ಬೆಂಗಳೂರು : ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಸದ್ದು ಮಾಡುತ್ತಿದ್ದು, ಈ ವಿವಾದದ ಮಧ್ಯೆ ರಾಜ್ಯ ಸರ್ಕಾರ ಶೃಂಗೇರಿ ಮಠವನ್ನು ಟಾರ್ಗೆಟ್ ಮಾಡಿದೆ. ನವೆಂಬರ್ 11ರಂದು ಬೆಂಗಳೂರಿನಲ್ಲಿರುವ ಶೃಂಗೇರಿ ಮಠದ ಜ್ಞಾನೋದಯ ಕಾಲೇಜನ್ನು ಕೆಡವಲು ಸರ್ಕಾರ ಮುಂದಾಗಿದೆ.
ಶೃಂಗೇರಿ ಮಠದ ಕಟ್ಟಡ ಡೆಮಾಲಿಷನ್ಗೆ BBMP ಆದೇಶ ಹೊರಡಿಸಿದ್ದು, ಮಠದ ಕಟ್ಟಡ ಡಮಾಲಿಷ್ ಮಾಡಲು ಸರ್ಕಾರದಿಂದ್ಲೇ ಭದ್ರತೆ ನೀಡಲಾಗಿದೆ. ಬಿಗಿ ಬಂದೋಬಸ್ತ್ ಏರ್ಪಡಿಸುವಂತೆ ಪೊಲೀಸರಿಗೆ BBMP ಪತ್ರ ಬರೆದಿದೆ.
ದೇಶಾದ್ಯಂತ ಶಿಕ್ಷಣ ಕ್ರಾಂತಿಯಲ್ಲಿ ಭಾಗವಾಗಿರೋ ಶೃಂಗೇರಿ ಮಠ ಅಕ್ಕಿಕಾಳಿನ ಅಕ್ಷರಾಭ್ಯಾಸದಿಂದ ಹಿಡಿದು ಉನ್ನತ ಪದವಿವರೆಗೆ ಶಿಕ್ಷಣ ನೀಡುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿ ಕೊಟ್ಟಿರೋ ಶೃಂಗೇರಿ ಮಠದ ಕಾಲೇಜು ಕಟ್ಟಡವನ್ನು ಕೆಡವಿ ಹಾಕಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಾರ್ವಜನಿಕರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಶೃಂಗೇರಿಯ ಶಾರದ ಮಠದ ಅಧೀನದಲ್ಲಿ ನಡೆಯುತ್ತಿರೋ ಜ್ಞಾನೋದಯ ಕಾಲೇಜಿನ ಕಟ್ಟಡಕ್ಕೆ ಡೆಮಾಲಿಷನ್ ಆದೇಶ ಕೊಟ್ಟಿರೋದಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಅಸಮಾಧಾನ ವ್ಯಕ್ತವಾಗಿದ್ದು, ಚಾಮರಾಜಪೇಟೆಯ ಸುತ್ತಮುತ್ತ ನೂರಾರು ಅನಧಿಕೃತ ಕಟ್ಟಡ ಇದೆ. ಆದ್ರೆ ಅದನ್ನೆಲ್ಲ ಕೈಹಾಕುವ ಧೈರ್ಯ ಮಾಡದ ಸರ್ಕಾರ ಹಾಗೂ ಪಾಲಿಕೆ, ಮಠದ ಅಧೀನದಲ್ಲಿರೋ ಶಿಕ್ಷಣ ಕೇಂದ್ರದ ಮೇಲೆ ಕಣ್ಣಿಟ್ಟಿರುವುದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಒಂದೇ ಒಂದು ಅಕ್ರಮ ಕಟ್ಟಡ ಇಲ್ವಾ? ಯಾವ ಕಟ್ಟಡವನ್ನು ಮುಟ್ಟದೆ ಮಠಕ್ಕೆ ಕೈಹಾಕಿದ್ಯಾಕೆ? ಪರಭಾಷಿಕರ ಕಾಲೇಜು ಬಿಟ್ಟು ಮಠದ ಕಾಲೇಜು ತೆರವು ಯಾಕೆ? ಅಕ್ರಮ ಕಮರ್ಷಿಯಲ್ ಬಿಲ್ಡಿಂಗ್ ಬಿಟ್ಟು ಪಾಠ ಮಾಡೋ ಕಟ್ಟಡ ಯಾಕೆ? ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ : ಮುಡಾ ಕೇಸ್ – ಮಾಜಿ ಅಧ್ಯಕ್ಷ ಮರೀಗೌಡ ಸೇರಿ 7 ಮಂದಿಗೆ ED ನೋಟಿಸ್ ಜಾರಿ..!