Download Our App

Follow us

Home » ಅಪರಾಧ » ಆಧಾರ್ ಕಾರ್ಡ್ ಮತ್ತು ಫಿಂಗರ್ ಪ್ರಿಂಟ್ ಬಳಸಿ ಬ್ಯಾಂಕ್​ನಲ್ಲಿದ್ದ ಹಣ ವಂಚನೆ ಕೇಸ್ : ಆರೋಪಿಗಳು ಅರೆಸ್ಟ್..!

ಆಧಾರ್ ಕಾರ್ಡ್ ಮತ್ತು ಫಿಂಗರ್ ಪ್ರಿಂಟ್ ಬಳಸಿ ಬ್ಯಾಂಕ್​ನಲ್ಲಿದ್ದ ಹಣ ವಂಚನೆ ಕೇಸ್ : ಆರೋಪಿಗಳು ಅರೆಸ್ಟ್..!

ಬೆಂಗಳೂರು : ಆಧಾರ್ ಕಾರ್ಡ್ ಮತ್ತು ಫಿಂಗರ್ ಪ್ರಿಂಟ್ ಬಳಸಿ ಬ್ಯಾಂಕ್​ನಲ್ಲಿದ್ದ ಹಣ ವಂಚಿಸಿದ್ದಾರೆ. AEPS (adhar enable payment system) ಬಳಸಿ ವಂಚನೆ ಮಾಡಲಾಗ್ತಿತ್ತು. ನಗರದಲ್ಲಿ ಈ ರೀತಿ ಒಟ್ಟು 120ಕ್ಕು ಹೆಚ್ಚು ಕೇಸ್ ದಾಖಲಾಗಿತ್ತು.


ಎಸ್​​ಐಟಿ ರಚನೆ ಮಾಡಿ ಪ್ರಕರಣದ ತನಿಖೆ ನಡೆಸುವಂತೆ ಕಮಿಷನರ್ ಸೂಚಿಸಿದ್ದರು. ನಾರ್ತ್ ಈಸ್ಟ್ ಡಿಸಿಪಿ ಲಕ್ಷ್ಮೀ ಪ್ರಸಾದ್ ನೇತ್ರತ್ವದಲ್ಲಿ ತನಿಖೆ ನಡೆದಿತ್ತು. ಈ ವೇಳೆ ಬಿಹಾರ ಮೂಲದ ರುಹಮಾನ್, ಅಬುಜರ್, ಆರೀಫ್, ನಾಶೀರ್ ಅಹಮದ್ ಅರೆಸ್ಟ್ ಆಗಿದ್ದಾರೆ. ಬಂಧಿತ ಅರೋಪಿಗಳು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ವೆಬ್ ಸೈಟ್ ನಿಂದ ಮಾಹಿತಿ ಪಡೆಯುತ್ತಿದ್ರು.

ಆಧಾರ್ ನಂಬರ್ ಮತ್ತು ಫಿಂಗರ್ ಪ್ರಿಂಟ್​ನ್ನು ಸೇಲ್ ಡೀಡ್ ಸೇರಿ ಇತರ ದಾಖಲಾತಿಗಳ ಮೂಲಕ ಪಡೆದುಕೊಳ್ತಿದ್ರು. ಬಳಿಕ AEPS ವ್ಯವಸ್ಥೆ ಬಳಸಿ ಹಣ ವಿತ್ ಡ್ರಾ ಮಾಡ್ತಿದ್ರು. ಹೀಗೆಯೇ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ಸೇರಿ ಹಲವಾರು ರಾಜ್ಯದ ಜನರಿಗೆ ವಂಚನೆ ಮಾಡಿದ್ದಾರೆ.

ಸದ್ಯ ಪೊಲೀಸರು ಕಂದಾಯ ಇಲಾಖೆಗೆ ಪತ್ರ ಬರೆದಿದ್ದು, ಸಾರ್ವಜನಿಕವಾಗಿ ಫಿಂಗರ್ ಪ್ರಿಂಟ್ ಮತ್ತು ಆಧಾರ್ ನಂಬರ್ ಸಿಗದಂತೆ ಮಾಡಲು ಸೂಚಿಸಲಾಗಿತ್ತು. ಈಗ ಕಂದಾಯ ಇಲಾಖೆ ಅಧಿಕಾರಿಗಳು ದಾಖಲಾತಿಗಳು ಸಿಗದಂತೆ ಮಾಡುತ್ತಿದ್ದಾರೆ.

ಸದ್ಯ ಈಶಾನ್ಯ ವಿಭಾಗದ ಡಿಸಿಪಿ ನೇತ್ರತ್ವದಲ್ಲಿ ತನಿಖೆ ಮುಂದುವರೆದಿದೆ. ಆರೋಪಿಗಳು ದಾಖಲಾತಿಗಳನ್ನು ವೆಬ್ ಸೈಟ್ ನಿಂದ ಪಡೆದು ಐದು ಸಾವಿರಕ್ಕೆ ಮಾರಾಟ ಮಾಡಿರುವುದು ಸಹ ತನಿಖೆ ವೇಳೆ ಪತ್ತೆಯಾಗಿದೆ.

ಇದನ್ನೂ ಓದಿ : ಮೆಜೆಸ್ಟಿಕ್​​ನಲ್ಲಿ KSRTC ಬಸ್​ ಮೇಲೆ ಪುಂಡರ ದಾಳಿ : 2 KSRTC ಬಸ್​ಗಳ ಗ್ಲಾಸ್​ ಪುಡಿಪುಡಿ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here