Download Our App

Follow us

Home » ಜಿಲ್ಲೆ » ಬಳ್ಳಾರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 23 ಲಕ್ಷ ನಗದು, 450 ಗ್ರಾಂ ಚಿನ್ನ, 13 ಕೆಜಿ ಬೆಳ್ಳಿ ಸೀಜ್..!

ಬಳ್ಳಾರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 23 ಲಕ್ಷ ನಗದು, 450 ಗ್ರಾಂ ಚಿನ್ನ, 13 ಕೆಜಿ ಬೆಳ್ಳಿ ಸೀಜ್..!

ಬಳ್ಳಾರಿ : ಲೋಕಸಭೆ ಚುನಾವಣೆ ಹಿನ್ನಲೆ ರಾಜ್ಯದಲ್ಲಿ ಹದ್ದಿನ ಕಣ್ಣಿಟ್ಟಿರುವ ಚುನಾವಣೆ ಅಧಿಕಾರಿಗಳು ಈಗಾಗಲೇ ಹಲವೆಡೆ ದಾಳಿ ನಡೆಸಿ ದಾಖಲೆಯಿಲ್ಲದ ಕೋಟಿ, ಕೋಟಿ ನಗದು, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಇದೀಗ ಬಳ್ಳಾರಿಯಲ್ಲಿ ಝಣ,ಝಣ ಕಾಂಚಾಣ ಸದ್ದಿನ ಬೆನ್ನತ್ತಿದ್ದ ಅಧಿಕಾರಿಗಳು ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ  23 ಲಕ್ಷ ನಗದು, 450 ಗ್ರಾಂ ಚಿನ್ನ, 13 ಕೆ.ಜಿ. ಬೆಳ್ಳಿ ಜಪ್ತಿ ಮಾಡಿದ್ದಾರೆ.

ಬಳ್ಳಾರಿಯ ಬ್ರೂಸ್ ಪೇಟೆ ಬಳಿ ಪೊಲೀಸರು ಭರ್ಜರಿ ದಾಳಿ ನಡೆಸಿದ ವೇಳೆ,  ಕಂಬಳಿ ಬಜಾರ್​​ನ ಕಮಲೇಶ್ ಜೈನ್ ಮನೆಯಲ್ಲಿ  23 ಲಕ್ಷ ನಗದು, 450 ಗ್ರಾಂ ಚಿನ್ನ ಹಾಗೂ  13 ಕೆಜಿ ಬೆಳ್ಳಿ ಪತ್ತೆಯಾಗಿದೆ. ಕಮಲೇಶ್ ಚುನ್ನಿಲಾಲ್ ರಾಕೇಶ್ ಕುಮಾರ್ ಷಾ ಜ್ಯೂವೆಲರ್ಸ್ ಮಾಲೀಕನಾಗಿದ್ದು, ಈತನ ಬಳಿ ಪೊಲೀಸರು 23 ಲಕ್ಷ ನಗದಿಗೆ ಸಂಬಂಧಿಸಿದ ದಾಖಲೆ ಕೇಳಿದ್ದಾರೆ.

ಇನ್ನು ಎಲೆಕ್ಷನ್​​ ಉದ್ದೇಶಕ್ಕೆ ಬಳಸಬಹುದೆಂಬ ಶಂಕೆ ಮೇಲೆ ಪೊಲೀಸರು ಹಣವನ್ನು ವಶಕ್ಕೆ ಪಡೆದು, ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಬಳ್ಳಾರಿ ಜಿಲ್ಲಾ ಎಸ್​ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಕೇಂದ್ರದ ವಿರುದ್ಧ ದಿನಕ್ಕೊಂದು ಪ್ರೊಟೆಸ್ಟ್ ​- ಇಂದು ಕಾಂಗ್ರೆಸ್​ ಕಿಸಾನ್​​ ಘಟಕದ ಮುಖಂಡರು, ಕಾರ್ಯಕರ್ತರಿಂದ ಪ್ರಟಿಭಟನೆ..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here