ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣ ತನಿಖೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಪ್ರಕರಣ ಸಂಬಂಧ ಈಗಾಗಲೇ ಈ ಇಲಾಖೆಯ ಸಚಿವರಾಗಿದ್ದ ಶಾಸಕ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಇದರ ಮಧ್ಯ ರಾಯಚೂರು ಗ್ರಾಮೀಣ ಶಾಸಕ, ವಾಲ್ಮೀಕಿ ನಿಗಮದ ಅಧ್ಯಕ್ಷರೂ ಆಗಿರೋ ಬಸನಗೌಡ ದದ್ದಲ್ ನಿವಾಸಗಳ ಮೇಲೂ ಇಡಿ ದಾಳಿಯಾಗಿದ್ದು, ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದೆ. ಹೀಗಾಗಿ ನಿಗಮದ ಅಧ್ಯಕ್ಷರಾಗಿರುವ ದದ್ದಲ್ಗೂ ಬಂಧನದ ಭೀತಿ ಶುರುವಾಗಿದೆ. ED ಅಧಿಕಾರಿಗಳು ದದ್ದಲ್ ಬಂಧನಕ್ಕೆ ಹುಡುಕಾಡ್ತಿದ್ದಾರೆ.
ಇದೀಗ ನಾಪತ್ತೆಯಾಗಿದ್ದ ದದ್ದಲ್ ವಿಧಾನಸೌಧದಲ್ಲಿ ಪ್ರತ್ಯಕ್ಷರಾಗಿದ್ದಾರೆ. ನಾನು ವಿಧಾನಸಭೆ ಕಲಾಪಕ್ಕೆ ಬಂದಿದ್ದೇನೆ, ನನಗೆ ಯಾವುದೇ ED ನೋಟೀಸ್ ಬಂದಿಲ್ಲಾ ಎಂದು ಬಸನಗೌಡ ದದ್ಧಲ್ ಹೇಳಿದ್ದಾರೆ.
ಇದನ್ನೂ ಓದಿ : ಯಾರಗ್ತಾರೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ?
Post Views: 78