Download Our App

Follow us

Home » ಅಪರಾಧ » ಬೆಂಗಳೂರಿನಲ್ಲಿ ಯುವತಿಯ ಬರ್ಬರ ಹತ್ಯೆ – ಲೇಡಿಸ್ ಪಿಜಿಯೊಳಗೆ ನುಗ್ಗಿ ಕತ್ತು ಕೊಯ್ದು ಹಂತಕ ಎಸ್ಕೇಪ್..!

ಬೆಂಗಳೂರಿನಲ್ಲಿ ಯುವತಿಯ ಬರ್ಬರ ಹತ್ಯೆ – ಲೇಡಿಸ್ ಪಿಜಿಯೊಳಗೆ ನುಗ್ಗಿ ಕತ್ತು ಕೊಯ್ದು ಹಂತಕ ಎಸ್ಕೇಪ್..!

ಬೆಂಗಳೂರು : ಲೇಡೀಸ್​ ಪಿಜಿಗೆ ನುಗ್ಗಿ ಯುವತಿಯೊಬ್ಬಳ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಮೃತ ಯುವತಿಯನ್ನ ಬಿಹಾರ ಮೂಲದ ಕೃತಿ ಕುಮಾರಿ‌ ಎಂದು ಗುರುತಿಸಲಾಗಿದೆ.

ಕೋರಮಂಗಲದ ವಿಆರ್ ಲೇಔಟ್​ನಲ್ಲಿರೋ ಪಿಜಿಯಲ್ಲಿ ರಾತ್ರಿ 11.10 ರಿಂದ 11.30 ಸುಮಾರಿಗೆ ಕೃತ್ಯ ನಡೆದಿದೆ. ಚಾಕುವಿನ ಜೊತೆಗೆ ಆಗಮಿಸಿದ್ದ ಯುವಕ, ಮೂರನೇ ಮಹಡಿಯಲ್ಲಿರುವ ರೂಂ ಸಮೀಪ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೃತಿ ಕುಮಾರಿ‌ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಕೋರಮಂಗಲದ ಬಳಿ ಪಿಜಿಯಲ್ಲಿ ವಾಸವಿದ್ದಳು.

ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು, ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಯುವಕನ ಪತ್ತೆ ಹಚ್ಚುವ ಕಾರ್ಯ ಆರಂಭಗೊಂಡಿದೆ. ಪರಿಚಯಸ್ಥ ಯುವಕನೇ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಲೈಸೆನ್ಸ್​ ಇಲ್ಲದೇ ಹೋಟೆಲ್​ ಹೆಸ್ರಲ್ಲಿ ಎಣ್ಣೆ ಸಪ್ಲೈ – ಅಬಕಾರಿ ಇನ್ಸ್​ಪೆಕ್ಟರ್ ರವೀಶ್​ ವಿರುದ್ದ ದೂರು ದಾಖಲು..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here