ಬೆಂಗಳೂರು : ಕಾಲ್ ಸೆಂಟರ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಇಬ್ಬರನ್ನು ಹುಳಿಮಾವು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹುಳಿಮಾವು ಬಸ್ ನಿಲ್ದಾಣದ ಬಳಿ ಈ ಗ್ಯಾಂಗ್ ಕಚೇರಿ ಮಾಡಿಕೊಂಡಿತ್ತು. ಫೀನಿಕ್ಸ್ ಇಂಟೀರಿಯರ್ಸ್ ಎಂದು ಹೊರಗೆ ಬೋರ್ಡ್ ಹಾಕಿಕೊಂಡು ಒಳಗಡೆ ಸೈಬರ್ ವಂಚನೆ ಮಾಡ್ತಿದ್ದರು. ನಿನ್ನೆ ಹುಳಿಮಾವು ಪೊಲೀಸರು ಅನಧಿಕೃತ ಕಾಲ್ ಸೆಂಟರ್ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಕಿಂಗ್ಪಿನ್ ಜಿತೇಂದ್ರ ಕುಮಾರ್, ಚಂದನ್ ಕುಮಾರ್ ಬಂಧಿತ ಆರೋಪಿಗಳು.
ಕಳೆದ ನಾಲ್ಕು ತಿಂಗಳಿನಿಂದ ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಈ ಕಿಲಾಡಿಗಳು, ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು. ಸಾವಿರಾರು ಫೋನ್ ನಂಬರ್ಗಳ ಲಿಸ್ಟ್ ಇಟ್ಟುಕೊಂಡಿದ್ದ ಗ್ಯಾಂಗ್, ಪೋನ್ ಮಾಡಿ ನಿಮ್ಮ ಕೆವೈಸಿ ಅಪ್ಟೇಡ್, ಒಟಿಪಿ ಲಿಂಕ್, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್ವರ್ಡ್ ಚೇಂಜ್,ಶೇರ್ ಮಾರ್ಕೇಟ್ನಲ್ಲಿ ಹಣ ಹೂಡಿಕೆ ಮಾಡಿದ್ರೆ ಡಬಲ್ ನೀಡೋದಾಗಿ ಹೇಳಿ ವಂಚನೆ ಮಾಡ್ತಿದ್ದರು.
ಗ್ರೂಪ್ ಕ್ರಿಯೆಟ್ ಮಾಡಿ ಲಕ್ಷಾಂತರ ರೂಪಾಯಿಯನ್ನು ಆಸಾಮಿಗಳು ಹಾಕಿಸಿಕೊಳ್ಳುತ್ತಿದ್ದರು. SMS, ಫೋನ್ ಕಾಲ್ಗಳ ಮೂಲಕ ಕೋಟಿ ಕೋಟಿ ವಂಚನೆಗಳನ್ನೂ ಈ ಗ್ಯಾಂಗ್ ಮಾಡಿದೆ. ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ – ಸಿದ್ದರಾಮಯ್ಯ ಸ್ಪಷ್ಟನೆ!