ಬೆಳಗಾವಿ : ಬೆಳಗಾವಿ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಸುಲೆನ್ ಟೇಪ್ ಉತ್ಪಾದನೆಯ ಸ್ನೇಹಂ ಕಾರ್ಖಾನೆಯಲ್ಲಿ ನಿನ್ನೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸ್ನೇಹಂ ಕಾರ್ಖಾನೆಯ ಲಿಫ್ಟ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಗೆ ಇಡೀ ಕಾರ್ಖಾನೆಯೇ ಭಸ್ಮವಾಗಿದೆ. ಈ ಬೆಂಕಿ ದುರಂತಕ್ಕೆ ಇದೀಗ ಒಂದು ಬಲಿಯಾಗಿದೆ.
ಗಾಯಗೊಂಡಿದ್ದವರ ಪೈಕಿ ಯಲ್ಲಪ್ಪ ಗುಂಡ್ಯಾಗೋಳ ಸಾವನ್ನಪ್ಪಿದ್ದು, ಕವಳವಾಡಿಯ ಮಾರುತಿ ಕರವೇಕರ, ರಂಜಿತ್ ಪಾಟೀಲ ಗಂಭೀರವಾಗಿದ್ದಾರೆ. ಸ್ನೇಹಂ ಟಿಕ್ಸೊ ಟೇಪ್ ಕಾರ್ಖಾನೆ 300ಕ್ಕೂ ಹೆಚ್ಚು ಕಾರ್ಮಿಕರ ಹೊಂದಿದ್ದು, ಅಗ್ನಿ ದುರಂತದ ಬೆನ್ನಲ್ಲೇ ಕಾರ್ಖಾನೆ ಮಾಲೀಕ ಅನೀಶ ಮೇತ್ರಾಣಿ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
1994ರಲ್ಲಿ ಆರಂಭವಾಗಿದ್ದ ಕಾರ್ಖಾನೆ 35 ದೇಶಗಳಿಗೆ ಟೇಪ್ ರಫ್ತು ಮಾಡ್ತಿತ್ತು. ಈ ಬೃಹತ್ ಕಾರ್ಖಾನೆ ನಾವಗೆ ಗ್ರಾಮದ ಹೊರವಲಯದಲ್ಲಿದ್ದು, ಕೈಗಾರಿಕಾ ಇಲಾಖೆ ಅಧಿಕಾರಿಗಳಿಂದ ಕಾರ್ಖಾನೆ ಬಗ್ಗೆ ಮಾಹಿತಿ ಸಂಗ್ರಹವಾಗಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್ – ಇದೇ ವಾರ ಪೊಲೀಸರ ಕೈಸೇರಲಿದೆ FSL ರಿಪೋರ್ಟ್..!