಯಾಪಿಸಿದೆ.
ಕಾರಿನಲ್ಲಿ ಹೊಗೆ ಕಾಣಿಸಿಕೊಂಡ ವೇಳೆ ತಕ್ಷಣವೇ ಎಚ್ಚೆತ್ತ ಡ್ರೈವರ್ ಕಾರಿನಿಂದ ಕೆಳಗಿಳಿದಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ಸಂಜೆ 8.30 ರ ಸುಮಾರಿಗೆ ಕಾರು ಬೆಳತ್ತೂರು ಮತ್ತು ವೈಟ್ಫೀಲ್ಡ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮಾಹಿತಿ ತಿಳಿಯುತ್ತಿದ್ದಂತೇ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಮುಡಾ ಅಸ್ತ್ರ ಹಿಡಿದ ಬಿಜೆಪಿಗೆ ಬಿಗ್ ಶಾಕ್ - ಭೋವಿ ನಿಗಮದ ಮೇಲೆ CID ರೇಡ್.. ಮಹತ್ವದ ದಾಖಲೆ ವಶಕ್ಕೆ..!