ಬೆಂಗಳೂರು : ವಾಲ್ಮೀಕಿ ನಿಗಮ ಹಗರಣ ಪ್ರಕರಣ ಸಂಬಂಧ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ನಿನ್ನೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಎರಡು ವಾರದಿಂದ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಮೂರು ತನಿಖಾ ಸಂಸ್ಥೆಗಳು ಬ್ಯಾಂಕ್ ಅಧಿಕಾರಿಗಳನ್ನು ಬೆನ್ನತ್ತಿದ್ದು, ನಾಗೇಂದ್ರ, ದದ್ದಲ್ ನಂತರ ಬ್ಯಾಂಕ್ ಅಧಿಕಾರಿಗಳಿಗೆ ಶೋಧ ನಡೆಯುತ್ತಿದೆ.
ಬ್ಯಾಂಕ್ ಅಧಿಕಾರಿಗಳಿಗಾಗಿ SIT, ED, CBI ತನಿಖಾ ತಂಡಗಳ ಶೋಧ ನಡೆಸುತ್ತಿದ್ದು, ಈಗಾಗಲೇ ಬ್ಯಾಂಕ್ನ ಆರು ಮಂದಿ ಮೇಲೆ ಕೇಸ್ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ 6 ಅಧಿಕಾರಿಗಳು ತಲೆಮರೆಸಿಕೊಂಡಿದ್ದಾರೆ. ಬ್ಯಾಂಕ್ ಅಧಿಕಾರಿಗಳಿಗಾಗಿ SIT ಕೋರ್ಟ್ಗೆ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದು, 6 ಮಂದಿ ಬ್ಯಾಂಕ್ ಅಧಿಕಾರಿಗಳ ಮೇಲೆ ತನಿಖಾ ತಂಡಗಳು ಕಣ್ಣೀಟ್ಟಿದೆ. ತನಿಖಾ ತಂಡ ಬ್ಯಾಂಕ್ ಅಧಿಕಾರಿಗಳ ಮನೆ ಅಡ್ರೆಸ್ ಹುಡುಕಿಕೊಂಡು ಹೋಗಿತ್ತು, ಆದರೆ ಅವರು ಮನೆ ಬಿಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆ.
ಹಾಗಾಗಿ ತನಿಖಾಧಿಕಾರಿಗಳು ಬ್ಯಾಂಕ್ ಅಧಿಕಾರಿಗಳ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ನಿಗಮದ ಅಕೌಂಟ್ನಿಂದ ಬೇರೆ ಅಕೌಂಟ್ಗಳಿಗೆ ಹಣ ವರ್ಗಾವಣೆಯಾಗಿದ್ದು, ಬ್ಯಾಂಕ್ ಅಧಿಕಾರಿಗಳ ವಿಚಾರಣೆ ಮಾಡಿದ್ರೆ ಇನ್ನಷ್ಟು ಮಾಹಿತಿ ಬಹಿರಂಗವಾಗಲಿದೆ. ನಿಮಗದ ಬ್ಯಾಂಕ್ ಅಕೌಂಟ್ನಿಂದ ಹಣ ವರ್ಗಾಯಿಸಲು ಸೂಚಿಸಿದ್ದು ಯಾರು..? ಮೌಖಿಕ ಆದೇಶ ಕೊಟ್ಟವರು ಯಾರು..? ನಿಗಮದ MDಯೋ..? ಇತರರೋ..? ಕೋಟಿ ಕೋಟಿ RTGS ಮಾಡಲು ಅಧಿಕೃತ ಮಾಹಿತಿ ಕೊಟ್ಟಿದ್ಯಾರು..? ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಹಾಗಾಗಿ ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳ ಶಾಮೀಲಿನ ಬಗ್ಗೆ 3 ಸಂಸ್ಥೆಗಳ ತಂಡ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ : ಹೆಣ್ಮಕ್ಳೇ ಹುಷಾರ್.. ಹಾದಿ ಬೀದಿಲಿ ಸಿಗೋ ಬ್ಯೂಟಿ ಪ್ರಾಡಕ್ಟ್ಸ್ನಿಂದ ಸ್ಕಿನ್ ಕ್ಯಾನ್ಸರ್ ಬರೋ ಸಾಧ್ಯತೆ…!